ವಿಜಯಪುರ: ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ದರೋಡೆ ಮಾಡಿ, 10.5 ಕೋಟಿ ರೂ. ಮೌಲ್ಯದ ಚಿನ್ನವನ್ನು ಕಳ್ಳತನ ಮಾಡಿದ್ದ ಪ್ರಕರಣದ 12 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು (Vijayapura Police) ಯಶಸ್ವಿಯಾಗಿದ್ದಾರೆ.
ಬಾಲರಾಜ್ ಮಣಿಕಮ್ ಯರೆಕುಲಾ, ಚಂದನರಾಜ್ ಪಿಳ್ಳೈ, ಗುಂಡು ಜೋಸೆಫ್ ಶ್ಯಾಮಬಾಬು, ಪೀಟರ್ ಚಂದ್ರಪಾಲ್, ಇಜಾಜ್ ಧಾರವಾಡ, ಸುಸೈರಾಜ್ ಡ್ಯಾನಿಯಲ್, ಬಾಬುರಾವ್ ಮಿರಿಯಾಲ್, ಮಹಮ್ಮದ್ ಆಸೀಫ್ ಕಲ್ಲೂರ, ಅನಿಲ್ ಮಿರಿಯಾಲ್, ಮೋಹನಕುಮಾರ, ಸುಲೇಮನ್‌ವೇಸ್ಲಿ ಪಲುಕುರಿ, ಮರಿಯಾದಾಸ ಗೋನಾ ಎಂಬ 12 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಟೆಸ್ಲಾ: 5 ಮಾಡೆಲ್ Y ವಾಹನಗಳು ಈಗಾಗಲೇ ಮುಂಬೈಗೆ ಎಂಟ್ರಿ
ಇನ್ನು ಬಂಧಿತರೆಲ್ಲರು ಹುಬ್ಬಳ್ಳಿ (Hubballi) ಮೂಲದವರಾಗಿದ್ದು, ಇಲ್ಲಿವರೆಗೆ ಬಂಧಿತರಿಂದ ಒಟ್ಟು 39 ಕೆಜಿ ಗಟ್ಟಿ ಬಂಗಾರ, 1.16 ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ ಒಂದು ಲಾರಿ, 5 ಕಾರು ಸೇರಿದಂತೆ 39.26 ಕೋಟಿ ರೂ.ಗೂ ಅಧಿಕ ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ತಮಿಳುನಾಡು ಲಾಕಪ್ ಡೆತ್ ಪ್ರಕರಣ – ಕ್ಷಮೆಯಾಚಿಸಿದ ಪೊಲೀಸ್ ಮುಖ್ಯಸ್ಥ
ಏನಿದು ಪ್ರಕರಣ?
ಕಳೆದ ಮೇ 25ರಂದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಣಣದಲ್ಲಿನ ಕೆನೆರಾ ಬ್ಯಾಂಕ್ ಕಳ್ಳತನ ಮಾಡಲಾಗಿತ್ತು. ದರೋಡೆಕೊರರು ಕೋಟಿ ಕೋಟಿ ಬೆಲೆ ಬಾಳುವ ಚಿನ್ನಾಭರಣ, ನಗದು ಕದ್ದು ಪರಾರಿಯಾಗಿದ್ದರು.
