ಚಪ್ಪಲಿ ತೆಗೆದುಕೊಳ್ಳಲು ಹೋಗಿ ಆಯತಪ್ಪಿ ನದಿಗೆ ಬಿದ್ದು ಕೊಚ್ಚಿ ಹೋದ ಯುವಕ

Public TV
1 Min Read
man river

ಭೋಪಾಲ್: ಚಪ್ಪಲಿ ಹೊರತೆಗೆಯಲು ಹೋಗಿ ಆಯತಪ್ಪಿ ಬಿದ್ದು ಉಕ್ಕಿ ಹರಿಯುವ ನದಿಯಲ್ಲಿ ಯುವಕ ಕೊಚ್ಚಿ ಹೋದ ದಾರುಣ ಘಟನೆ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ನಡೆದಿದೆ.

ಮೃತ ಯುವಕ ಆಯುಷ್ (20) ತನ್ನ ಐವರು ಸ್ನೇಹಿತರೊಂದಿಗೆ ಪರೇವಾ ಖೋಹ್ ಎಂಬ ಜನಪ್ರಿಯ ಸ್ಥಳಕ್ಕೆ ಪಿಕ್ನಿಕ್‌ಗೆ ಹೋಗಿದ್ದ. ವಿಹಾರದ ಸಮಯದಲ್ಲಿ, ಆತನ ಒಂದು ಚಪ್ಪಲಿ ನದಿಗೆ ಬಿದ್ದಿತು. ಅದನ್ನು ಎತ್ತಿಕೊಳ್ಳಲು ಮರದ ಕೋಲನ್ನು ಬಳಸಿ ನೀರಿಗೆ ಕಾಲಿಟ್ಟಿದ್ದ.

ಚಪ್ಪಲಿ ನೀರಿನಲ್ಲಿ ತೇಲುತ್ತಾ ಹೋಗಿತ್ತು. ಆಯುಷ್ ಅದು ಕೊಚ್ಚಿಕೊಂಡು ಹೋಗುವುದನ್ನು ತಡೆಯಲು ಪ್ರಯತ್ನಿಸುತ್ತಾ ಮುಂದೆ ಧಾವಿಸಿದ್ದ. ಈ ವೇಳೆ ಆಯತಪ್ಪಿ ನದಿಗೆ ಬಿದ್ದಿದ್ದಾನೆ. ನದಿಯ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ.

20 ವರ್ಷದ ಆಯುಷ್ ತನ್ನ ಸ್ನೇಹಿತರೊಂದಿಗೆ ಪಿಕ್ನಿಕ್ ತಾಣ ಪರೇವಾ ಖೋಹ್‌ಗೆ ಹೋಗಿದ್ದ. ಅವನು ಜಾರಿಬಿದ್ದು ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಪೂಜಾ ಚೌಕ್ಸೆ ತಿಳಿಸಿದ್ದಾರೆ.

Share This Article