ಚಿತ್ರದುರ್ಗ: ಒಳಗೊಳಗೆ ಹೊಗೆಯಾಡುತ್ತಿದ್ದ ಕಾಂಗ್ರೆಸ್ (Congress) ನಾಯಕರ ಶೀತಲ ಸಮರ ಚಿತ್ರದುರ್ಗ (Chitradurga) ಜಿಲ್ಲೆ ಮೊಳಕಾಲ್ಮೂರು (Molakalmuru) ಕ್ಷೇತ್ರದಲ್ಲಿ ಬೀದಿಗೆ ಬಂದಿದೆ.
ಮೊಳಕಾಲ್ಮೂರು ಕಾಂಗ್ರೆಸ್ ಶಾಸಕ ಎನ್‌ವೈ ಗೋಪಾಲಕೃಷ್ಣ (NY Gopalakrishna) ಹಾಗೂ ದ್ರಾಕ್ಷಿರಸ ಮಂಡಳಿ ಅಧ್ಯಕ್ಷ ಡಾ.ಯೊಗೀಶ್ ಬಾಬು (Yogesh Babu) ನಡುವೆ ಚುನಾವಣೆ ವೇಳೆ ಕಾಂಗ್ರೆಸ್ ಟಿಕೆಟ್‌ಗಾಗಿ ಆರಂಭವಾಗಿದ್ದ ಕದನಕ್ಕೆ ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ರಾಜಿಸಂಧಾನ ಮಾಡಲಾಗಿತ್ತು. ಆದರೂ ಎಲ್ಲೂ ಕೂಡ ಶಾಸಕರೊಂದಿಗೆ ಗುರುತಿಸಿಕೊಳ್ಳದ ದ್ರಾಕ್ಷಿರಸ ಮಂಡಳಿ ಅಧ್ಯಕ್ಷ ಡಾ.ಯೋಗೀಶ್ ಬಾಬು ತಟಸ್ತವಾಗಿದ್ದರು. ಆದರೆ ಜುಲೈ 12 ರಂದು ಯೋಗೀಶ್ ಬಾಬು ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಗಳು ಮೊಳಕಾಲ್ಮೂರು ನಗರದಲ್ಲಿ ಅಳವಡಿಸಿದ್ದ ಫ್ಲೆಕ್ಸ್‌ಗಳನ್ನು ಜುಲೈ 13ರಂದು ಪಟ್ಟಣ ಪಂಚಾಯ್ತಿ ಸಿಬ್ಬಂದಿ ತೆರವುಗೊಳಿಸಿದ್ದರು. ಹೀಗಾಗಿ ಆಕ್ರೋಶಗೊಂಡ ಯೋಗೀಶ್ ಬಾಬು ಹಾಗೂ ಅವರ ನೂರಾರು ಜನ ಬೆಂಬಲಿಗರು ಮೊಳಕಾಲ್ಮೂರು ಪಟ್ಟಣ ಪಂಚಾಯ್ತಿ ಕಚೇರಿ ಬಳಿ ಭಾನುವಾರ ರಾತೋರಾತ್ರಿ ಧರಣಿ ನಡೆಸಿದರು. ಇದನ್ನೂ ಓದಿ: ಡಿವೋರ್ಸ್ ಘೋಷಿಸಿದ ಸೈನಾ ನೆಹ್ವಾಲ್-ಪರುಪಳ್ಳಿ ಕಶ್ಯಪ್ ದಂಪತಿ
ಕೆಲವರ ಫ್ಲೆಕ್ಸ್‌ಗಳನ್ನು 3 ತಿಂಗಳಾದರು ತೆರವುಗೊಳಿಸಲ್ಲ. ನಾನು ನಿಗಮ ಮಂಡಳಿ ಅಧ್ಯಕ್ಷನಾದರೂ ಕೂಡ ಮೊಳಕಾಲ್ಮೂರಲ್ಲಿ ಯಾವುದೇ ಪ್ರೊಟೋಕಾಲ್ ಪಾಲನೆ ಮಾಡುತ್ತಿಲ್ಲ. ಸರ್ಕಾರದ ಒಂದೇ ಒಂದು ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ಶಾಸಕ ಎನ್‌ವೈ ಗೋಪಾಲಕೃಷ್ಣ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು. ಅಲ್ಲದೇ ರಾತ್ರಿ 11 ಗಂಟೆಗೆ ಮೊಳಕಾಲ್ಮೂರು ಪ.ಪಂ ಕಚೇರಿ ಎದುರು ನೆಲದ ಮೇಲೆ ಕುಳಿತು ಧರಣಿ ನಡೆಸಿದ ಯೋಗೀಶ್ ಬಾಬು ಎಲ್ಲಾ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಗಮನಕ್ಕೆ ತರುವತ್ತೇನೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಲವ್ ಜಿಹಾದ್‌ಗೆ 1,000 ಮುಸ್ಲಿಂ ಯುವಕರನ್ನು ನೇಮಿಸಿದ್ದ ಛಂಗೂರ್ ಬಾಬಾ!