ಸೂಪರ್ ಮಾರ್ಟ್‌ನಲ್ಲಿ ಖರೀದಿಸಿ, ಬಳಿಕ ಬಿಲ್ ಕಟ್ಟು ಅಂದ್ರೆ ಚಾಕು ತೋರಿಸಿ ಎಸ್ಕೇಪ್

Public TV
1 Min Read
Ashok Nagar Rowdysheeter Arrest

ಬೆಂಗಳೂರು: ರೌಡಿಶೀಟರ್‌ನೋರ್ವ ಸೂಪರ್ ಮಾರ್ಟ್‌ಗೆ ಬಂದು ಬೇಕಾದ್ದನ್ನು ಖರೀದಿಸಿ, ಬಳಿಕ ಬಿಲ್ ಕಟ್ಟು ಎಂದಿದ್ದಕ್ಕೆ ಚಾಕು ತೋರಿಸಿ ಎಸ್ಕೇಪ್ ಆಗಿರುವ ಘಟನೆ ರಿಚ್ಮಂಡ್ ಟೌನ್ ಬಳಿ ನಡೆದಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಾರಾಕಾಸ್ತ್ರ ಹಿಡಿದು ದರ್ಪ ತೋರಿದ ರೌಡಿಶೀಟರ್ ಇಮ್ರಾನ್ ಅಲಿಯಾಸ್ ಗೋಲಿ ಇಮ್ರಾನ್ ಬಂಧಿತ ಆರೋಪಿ.ಇದನ್ನೂ ಓದಿ: ನವದೆಹಲಿಯಲ್ಲಿ MSTC ಕಾರ್ಪೊರೇಟ್ ಕಚೇರಿ ಉದ್ಘಾಟಿಸಿದ ಹೆಚ್‌ಡಿ ಕುಮಾರಸ್ವಾಮಿ

ಕಳೆದ ಶನಿವಾರ ರಿಚ್ಮಂಡ್ ಟೌನ್ ಬಳಿಯ ಶಾಪಿಂಗ್ ಮಾಲ್ ಒಂದಕ್ಕೆ ಹೋಗಿದ್ದಾನೆ. ಸಭ್ಯಸ್ಥನಂತೆ ಒಳಗೆ ಹೋಗಿ ಬೇಕಾದ ಸಾಮಾನುಗಳನ್ನು ಬ್ಯಾಗ್‌ಗೆ ತುಂಬಿಕೊAಡಿದ್ದಾನೆ. ಬಳಿಕ ಕ್ಯಾಶ್ ಕೌಂಟರ್ ಬಳಿಕ ಹಣ ಕೊಡದೇ ಹಾಗೇ ಹೊರಹೋಗಲು ಮುಂದಾಗಿದ್ದಾನೆ. ಆಗ ಅಲ್ಲಿನ ಸಿಬ್ಬಂದಿ ಆತನನ್ನು ತಡೆದು ಹಣ ಕೊಡುವಂತೆ ತಿಳಿಸಿದ್ದಾರೆ. ಈ ವೇಳೆ ತನ್ನ ಬಳಿಯಿದ್ದ ಚಾಕು ತೆಗದು ಹಲ್ಲೆಗೆ ಮುಂದಾಗಿದ್ದು, ಪ್ರಾಣ ಉಳಿದರೆ ಸಾಕು ಎಂದು ಮಾಲೀಕರು ಮುಂದಾಗಿದ್ದಾರೆ.

ಆರೋಪಿ ಅಲ್ಲಿಂದ ಹೋದ ಬಳಿಕ ಮಾಲೀಕರು ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ನಡೆದ ಎರಡು ದಿನದ ಬಳಿಕ ಸಿಸಿಟಿವಿ ದೃಶ್ಯಗಳನ್ನಾಧರಿಸಿ ಅಶೋಕ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಅಶೋಕ ನಗರ ಠಾಣೆಯ ಬಿ ಪಟ್ಟಿ ರೌಡಿಶೀಟರ್ ಆಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.ಇದನ್ನೂ ಓದಿ: ಶಾಪಿಂಗ್‌ ವಿಚಾರಕ್ಕೆ ಗಲಾಟೆ; ಪತ್ನಿ ಕುತ್ತಿಗೆ ತುಳಿದು ಕೊಲೆ – ಮಗಳ ಸನ್ನೆಯಿಂದ ಆರೋಪಿ ಲಾಕ್!

Share This Article