ಫೋಟೋ ತೆಗೆಯುವ ನೆಪದಲ್ಲಿ ಗಂಡನನ್ನೇ ನದಿಗೆ ತಳ್ಳಿದ ಪತ್ನಿ – ಈಜಿ ಜೀವ ಉಳಿಸಿಕೊಂಡ ಪತಿ

Public TV
1 Min Read
Raichur Rescue

ರಾಯಚೂರು: ಫೋಟೋ ತೆಗೆಯುವ ನೆಪದಲ್ಲಿ ಪತ್ನಿ ತನ್ನ ಪತಿಯನ್ನೇ ನದಿಗೆ ತಳ್ಳಿದ ಘಟನೆ ರಾಯಚೂರು (Raichur) ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದಿದೆ. ಇದೀಗ ಪತ್ನಿ, ಮೊದಲೇ ಪತಿಯನ್ನ ನೀರಿಗೆ ತಳ್ಳುವ ಪ್ಲಾನ್ ಮಾಡಿದ್ಲಾ ಅನ್ನೋ ಅನುಮಾನ ವ್ಯಕ್ತವಾಗಿದೆ.

ರಾಯಚೂರಿನ ಶಕ್ತಿನಗರ (Shakthinagara) ಮೂಲದ ತಾತಪ್ಪ ಜೀವ ಉಳಿಸಿಕೊಂಡಿರುವ ಪತಿ. ನದಿಯಲ್ಲಿ ಈಜಿ ಕಲ್ಲು ಬಂಡೆಯ ಮೇಲೆ ನಿಂತು ಕಾಪಾಡಿ ಅಂತ ಕೂಗಿಕೊಂಡಿದ್ದರು. ಬ್ರಿಡ್ಜ್ ಕಂ ಬ್ಯಾರೇಜ್ ಮಾರ್ಗವಾಗಿ ಹೊರಟಿದ್ದ ಬುಲೆರೋ ವಾಹನದಲ್ಲಿದ್ದವರು ಹಾಗೂ ಕೆಬಿಜೆಎನ್‌ಎಲ್ ಸಿಬ್ಬಂದಿ, ಸ್ಥಳೀಯರು ನದಿಗೆ ಹಗ್ಗ ಎಸೆದು ತಾತಪ್ಪ ಅವರನ್ನು ಕಾಪಾಡಿದ್ದಾರೆ. ಇದನ್ನೂ ಓದಿ: ವಾಕಿಂಗ್ ಮಾಡುವಾಗ ಹೃದಯಾಘಾತ – ನರ್ಸಿಂಗ್ ಹೋಮ್ ಮಾಲೀಕ ಸಾವು

ಯಾದಗಿರಿಯ (Yadagiri) ವಡಗೆರಾ ತಾಲೂಕಿನ ಗದ್ದೆಮ್ಮ ಹಾಗೂ ತಾತಪ್ಪ ಕಳೆದ ಏ.10ರಂದು ಮದುವೆಯಾಗಿದ್ದರು. ಮದುವೆಯಾಗಿ ಮೂರು ತಿಂಗಳಲ್ಲೇ ಸಂಸಾರದಲ್ಲಿ ಬಿರುಕು ಮೂಡಿ, ಜಗಳವಾಡುತ್ತಿದ್ದರು. ಆ ಜಗಳವೇ ಈ ಘಟನೆಗೆ ಕಾರಣ ಎಂದು ತಾತಪ್ಪ ಆರೋಪಿಸಿದ್ದಾರೆ. ಇದನ್ನೂ ಓದಿ: ಸುಡುಗಾಡಿಗೆ ಹೋಗಿ ತೆಂಗಿನಕಾಯಿ ಒಡೆದರೂ GST ಅನ್ವಯಿಸುತ್ತೆ: ಸಂತೋಷ್ ಲಾಡ್ ಲೇವಡಿ

ಪತ್ನಿಯನ್ನು ನಂಬಿ ಫೋಟೋ ತೆಗೆಸಿಕೊಳ್ಳಲು ನಿಂತಿದ್ದೆ. ಆಕೆ ನನ್ನನ್ನು ನದಿಗೆ ತಳ್ಳಿದ್ದಾಳೆ ಎಂದು ತಾತಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೆ ಪತ್ನಿ ಗದ್ದೆಮ್ಮ, ಮಾತ್ರ ನಾನು ತಳ್ಳಿಲ್ಲ. ಕಾಲು ಜಾರಿ ನದಿಗೆ ಬಿದ್ದಿದ್ದಾರೆ ಎಂದು ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾಳೆ. ಇದನ್ನೂ ಓದಿ: ಮೂರುವರೆ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ – ಆರೋಪಿಗೆ ಜೀವಾವಧಿ ಶಿಕ್ಷೆ

ಘಟನೆ ಬಳಿಕ ಒಟ್ಟಾಗಿಯೇ ಬೈಕ್‌ನಲ್ಲಿ ಪತಿ-ಪತ್ನಿ ಹೊರಟು ಹೋಗಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article