– ಕೆಲಸ ಪಡೆದ ಕರ್ನಾಟಕದ ಕಿರಿಯ ವಯಸ್ಸಿನ ಮೊದಲ ಯುವತಿ
ಮಂಗಳೂರು: ವಿಶ್ವದ ಪ್ರತಿಷ್ಠಿತ ಕಾರು ಸಂಸ್ಥೆ ರೋಲ್ಸ್ ರಾಯ್ಸ್‌ನಲ್ಲಿ (Rolls Royce) ಕನ್ನಡತಿಯೋರ್ವಳು ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಈ ಮೂಲಕ ರೋಲ್ಸ್ ರಾಯ್ಸ್‌ನಲ್ಲಿ ಕೆಲಸ ಪಡೆದ ಕರ್ನಾಟಕದ (Karntaka) ಕಿರಿಯ ವಯಸ್ಸಿನ ಮೊದಲ ಯುವತಿ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ತೀರ್ಥಹಳ್ಳಿ ಮೂಲದ ಮಂಗಳೂರು (Mangaluru) ನಿವಾಸಿಯಾಗಿರುವ ರಿತುಪರ್ಣಗೆ ಬಾಲ್ಯದಲ್ಲಿ ವೈದ್ಯೆ ಆಗಬೇಕು ಎಂದು ಕನಸು ಇತ್ತು. ಆದರೆ ಕಾರಣಾಂತರಗಳಿಂದ ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ರೊಬೋಟಿಕ್ಸ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು.ಇದನ್ನೂ ಓದಿ: 3ನೇ ಆಷಾಢ ಸಂಭ್ರಮ; ಗಜ ಲಕ್ಷ್ಮಿ, ನಾಗಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡಿ ತಾಯಿ
ಇನ್ನೋವೇಶನ್ ಸಮ್ಮೇಳನದಲ್ಲಿ ಚಿನ್ನದ ಪದಕ ಪಡೆದ ರಿತುಪರ್ಣ, ಬಳಿಕ ರೋಲ್ಸ್ ರಾಯ್ಸ್ ಕಂಪನಿಗೆ ಇಂಟರ್ನ್ಶಿಪ್‌ಗೆಂದು ತೆರಳಿದ್ದರು. 8 ತಿಂಗಳ ಟಾಸ್ಕ್ ಟೆಸ್ಟ್‌ನಲ್ಲಿ ರಿತುಪರ್ಣರ ಚಾಕಚಕ್ಯತೆ ಕಂಡು ರೋಲ್ಸ್ ರಾಯ್ ಕಂಪನಿ ನೇರವಾಗಿ ನೇಮಕಾತಿ ಪತ್ರ ನೀಡಿದೆ.
ಈ ಸಾಧನೆಗೆ ಪೋಷಕರ ಹಾಗೂ ಕಾಲೇಜಿನವರ ಪ್ರೋತ್ಸಾಹ ಇದ್ದು, ಇನ್ನೂ ಕೆಲವೇ ತಿಂಗಳಲ್ಲಿ ಅಮೆರಿಕಕ್ಕೆ ಹಾರಲಿದ್ದಾರೆ. ಮಗಳ ಸಾಧನೆಗೆ ಹೆತ್ತವರು ಸಂತಸ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಹಾಸನ ಹೃದಯಾಘಾತ ವರದಿ ಬಹಿರಂಗ: 8 ಲಕ್ಷ ಚಾಲಕರಿಗೆ ಹೆಲ್ತ್ ಕ್ಯಾಂಪ್ ಆಯೋಜಿಸಲು ಮುಂದಾದ ಸರ್ಕಾರ