ಗಾರೆ ಕೆಲಸದವನ ಜೊತೆ ಕಂಟ್ರ್ಯಾಕ್ಟರ್ ಮಗಳ ಲವ್ – ಮದ್ವೆಯಾದ 15 ದಿನಕ್ಕೆ ಓಡಿಬಂದ ಗೃಹಿಣಿ!

Public TV
1 Min Read
Koppala Lovers

ಕೊಪ್ಪಳ: ಮದುವೆಯಾದ 15 ದಿನಕ್ಕೆ ಗಾರೆ ಕೆಲಸದಾತನೊಂದಿಗೆ ಕಂಟ್ರ್ಯಾಕ್ಟರ್ ಮಗಳು ಓಡಿ ಹೋಗಿರುವ ಘಟನೆ ಕೊಪ್ಪಳದಲ್ಲಿ (Koppala) ನಡೆದಿದೆ.

Koppala Lovers 1

ಆಂಧ್ರಪ್ರದೇಶ ಮೂಲದ ಲೇಬರ್ ಕಂಟ್ರ್ಯಾಕ್ಟರ್ (Contractor) ಮಗಳಿಗೆ ಬೆಂಗಳೂರಲ್ಲಿ ತಂದೆ ಬಳಿ ಗಾರೆ ಕೆಲಸ ಮಾಡ್ತಿದ್ದ ಯುವಕನ ಮೇಲೆ ಲವ್ ಆಗಿತ್ತು. ಗಾರೆ ಕೆಲಸ ಮಾಡ್ತಿದ್ದ ವೇಳೆ ವೆಂಕಟೇಶ್ ಮೇಲೆ ಆಕೆಗೆ ಪ್ರೀತಿ (Love) ಮೂಡಿತ್ತು. ಇದನ್ನೂ ಓದಿ: ಬೆಳಗಾವಿ | ರಜೆಗೆಂದು ಊರಿಗೆ ಬಂದಿದ್ದ ಯೋಧ ಇಬ್ರಾಹಿಂ ಹೃದಯಾಘಾತದಿಂದ ಸಾವು

ಕಳೆದ ಮೂರು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿ ಮಾಡ್ತಿದ್ರು. ಆದ್ರೆ ಇಬ್ಬರ ಪ್ರೀತಿ ವಿಷಯ ತಿಳಿದ ಮಹಿಳೆಯ ಪೋಷಕರು ಆಕೆಯನ್ನು ಊರಿಗೆ ಕರೆದೊಯ್ದು ಬಲವಂತವಾಗಿ ಬೇರೆ ಮದುವೆ ಮಾಡಿಸಿದ್ದರು. ಆದರೆ ಬೇರೆ ಮದುವೆಯಾಗಿ ಗಂಡನ ಮನೆಗೆ ಹೋದ ಗೃಹಿಣಿ, ವೆಂಕಟೇಶ್‌ಗೆ ಕರೆ ಮಾಡಿ ಆತನೊಂದಿಗೆ ಬರೋದಾಗಿ ತಿಳಿಸಿದ್ದಾಳೆ. ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಂಡು ಸಾಯೋದಾಗಿ ಹೇಳಿ, ಮದುವೆಯಾಗಿ 15 ದಿನಕ್ಕೆ ಗಂಡನ ಮನೆ ಬಿಟ್ಟು ಪ್ರೀತಿಸಿದ ಯುವಕನ ಜೊತೆ ಮನೆ ಬಿಟ್ಟು ಬಂದಿದ್ದಾಳೆ. ಇದನ್ನೂ ಓದಿ: 3 ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಕೊಡ್ತಿದ್ದೇವೆ, ಪ್ರತಿ ತಿಂಗಳು ಹಣ ಕೊಡೋಕೆ ತೊಡಕುಗಳಿವೆ: ಹೆಚ್.ಎಂ ರೇವಣ್ಣ

ಮಹಿಳೆಯು ವೆಂಕಟೇಶ್ ಜೊತೆ ಕೊಪ್ಪಳಕ್ಕೆ ಬಂದಿರುವ ವಿಚಾರ ತಿಳಿದ ಆಕೆಯ ಪೋಷಕರು ಆಂಧ್ರಪ್ರದೇಶದಿಂದ ಕೊಪ್ಪಳಕ್ಕೆ ಬಂದು ಜೋಡಿಯ ಹುಡುಕಾಟ ನಡೆಸಿದ್ದಾರೆ. ಸದ್ಯ ಈ ಜೋಡಿ ರಕ್ಷಣೆಗಾಗಿ ಕೊಪ್ಪಳ ಎಸ್ಪಿಯ ಮೊರೆ ಹೋಗಿದ್ದು, ನಮಗೆ ರಕ್ಷಣೆ ಸಿಗೋವರೆಗೂ ಎಲ್ಲೂ ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕೊಪ್ಪಳ ಪೊಲೀಸರು ಈ ಜೋಡಿಗೆ ರಕ್ಷಣೆ ನೀಡಿ, ಒಂದಾಗಿ ಬಾಳಲು ಅವಕಾಶ ಕೊಡಿಸ್ತಾರಾ ಕಾದು ನೋಡಬೇಕಿದೆ.

Share This Article