ವಿದೇಶದಲ್ಲಿ ನಟ ದರ್ಶನ್ (Darshan) ಮೋಜು ಮಸ್ತಿ ಮುಂದುವರೆದಿದೆ. ಇದೇ ಜುಲೈ 22ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ದರ್ಶನ್ ಜಾಮೀನು ರದ್ದು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ಇದೆ. ದರ್ಶನ್ ಹಿಂದಿನ ಕ್ರಿಮಿನಲ್ ಕೇಸ್‌ಗಳನ್ನೂ ಕೆದಕಲಾಗಿದೆ. ಈ ನಡುವೆಯೂ ದರ್ಶನ್ ಕೊಂಚವೂ ಟೆನ್ಷನ್ ಇಲ್ಲದೆ ರಿಲ್ಯಾಕ್ಸ್ ಆಗಿರುವ ವೀಡಿಯೋ ವೈರಲ್ ಆಗಿದೆ. ಥಾಯ್ಲೆಂಡ್‌ನಲ್ಲಿ (Thailand) ದರ್ಶನ್ ಪಾರ್ಟಿ ಮಾಡ್ತಿರುವ ವೀಡಿಯೋ ರಿಲೀಸ್ ಆಗಿದ್ದು ದರ್ಶನ್ ಜಾಲಿಮೂಡ್‌ನಲ್ಲಿದ್ದಾರೆ.
ಇದೇ ಜುಲೈ 22ಕ್ಕೆ ದರ್ಶನ್‌ಗೆ ನೀಡಲಾದ ಜಾಮೀನು ರದ್ದು ಕೋರಿ ವಿಚಾರಣೆ ಇದೆ. ಚಿತ್ರೀಕರಣಕ್ಕೆಂದು ಕಳೆದ ಮಂಗಳವಾರ ಥಾಯ್ಲೆಂಡಿಗೆ ಹೋಗಿದ್ದ ದರ್ಶನ್ ನಡವಳಿಕೆಯಲ್ಲಿ ಯಾವುದೇ ಆತಂಕ ಕಾಣುತ್ತಿಲ್ಲ. ಕಳೆದ ಮಂಗಳವಾರ ಡೆವಿಲ್ ಸಿನಿಮಾದ ಹಾಡಿನ ಚಿತ್ರೀಕರಣಕ್ಕೆಂದು ಚಿತ್ರತಂಡ ಹಾಗೂ ಕುಟುಂಬ ಸಮೇತ ದರ್ಶನ್ ಥೈಲ್ಯಾಂಡ್‌ಗೆ ತೆರಳಿದ್ದರು. ಚಿತ್ರೀಕರಣದ ನಡುವೆ ದರ್ಶನ್ ಇದೀಗ ಭರ್ಜರಿ ಮೋಜು ಮಸ್ತಿ ಮಾಡಿರುವ ದೃಶ್ಯಗಳು ವೈರಲ್ ಆಗುತ್ತಿದೆ. ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಡೆವಿಲ್ ಸಾಂಗ್ ಶೂಟಿಂಗ್ – ದರ್ಶನ್ ಫೋಟೋ ರಿವೀಲ್
ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಕಳೆದ ಡಿಸೆಂಬರ್‌ನಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿದ್ದರು. ಜಾಮೀನಿಗೆ ಬೆನ್ನು ಸರ್ಜರಿಯ ಕಾರಣ ಕೊಟ್ಟಿದ್ದರು. ಆದರೆ ಇದೀಗ ದರ್ಶನ್ ಸರ್ಜರಿಯನ್ನೂ ಮಾಡಿಸಿಕೊಳ್ಳದೇ, ಬೆನ್ನುನೋವಿನ ತೊಂದರೆಯೂ ಇಲ್ಲದಂತೆ ಎಂಜಾಯ್ ಮಾಡುತ್ತಿದ್ದಾರೆ. ಹಾಡಿನ ಚಿತ್ರೀಕರಣಕ್ಕೆಂದು ಹೋಗಿದ್ದ ದರ್ಶನ್ ಚಿತ್ರೀಕರಣದ ನಡುವೆ ಚಿತ್ರತಂಡ ಹಾಗೂ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದಾರೆ. ಥಾಯ್ಲೆಂಡ್‌ನ ಹೋಟೆಲಿನಲ್ಲಿ ದರ್ಶನ್ ಪಾರ್ಟಿ ಮಾಡಿದ್ದಾರೆ. ಜೊತೆಗೆ ವಾಟರ್ ಸ್ಪೋರ್ಟ್ಸ್ ಆ್ಯಕ್ಟಿವಿಟೀಸ್‌ನಲ್ಲಿ ದರ್ಶನ್ ತೊಡಗಿರುವ ವೀಡಿಯೋ ಕೂಡ ರಿಲೀಸ್ ಆಗಿದೆ. ಇದನ್ನೂ ಓದಿ: ಟೆಕ್ಕಿ ಜೊತೆ ಆ.28ಕ್ಕೆ ಅನುಶ್ರೀ ಮದುವೆ!