ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ವೈದ್ಯಕೀಯ ಅಧೀಕ್ಷಕ

Public TV
1 Min Read
Medical Superintendent Karwar

ಕಾರವಾರ: ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದ ವೇಳೆ ಕಾರವಾರದ ವೈದ್ಯಕೀಯ ಅಧೀಕ್ಷಕ ಶಿವಾನಂದ ಕುಡ್ತಾಲಕರ್ ಲೋಕಾಯುಕ್ತ (Lokayukta) ಬಲೆಗೆ ಬಿದ್ದ ಘಟನೆ ಕಾರವಾರದ (Karwar) ಕ್ರಿಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಮೂರು ಲಕ್ಷದ ಐವತ್ತು ಸಾವಿರ ಮೌಲ್ಯದ ಹಾಸಿಗೆ, ಬೆಡ್‌ಗಳನ್ನು ಕ್ರಿಮ್ಸ್ ವೈದ್ಯಕೀಯ ಆಸ್ಪತ್ರೆಗೆ ಸರಬರಾಜು ಮಾಡಲು ಎಂಟು ತಿಂಗಳ ಹಿಂದೆ ಟೆಂಡರ್ ಪಡೆದಿದ್ದ ಅಂಕೋಲದ ವಿಶಾಲ್ ಫರ್ನೀಚರ್‌ನ ಮೌಸೀನ್ ಅಹ್ಮದ್ ಶೇಕ್ ಬಳಿ ಹಣ ಬಿಡುಗಡೆಗೆ 50 ಸಾವಿರವನ್ನು ಜಿಲ್ಲಾ ಸರ್ಜನ್ ಶಿವಾನಂದ ಕುಡ್ತಾಲಕರ್ ಲಂಚ ಕೇಳಿದ್ದರು. ಇದನ್ನೂ ಓದಿ: ಅತ್ತ ಡೆಲ್ಲಿಯಲ್ಲಿ ಸಿದ್ದರಾಮಯ್ಯ ಕ್ಲಿಯರ್ ಮೆಸೇಜ್ – ಬೆಂಗಳೂರಲ್ಲಿ ಆಪ್ತರು ದಿಲ್ ಖುಷ್

ಇದಲ್ಲದೇ 2014 ರಲ್ಲಿ 16 ಲಕ್ಷದ ಟೆಂಡರ್ ಪಡೆದಿದ್ದು, ಇದಕ್ಕೆ ಐದೂವರೆ ಲಕ್ಷ ಲಂಚ ನೀಡಿದ್ದರು. ಆದರೇ ಇದೀಗ ಮತ್ತೆ ಚಿಕ್ಕ ಟೆಂಡರ್‌ಗೆ 50 ಸಾವಿರ ಲಂಚ ಕೇಳಿದ್ದು, ಮೊನ್ನೆ ರಾತ್ರಿ 20,000 ಹಣ ಪಡೆದಿದ್ದ ಜಿಲ್ಲಾ ಸರ್ಜನ್ ಶಿವಾನಂದ ಕುಡ್ತಾಲಕರ್ ಇಂದು ಮತ್ತೆ 30,000 ರೂ. ಪಡೆಯುತ್ತಿರುವ ವೇಳೆ ಲೋಕಾಯುಕ್ತ ಎಸ್.ಪಿ ಕುಮಾರ್ ಚಂದ್ರ ನೇತೃತ್ವದ ಮಂಗಳೂರು ಮೂಲದ ತಂಡ ದಾಳಿ ನಡೆಸಿ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.

ಮೌಸೀನ್ ಅಹ್ಮದ್ ಶೇಕ್‌ಗೆ ಆಸ್ಪತ್ರೆಗೆ ನೀಡಿದ ಹಾಸಿಗೆ, ಬೆಡ್‌ಗಳ ಬಿಲ್ ನೀಡದೇ ಕಳೆದ ಎಂಟು ತಿಂಗಳಿಂದ ಕಮಿಷನ್‌ಗಾಗಿ ಪೀಡಿಸುತ್ತಿದ್ದರು. ಹಣ ಹೊಂದಿಸಲಾಗದೇ ಪತ್ನಿಯ ತಾಳಿ ಸರವನ್ನು ಅಡವಿಟ್ಟು ಮೊದಲ ಹಂತದಲ್ಲಿ 20 ಸಾವಿರ ನೀಡಿದ್ದನು. ನಿನ್ನೆ ದಿನ ಲೋಕಾಯುಕ್ತ ಕಚೇರಿಗೆ ದೂರು ನೀಡಿದ ಬೆನ್ನಲ್ಲೇ ಇಂದು ಹಣ ಪಡೆಯುತ್ತಿರುವಾಗ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಇಂದಲ್ಲ, ನಾಳೆ ಸಿಎಂ ಆಗೇ ಆಗ್ತಾರೆ: ಶಾಸಕ ರಂಗನಾಥ್

Share This Article