ಇದರಿಂದ ಬ್ಯಾಂಕ್‌ನ ಗ್ರಾಹಕರು ಕಂಗಾಲಾಗಿದ್ದರು. ಅಲ್ಲದೆ ಜಿಲ್ಲಾ ಪೊಲೀಸರಿಗೆ ಈ ಪ್ರಕರಣ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆದರೆ ಕೇವಲ 45 ದಿನದಲ್ಲೇ ಪ್ರಕರಣವನ್ನ ಜಿಲ್ಲಾ ಪೊಲೀಸರು ಬೇಧಿಸಿದ್ದಾರೆ. ಪ್ರಕರಣದ ಮೂರು ಪ್ರಮುಖ ಆರೋಪಿತರನ್ನು ಕಳೆದ ಜೂ. 26ರಂದು ಬಂಧಿಸಲಾಗಿತ್ತು. ಇದನ್ನೂ ಓದಿ: ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿ ದರೋಡೆ – ಗನ್ ತೋರಿಸಿ 3 ಕೆಜಿ ಚಿನ್ನಾಭರಣ ದೋಚಿದ ಗ್ಯಾಂಗ್
ವಿಜಯಕುಮಾರ ಮೋಹನರಾವ ಮಿರಿಯಾಲ (41), ಚಂದ್ರಶೇಖರ ಕೊಟಿಲಿಂಗಮ್ ನೆರೆಲ್ಲಾ (38), ಸುನೀಲ್ ನರಸಿಂಹಲು ಮೋಕಾ (40) ಆರೋಪಿಗಳನ್ನ ಬಂಧಿಸಲಾಗಿತ್ತು. ಬಂಧಿತರಿಂದ 10 ಕೋಟಿ 75 ಲಕ್ಷ ರೂ ಮೌಲ್ಯದ 10.5 ಕೆಜಿ ಬಂಗಾರದ ಆಭರಣಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇದನ್ನೂ ಓದಿ: ಮತಾಂತರ ಮಾಸ್ಟರ್‌ಮೈಂಡ್ ಛಂಗುರ್ ಬಾಬಾನ 5 ಕೋಟಿ ಮೌಲ್ಯದ ಮನೆ ಉಡೀಸ್ – ಬುಲ್ಡೋಜರ್‌ನಿಂದ ನೆಲಸಮ
ವಿಜಯಕುಮಾರ ಮಿರಿಯಾಲ ಹುಬ್ಬಳ್ಳಿಯ ಕೋಠಾರಿ ನಗರದ ಕೆನರಾ ಬ್ಯಾಂಕ್‌ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿದ್ದು, ಈತ ದರೋಡೆಯ ಮಾಸ್ಟರ್ ಮೈಂಡ್ ಆಗಿದ್ದ. ಮೇ 25ರಂದು ಬ್ಯಾಂಕ್‌ನ ಕಿಟಕಿಯ ಸರಳುಗಳನ್ನು ಕಟ್ ಮಾಡಿ ಬ್ಯಾಂಕ್‌ಗೆ ನುಗ್ಗಿ ದರೋಡೆ ಮಾಡಿದ್ದರು. ಅಲ್ಲದೆ ಪೊಲೀಸರ ದಿಕ್ಕು ತಪ್ಪಿಸಲು ಒಂದು ಗೊಂಬೆ ಇಟ್ಟು ವಾಮಾಚಾರ ಮಾಡಿದ್ದರು. ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ 8 ತಂಡಗಳನ್ನ ರಚಿಸಿದ್ದರು. ಎಲ್ಲಾ ತಂಡಗಳು ಎಲ್ಲ ಆಯಾಮಗಳಲ್ಲಿ ತನಿಖೆ ಮಾಡಿ ಆರೋಪಿತರನ್ನು ಪತ್ತೆ ಮಾಡಿದ್ದಾರೆ.
ಸದ್ಯ ಪ್ರಕರಣ ಬಹುತೇಕ ಆರೋಪಿಗಳ ಪತ್ತೆಯಾಗಿದ್ದು, ಪೊಲೀಸರ ತನಿಖೆ ಮುಂದುವರೆದಿದೆ. ವಿಜಯಪುರ ಪೊಲೀಸರ ಈ ಕಾರ್ಯಕ್ಕೆ ಬ್ಯಾಂಕ್ ಗ್ರಾಹಕರು, ಸಾರ್ವಜನಿಕರು ಮೆಚ್ವುಗೆ ವ್ಯಕ್ತಪಡಿಸಿದ್ದಾರೆ.