ಫೋಟೋಶೂಟ್ ಮೂಡ್‌ನಲ್ಲಿ ಪವಿತ್ರಾ ಗೌಡ

Public TV
1 Min Read
Pavithra Gowda

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಇದೀಗ ಬ್ಯುಸಿನೆಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ನೂರಾರು ದಿನಗಳ ಕಾಲ ಜೈಲಿನಲ್ಲಿ ಇದ್ದು ಬಂದ ನಂತರ ಟೆಂಪಲ್ ರನ್ ಮಾಡಿದ್ದ ಪವಿತ್ರಾ ಗೌಡ (Pavithra Gowda), ಆನಂತರ ರೆಡ್ ಕಾರ್ಪೆಟ್ (Red Carpet) ಕಂಪನಿಯಲ್ಲಿ ತೊಡಗಿಕೊಂಡಿದ್ದರು. ಅದಕ್ಕಾಗಿ ಹಲವು ರಾಜ್ಯಗಳನ್ನೂ ಸುತ್ತಿದ್ದರು. ಇದೀಗ ಆ ಬ್ಯುಸಿನೆಸನ್ನು ಮತ್ತೊಂದು ಹಂತಕ್ಕೆ ತಗೆದುಕೊಂಡು ಹೋಗುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

Pavithra Gowda

ಒಂದು ಕಡೆ ಪವಿತ್ರಾ ಗೌಡ ಬ್ಯುಸಿನೆಸ್ ಕೆಲಸಗಳನ್ನು ತೊಡಗಿಕೊಂಡಿದ್ದರೆ, ಮತ್ತೊಂದು ಕಡೆ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ರದ್ದು ಕುರಿತಾದ ವಿಚಾರಣೆ ನಡೆಯುತ್ತಿದೆ. ಹೈಕೋರ್ಟ್ ನೀಡಿರುವ ಜಾಮೀನನ್ನು ಸುಪ್ರೀಂಕೋರ್ಟ್ (Supreme Court) ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದ್ದಾರೆ. ಯಾಕೆ ಜಾಮೀನು ರದ್ದು ಮಾಡಬಾರದು ಎಂದು ಕೇಳಿದ್ದಾರೆ. ಒಂದು ವೇಳೆ ಜಾಮೀನು ರದ್ದಾದರೆ, ಮತ್ತೆ ಪವಿತ್ರಾಗೆ ಜೈಲೇ ಗತಿ. ಇದನ್ನೂ ಓದಿ:  ರಾಮ-ಲಕ್ಷ್ಮಣರ ಜೊತೆ `ರಾಮಾಯಣ’ ಸೃಷ್ಟಿಕರ್ತ!

Pavithra Gowda 2

ಈ ಟೆನ್ಷನ್ ನಡುವೆಯೇ ರೆಡ್ ಕಾರ್ಪೆಟ್‌ಗಾಗಿ ಅವರು ಫೋಟೋಶೂಟ್ ಮಾಡಿಸಿದ್ದಾರೆ. ರೂಪದರ್ಶಿಗೆ ಪೋಸ್ ಹೇಗೆ ಕೊಡಬೇಕು ಎನ್ನುವುದನ್ನು ಪವಿತ್ರಾ ಗೌಡ ಪಾಠ ಮಾಡುತ್ತಿದ್ದಾರೆ. ಆ ವೀಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವೀಡಿಯೋ ಸದ್ಯ ವೈರಲ್ ಆಗಿದೆ. ಜುಲೈ 22ರಂದು ಜಾಮೀನು ಕುರಿತಾದ ತೀರ್ಪು ಬರಲಿದ್ದು, ಏನಾಗಲಿದೆ ಎಂದು ಕಾದು ನೋಡಬೇಕು.

Share This Article