ಸಾಮಾನ್ಯವಾಗಿ ಮಹಿಳೆಯರು ತುಳಸಿಗೆ ನೀರು ಹಾಕಿ ಪೂಜೆ (Tulasi Pooja) ಮಾಡೋ ಪದ್ಧತಿ ಫಾಲೋ ಮಾಡ್ತಾರೆ. ಪುರುಷರು ತುಳಸಿಗೆ ನೀರು ಹಾಕುವುದು ವಿರಳ. ಆದರೆ ದರ್ಶನ್ (Darshan) ಇಂದು ಮನೆಯ ಮುಂದಿರುವ ತುಳಸಿ ಗಿಡಕ್ಕೆ ದರ್ಶನ್ ನೀರೆರೆದು ಕೈಮುಗಿದಿದ್ದಾರೆ.
ಮನೆಯ ಮುಂದೆ ತುಳಸಿ ಗಿಡ ಬೆಳೆಸುವುದು ವಾಡಿಕೆ. ಅದರಂತೆ ದರ್ಶನ್ ಅವರ ಬೆಂಗಳೂರಿನ ಆರ್ ಆರ್ ನಗರ ನಿವಾಸದ ಬಾಗಿಲ ಮುಂದೆಯೇ ಬೃಹತ್ ತುಳಸಿ ಕಟ್ಟೆ ಇದೆ. ಗುರುವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ದರ್ಶನ್ ಮನೆಯಿಂದ ಹೊರಡುವ ಮೊದಲು ಮನೆಯ ನೀರತುಂಬಿದ ಲೋಟ ಹಿಡಿದು ಮುಖ್ಯ ದ್ವಾರದಿಂದ ಹೊರಬಂದು ತುಳಸಿಗಿಡಕ್ಕೆ ನೀರು ಹಾಕಿದ್ದಾರೆ. ಮನೆಯ ಒಳಗೆ ಹೋಗಿ ಸ್ವಲ್ಪ ಸಮಯದ ಬಳಿಕ ಹೊರಬಂದು ಅಭಿಮಾನಿಗಳನ್ನ ಭೇಟಿಯಾಗಿ ಕೋರ್ಟ್‌ನತ್ತ ಸಾಗಿದ್ದಾರೆ. ಇದನ್ನೂ ಓದಿ: ಅಟ್ಲಿ ಸಿನಿಮಾಗೆ ಮತ್ತೆ ಒಂದಾದ ಪುಷ್ಪ ಹಿಟ್ ಜೋಡಿ..!
ಪ್ರತಿನಿತ್ಯ ಕೆಲವರು ಬೆಳಗ್ಗೆ ತುಳಸಿಗೆ ನೀರು ಹಾಕುವ ಪದ್ದತಿಯನ್ನು ಪಾಲಿಸಿಕೊಂಡು ಬರುತ್ತಾರೆ. ಅದರಂತೆ ದರ್ಶನ್ ಕೂಡ ನೀರು ಹಾಕಿ ಕೈ ಮುಗಿಯುತ್ತಾರೆ ಎನ್ನಲಾಗುತ್ತೆ. ಅದರಲ್ಲೂ ಗುರುವಾರ ತುಳಸಿಗೆ ಪೂಜೆ ಮಾಡಿದರೆ ವಿಶೇಷ ಫಲಗಳು ದೊರಕುತ್ತವೆ ಎಂಬ ನಂಬಿಕೆ ಇದೆ. ಅದರಂತೆ ಗುರುವಾರ ತುಳಿಸಿಗೆ ಪೂಜೆ ಮಾಡುವಾಗಲೇ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಇದನ್ನೂ ಓದಿ: ಹೆಣ್ಣು ಯಾವ ಬಟ್ಟೆ ಹಾಕ್ಬೇಕು, ಹೇಗೆ ತಾಯಿ ಆಗ್ಬೇಕು ಅನ್ನೋದು ಅವಳ ಆಯ್ಕೆ – ಭಾವನರನ್ನು ಬೆಂಬಲಿಸಿದ ರಾಗಿಣಿ