ರೇಣುಕಾಸ್ವಾಮಿ ಹತ್ಯೆ ಕೇಸ್‌ – ಥೈಲ್ಯಾಂಡ್‌ಗೆ ತೆರಳಲು ದರ್ಶನ್‌ಗೆ ಕೋರ್ಟ್‌ ಅವಕಾಶ

Public TV
1 Min Read
Darshan Devil Cinema

ರೇಣುಕಾಸ್ವಾಮಿ (Renukaswamy Murder Case) ಹತ್ಯೆ ಪ್ರಕರಣದ ಆರೋಪಿ ದರ್ಶನ್ (Darshan) ವಿದೇಶ ಪ್ರವಾಸಕ್ಕೆ ತೆರಳಲು ಕೋರ್ಟ್ ಈಗ ಅನುಮತಿ ನೀಡಿದೆ. ಡೆವಿಲ್ (Devil) ಚಿತ್ರದ ಚಿತ್ರೀಕರಣಕ್ಕಾಗಿ ದರ್ಶನ್ ಈ ಅನುಮತಿಯನ್ನು ಪಡೆದುಕೊಂಡಿದ್ದಾರೆ.

ಈ ಹಿಂದೆ ಇಸ್ರೇಲ್‌ನಲ್ಲಿ ಚಿತ್ರೀಕರಣಕ್ಕೆ ತೀರ್ಮಾನಿಸಲಾಗಿತ್ತು. ಆದರೆ, ಇಸ್ರೇಲ್‌ನಲ್ಲಿ ಯುದ್ಧದ ವಾತಾವರಣ ‌ಹಿನ್ನೆಲೆ ಪ್ರಯಾಣ ಕೈಬಿಟ್ಟ ಚಿತ್ರತಂಡ ಥೈಲ್ಯಾಂಡ್‌ನಲ್ಲಿ ಮಾತ್ರ ಚಿತ್ರೀಕರಣ ಮಾಡಲು ನಿರ್ಧರಿಸಿದೆ. ಇದನ್ನೂ ಓದಿ: ಡೆವಿಲ್‌ಗೆ ಯುದ್ಧಾತಂಕ – ವಿದೇಶಿ ಪ್ರವಾಸ ಮರುನಿಗದಿ ಕೋರಿ ದರ್ಶನ್ ಅರ್ಜಿ

Darshan Devil making in Udaipur 2
ಡೆವಿಲ್‌ ಶೂಟಿಂಗ್‌ನಲ್ಲಿ ದರ್ಶನ್‌

ಈ ಹಿಂದೆ ಕೋರ್ಟ್‌ನಲ್ಲಿ ಜು.1ರಿಂದ‌ ಜು.25ರ ವರೆಗೆ ಅವಕಾಶ ಪಡೆಯಲಾಗಿತ್ತು. ಆದರೆ, ಇಸ್ರೇಲ್‌ನಲ್ಲಿ ಯುದ್ಧ ನಡೆಯುತ್ತಿದ್ದು, ಆ ದೇಶದಲ್ಲಿ ಚಿತ್ರೀಕರಣ ಕೈಬಿಡಲಾಗಿದೆ. ಇದೀಗ ಜು.11 ರಿಂದ ಜು.30 ರವರೆಗೆ ಅವಕಾಶ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿತ್ತು. ದರ್ಶನ್ ಪರ ವಕೀಲ ಎಸ್.ಸುನಿಲ್ ಕುಮಾರ್ ವಾದ ಮಂಡಿಸಿದರು.

ವಿದೇಶ ಪ್ರಯಾಣದ ದಿನಾಂಕ ಮರುನಿಗದಿಗೆ ಕೋರಿ ದರ್ಶನ್ (Darshan) ಅವರು 57ನೇ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಡೆವಿಲ್ ಸಿನಿಮಾ ಶೂಟಿಂಗ್‌ಗೆ (Devil Shooting) ವಿದೇಶಕ್ಕೆ ತೆರಳಲು ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿಯಾಗಿರುವ ದರ್ಶನ್‌ಗೆ ಜುಲೈ 1 ರಿಂದ 25ರ ವರೆಗೆ ಕೋರ್ಟ್‌ ಅನುಮತಿ ನೀಡಿತ್ತು. ಆದರೆ ಇಸ್ರೇಲ್‌ (Israel) ಮತ್ತು ಇರಾನ್‌ (Iran) ಮಧ್ಯೆ ಯುದ್ಧದ ವಾತಾವರಣದಿಂದ ದುಬೈ ಪ್ರಯಾಣವನ್ನು ಚಿತ್ರ ತಂಡ ಕೈಬಿಟ್ಟಿದೆ. ಆದರೆ, ಈಗ ಶೂಟಿಂಗ್‌ ಅನ್ನು ಥಾಯ್ಲೆಂಡ್‌ನಲ್ಲಿ ಮಾತ್ರ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿದೆ. ಇದನ್ನೂ ಓದಿ: ಕಾಂತಾರ ಪ್ರೀಕ್ವೆಲ್ ಯಶಸ್ಸಿಗಾಗಿ ರಿಷಬ್ ಶೆಟ್ಟಿ ಸ್ನೇಹಿತರಿಂದ ವಿಶೇಷ ಪೂಜೆ

Share This Article