ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟ ಹುಲಿಸಂರಕ್ಷಿತಾರಣ್ಯದಲ್ಲಿ (BRT Tiger Reserve) ಪ್ರವಾಸಿಗರಿಗೆ ತಾಯಿ ಚಿರತೆ ಹಾಗೂ ಎರಡು ಮರಿ ಚಿರತೆಗಳ ದರ್ಶನವಾಗಿದೆ.
ಕೆ.ಗುಡಿ ವಲಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಚಿರತೆಗಳ ದರ್ಶನವಾಗಿದೆ. ಒಮ್ಮೆಲೆ ತಾಯಿ ಚಿರತೆ ಹಾಗೂ ಮರಿ ಚಿರತೆಗಳನ್ನು ಕಂಡ ಪ್ರವಾಸಿಗರು ಸಂತಸಗೊಂಡಿದ್ದಾರೆ.
ಚಿರತೆಗಳ ಓಡಾಟದ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಪ್ರವಾಸಿಗರು ಸೆರೆ ಹಿಡಿದಿದ್ದಾರೆ. ಸದ್ಯ ಮೂರು ಚಿರತೆಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತಿಚ್ಚಿನ ದಿನಗಳಲ್ಲಿ ಹುಲಿಗಳ ಬಳಿಕ ಚಿರತೆ ದರ್ಶನವೂ ಕೂಡ ಸಫಾರಿಗರಿಗೆ ಸಿಗುತ್ತಿದೆ.