ರಾಯಚೂರು: ಸಿಂಧನೂರಿನಿಂದ ಬೆಂಗಳೂರು, ಹುಬ್ಬಳ್ಳಿಗೆ ನೂತನ ರೈಲು ಸೇವೆ ಆರಂಭಿಸಲಾಗಿದ್ದು, ಹೊಸ ಮಾರ್ಗಕ್ಕೆ ಕೇಂದ್ರ ರೈಲ್ವೆ ಖಾತೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು.
ಸಿಂಧನೂರು ನಗರದಲ್ಲಿನ ರೈಲು ನಿಲ್ದಾಣದಲ್ಲಿ ನೂತನ ರೈಲಿಗೆ ಹಸಿರು ನಿಶಾನೆ ತೋರಿದರು. ಬಳಿಕ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿಯಾದ ನಂತರ ರೈಲ್ವೆ ಇಲಾಖೆಯಲ್ಲಿ ಹಲವು ಕ್ರಾಂತಿಕಾರಕ ಕೆಲಸಗಳಾಗಿವೆ ಎಂದು ಬಣ್ಣಿಸಿದರು.
ಹಲವು ವರ್ಷಗಳ ಕನಸಿನ ರೈಲು ಸಂಚಾರಕ್ಕೆ ಇಂದು ಚಾಲನೆ ಸಿಕ್ಕಿದೆ. ಮಧ್ಯಾಹ್ನ 1:30ಕ್ಕೆ ಸಿಂಧನೂರಿನಿಂದ ಹೊರಟು, ಹುಬ್ಬಳ್ಳಿ ಮೂಲಕ ಮುಂಜಾನೆ 3:55ಕ್ಕೆ ರೈಲು ಬೆಂಗಳೂರು ತಲುಪಲಿದೆ.