ಮುಡಾ ಕೇಸ್ | ಸಿಎಂ ಪತ್ನಿ ವಿಚಾರಣೆ ರದ್ದು – ನಿಮ್ಮನ್ಯಾಕೆ ರಾಜಕೀಯಕ್ಕೆ ಬಳಕೆ ಮಾಡ್ತಾರೆ?: ಇ.ಡಿಗೆ ಸುಪ್ರೀಂ ಛೀಮಾರಿ

Public TV
1 Min Read
parvathi siddaramaiah siddaramaiah
  • ಬೈರತಿ ಸುರೇಶ್ ವಿರುದ್ಧದ ಪ್ರಕರಣ ರದ್ದು

ನವದೆಹಲಿ: ಮುಡಾ ಕೇಸ್‍ನಲ್ಲಿ (MUDA case) ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಅವರ ಪತ್ನಿ ಪಾರ್ವತಿಯವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಇ.ಡಿ ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು, ಸಿಎಂ ಪತ್ನಿ ವಿರುದ್ಧದ ಮುಡಾ ಪ್ರಕರಣದ ವಿಚಾರಣೆ ರದ್ದಾಗಿದೆ. ಇದನ್ನೂ ಓದಿ: ಮಡಾ ಕೇಸ್‌| ಸಿಎಂ ಪತ್ನಿ, ಬೈರತಿಗೆ ಸುರೇಶ್‌ಗೆ ಬಿಗ್‌ ರಿಲೀಫ್‌ – ಇಡಿ ತನಿಖೆಯೇ ರದ್ದು

ಇ.ಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಬಿ.ಆರ್ ಗವಾಯಿ ನೇತೃತ್ವದ ಪೀಠ, ಇ.ಡಿಯನ್ನು ಟೀಕಿಸಿದೆ. ಮತದಾರರ ಮುಂದೆ ರಾಜಕೀಯ ನಡೆಯಲಿ. ಇದರಲ್ಲಿ ನಿಮ್ಮನ್ನು ಯಾಕೆ ಬಳಸಿಕೊಳ್ಳಲಾಗುತ್ತಿದೆ. ದಯವಿಟ್ಟು ನಮ್ಮನ್ನು ಬಾಯಿ ತೆರೆಯಲು ಬಿಡಬೇಡಿ. ಇಲ್ಲದಿದ್ದರೆ ನಾವು ಕೆಲವು ಕಠಿಣ ಟೀಕೆಗಳನ್ನು ಮಾಡಬೇಕಾಗಬಹುದು ಎಂದು ಇ.ಡಿ ಕಾರ್ಯವೈಖರಿಗೆ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‍ಗೆ ಇ.ಡಿ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಇನ್ನೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿರುದ್ಧವೂ ಹೂಡಲಾದ ಹಣ ವರ್ಗಾವಣೆ ಪ್ರಕರಣವನ್ನು ನ್ಯಾಯಾಲಯ ರದ್ದು ಪಡಿಸಿದೆ. ಇದನ್ನೂ ಓದಿ: ಸಿಎಂ ಪತ್ನಿಗೆ ಇಡಿ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ – ಡಿಕೆಶಿ

Share This Article