ಮೈಸೂರಿನಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ – ಪ್ರತಿ ಕುರ್ಚಿಯಲ್ಲೂ ರಾರಾಜಿಸುತ್ತಿವೆ ಸಿಎಂ ಫೋಟೊಗಳು

Public TV
2 Min Read
sadhana samavesha mysuru

– ಸರ್ಕಾರದ ಸಾಧನಾ ಸಮಾವೇಶಕ್ಕೆ ವೇದಿಕೆ ಸಜ್ಜು

ಮೈಸೂರು: ಮೈಸೂರಿನಲ್ಲಿ (Mysuru) ಇಂದು ಸರ್ಕಾರದ ಸಾಧನಾ ಸಮಾವೇಶದ (Sadhana Samavesha) ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಶಕ್ತಿ ಪ್ರದರ್ಶನಕ್ಕೆ ವೇದಿಗೆ ಸಜ್ಜಾಗಿದೆ.

ಮಹಾರಾಜ ಕಾಲೇಜು ಆವರಣದಲ್ಲಿ 600 ಅಡಿ ಉದ್ದದ ವಿಶೇಷ ರ‍್ಯಾಂಪ್ ಸ್ಟೇಜ್ ಸಿದ್ಧವಾಗಿದ್ದು, ಸಭಾಂಗಣದ ಮಧ್ಯದಿಂದ ಸಿಎಂ ಎಂಟ್ರಿ ಕೊಡಲಿದ್ದಾರೆ. ಜನರತ್ತ ಕೈ ಬೀಸುತ್ತಾ ಮೈದಾನದ ಮಧ್ಯ ಭಾಗವೇ ವಾಕ್ ಮಾಡುತ್ತಾ ಸಿಎಂ ವೇದಿಕೆಗೆ ಬರಲಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – 2 ತಾಲೂಕುಗಳ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

Siddaramaiah 8

ಈ ಅದ್ಧೂರಿ ಸಮಾವೇಶಕ್ಕೆ ಬಿಜೆಪಿ ನಾಯಕರು ಲೇವಡಿ ಮಾಡುತ್ತಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರುವ ಸಿಎಂ ಸಿದ್ದರಾಮಯ್ಯ, ಸುಳ್ಳು ಅಪಪ್ರಚಾರ ಮಾಡುತ್ತಿರುವ ಬಿಜೆಪಿಗೆ ಉತ್ತರ ಕೊಡ್ತೇವೆ. ಇದು ಶಕ್ತಿ ಸಮಾವೇಶ ಅಲ್ಲ ಎಂದಿದ್ದಾರೆ.

ಸಮಾವೇಶಕ್ಕೆ ಹಾಕಿರುವ ಪ್ರತಿಯೊಂದು ಚೇರ್‌ನ ಮೇಲೆ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಇಡಲಾಗಿದೆ. ವೇದಿಕೆಯ ಎಡ ಮತ್ತು ಬಲ ಭಾಗದಲ್ಲಿ ಕುಳಿತುಕೊಳ್ಳುವ ಪ್ರತಿಯೊಂದ ಚೇರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಫೋಟೊ ಇಡಲಾಗಿದೆ. ಸಿಎಂ ವೇದಿಕೆಗೆ ಬರುತ್ತಿದಂತೆ ಫೋಟೊ ಎತ್ತಿ ಹಿಡಿದು ಸಿದ್ದರಾಮಯ್ಯ ಶಕ್ತಿ ತೋರಿಸುವ ಪ್ಲ್ಯಾನ್‌ ಇದು.

d.k.shivakumar

ಚೇರ್‌ನಲ್ಲಿ ಇಟ್ಟಿರುವ ಭಾವಚಿತ್ರದಲ್ಲಿ ಎಲ್ಲಿಯೂ ಡಿಸಿಎಂ ಡಿ.ಕೆ ಶಿವಕುಮಾರ್ ಫೋಟೊ ಇಲ್ಲ. ಸಾಧನ ಸಮಾವೇಶಕ್ಕೆ ಆಗಮಿಸುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರ ಫೋಟೊ ಇಲ್ಲ. ಕೇವಲ ಸಿಎಂ ಅವರ ಫೋಟೊ ಮಾತ್ರ ಇದೆ.

ಸಾಧನಾ ಸಮಾವೇಶಕ್ಕೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ವೇದಿಕೆ ಸಿದ್ಧಗೊಂಡಿದೆ. ಬೆಳಗ್ಗೆ 11 ಗಂಟೆಗೆ ಸಮಾವೇಶ ನಡೆಯಲಿದೆ. ಮೈಸೂರು ಜಿಲ್ಲೆಯ ವಿವಿಧ ಭಾಗಗಳಿಂದ ಸರ್ಕಾರದ ಫಲಾನುಭವಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸಮಾವೇಶಕ್ಕೆ ಆಗಮಿಸಲಿದ್ದಾರೆ. ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಮೈಸೂರು ನಗರ ವ್ಯಾಪ್ತಿಯ 2,658 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ಸಿಗಲಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಪ್ರವಾಸಿ ಬಸ್‌ ಪಲ್ಟಿ – 25 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಉಪಸ್ಥಿತರಿರಲಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ವಿಮಾನದಲ್ಲಿ ಕಾಂಗ್ರೆಸ್ ನಾಯಕರು ಆಗಮಿಸಲಿದ್ದಾರೆ.

Share This Article