ರಿಯಲ್ ಎಸ್ಟೇಟ್ ಏಜೆಂಟ್ ಕೊಲೆ ಪ್ರಕರಣ – ಮಾಜಿ ಕಾರ್ಪೋರೇಟರ್ ಮೈದುನ ಸೇರಿ ಐವರ ಬಂಧನ

Public TV
1 Min Read
uygfes

ಬೆಂಗಳೂರು: ಕುಂದಾಪುರದ ರಿಯಲ್ ಎಸ್ಟೇಲ್ ಏಜೆಂಟ್ ಗೋಲ್ಡನ್ ಸುರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರದ ಪೊಲೀಸರು ವಿಶೆಷ ಕಾರ್ಯಾಚರಣೆ ನಡೆಸಿ ತಡರಾತ್ರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

vlcsnap 2017 05 11 08h45m22s164

ರಾಕೇಶ್, ನಾರಾಯಣ ಅಲಿಯಾಸ್ ನರಿ, ರೌಡಿ ಶೀಟರ್ ಶ್ರೀಧರ್ ಅಲಿಯಾಸ್ ಶ್ರೀ, ರಾಕೇಶ್ ಗೌಡ ಬಂಧಿತ ಆರೋಪಿಗಳು. ಇವರಲ್ಲಿ ರಾಕೇಶ್ ಬಿಳೆಕಳ್ಳಿ ವಾರ್ಡ್ ಮಾಜಿ ಕಾರ್ಪೋ ರೇಟರ್ ರೂಪಾ ರಮೇಶ್ ಅವರ ಮೈದುನ ಎಂದು ತಿಳಿದುಬಂದಿದೆ. ಈತ ಮಂಗಳೂರಿನವನಾಗಿದ್ದು, ಬ್ಯೂಟಿ ಪಾರ್ಲರ್ ಇಟ್ಟುಕೊಂಡಿದ್ದ ಎನ್ನಲಾಗಿದೆ.

vlcsnap 2017 05 11 08h45m36s67

ಜಯನಗರ 7ನೇ ಬ್ಲಾಕ್‍ನ ಅಪಾರ್ಟ್‍ಮೆಂಟಿನಲ್ಲಿ ಕುಂದಾಪುರದ ತೆಕ್ಕಟ್ಟೇಯ ರಿಯಲ್ ಎಸ್ಟೇಟ್ ಏಜೆಂಟ್ ಗೋಲ್ಡನ್ ಸುರೇಶ್ ಬಾಯಿಗೆ ಟೇಪ್ ಸುತ್ತಿ ಕೊಲೆಗಯ್ಯಲಾಗಿತ್ತು. ಬಳಿಕ ದುಷ್ಕರ್ಮಿಗಳು ಗೋಣಿ ಚೀಲದಲ್ಲಿ ಮೃತದೇಹವನ್ನ ಹಾಕಿ ಪರಾರಿಯಾಗಿದ್ದರು. ಇತ್ತ ಸುರೇಶ್ ಗೆ ಅಕ್ಕ ಫೋನ್ ಮಾಡಿದಾಗ ಸುರೇಶ್ ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ ಮನೆಗೆ ಬಂದು ನೋಡಿದಾಗ ಸುರೇಶ್ ಅಕೊಲೆಯಾಗಿರುವುದು ಬೆಳಕಿಗೆ ಬಂದಿತ್ತು.

vlcsnap 2017 05 11 08h45m43s115

ಸುರೇಶ್ ರೌಡಿ ಶೀಟರ್ ಆಗಿದ್ದು, ಇವನ ವಿರುದ್ಧ 18 ಕೇಸ್‍ಗಳಿದ್ದವು. 2007 ರಿಂದ ಕುಂದಾಪುರ ಠಾಣೆಯಲ್ಲಿ ರೌಡಿ ಶೀಟರ್ ಎಂದು ಗುರುತಿಸಿಕೊಂಡಿದ್ದ. ಕೊಲೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *