– ಪಂಜಾಬ್‌ನಾದ್ಯಂತ 16 ಕಡೆ ಬಾಂಬ್ ಸ್ಫೋಟ ಪ್ರಕರಣ ಪ್ರಮುಖ ಆರೋಪಿ ಪಾಸಿಯಾ
ನವದೆಹಲಿ: ಪಂಜಾಬ್‌ನಾದ್ಯಂತ ಕನಿಷ್ಠ 16 ಭಯೋತ್ಪಾದಕ ದಾಳಿಗಳ ಪ್ರಮುಖ ಆರೋಪಿ ಖಲಿಸ್ತಾನಿ ಉಗ್ರ (Khalistani Terrorist) ಹ್ಯಾಪಿ ಪಾಸಿಯಾನನ್ನು (Happy Passia) ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಲು ಪ್ರಕ್ರಿಯೆ ಶುರುವಾಗಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಭಾರತೀಯ ಭದ್ರತಾ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ಲಭಿಸಿದ್ದು, ಈ ಕಾರ್ಯಾಚರಣೆ ಯಶಸ್ವಿಗೊಳಿಸಲು ಶತ ಪ್ರಯತ್ನಗಳು ನಡೆಯುತ್ತಿವೆ.
CAPTURED: HARPREET SINGH, part of an alleged foreign terrorist gang here illegally in the United States, who we believe was involved in planning multiple attacks on police stations both in India and the United States.@FBISacramento conducted the investigation coordinating with… pic.twitter.com/JKB1dfjo2P
— FBI Director Kash Patel (@FBIDirectorKash) April 21, 2025
ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಜೊತೆಗೆ ಮತ್ತು ಭಯೋತ್ಪಾದಕ ಗುಂಪು ಬಬ್ಬರ್ ಖಲ್ಸಾ ಇಂಟರ್ನ್ಯಾಷನಲ್ (BKI)ನಲ್ಲಿ ಗುರುತಿಸಿಕೊಂಡಿದ್ದ ಹ್ಯಾಪಿ ಪಾಸಿಯಾ 2016-17ರ ಸಮಯದಲ್ಲಿ ಪಂಜಾಬ್‌ನಾದ್ಯಂತ ನಡೆದ 16 ಬಾಂಬ್ ಸ್ಫೋಟಕ ಪ್ರಕರಣದ ಪ್ರಮುಖ ಆರೋಪಿ ಆಗಿದ್ದ. ಆ ಸಂದರ್ಭದಲ್ಲಿ ಗುರ್ದಾಸ್‌ಪುರ, ದಿನಾನಗರ ಮತ್ತು ಇತರ ಕಡೆಗಳಲ್ಲಿ ನಡೆದ ಗ್ರೆನೇಡ್ ದಾಳಿಗಳ ರುವಾರಿಯೂ ಈತನಾಗಿದ್ದ. ಈ ದಾಳಿಗಳು ಭಾರತದ ಭದ್ರತೆಗೆ ಧಕ್ಕೆಯನ್ನುಂಟುಮಾಡಿದ್ದವು. ಈತನ ವಿರುದ್ಧ ಭಾರತದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ, ಮತ್ತು ಇಂಟರ್‌ಪೋಲ್‌ನಿಂದ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಯಲ್ಲಿದೆ.
ಮೂಲಗಳ ಪ್ರಕಾರ, ಅಮೆರಿಕ ಪಾಸಿಯಾನನ್ನು ಗುರುತಿಸಲಾಗಿದ್ದು, ಭಾರತೀಯ ಗುಪ್ತಚರ ಸಂಸ್ಥೆಗಳ ಸಹಕಾರದೊಂದಿಗೆ ಈತನನ್ನು ವಶಕ್ಕೆ ತೆಗೆದುಕೊಂಡಿವೆ. ಪಂಜಾಬ್‌ನ ಅಮೃತಸರದ ನಿವಾಸಿಯಾದ ಪಾಸಿಯಾನನ್ನು ಕಳೆದ ಏಪ್ರಿಲ್ 18 ರಂದು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಮತ್ತು ICE ತಂಡಗಳು ಬಂಧಿಸಿರುವುದಾಗಿ FBI ನಿರ್ದೇಶಕ ಕಾಶ್ ಪಟೇಲ್ ತಿಳಿಸಿದ್ದರು. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಶುಭಾಂಶು ಶುಕ್ಲಾರಿಂದ ಬೆಂಗಳೂರು ನೀರುಕರಡಿ ಪ್ರಯೋಗ ಪೂರ್ಣ
ಇದೀಗ ಗಡೀಪಾರು ಪ್ರಕ್ರಿಯೆಯು ಈಗ ರಾಜತಾಂತ್ರಿಕ ಮತ್ತು ಕಾನೂನಾತ್ಮಕ ಹಂತದಲ್ಲಿ ಮುಂದುವರೆದಿದೆ. ಭಾರತ ಮತ್ತು ಅಮೆರಿಕ ನಡುವಿನ ಗಡೀಪಾರು ಒಪ್ಪಂದದ ಅಡಿಯಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಶೀಘ್ರದಲ್ಲೇ ಈತನನ್ನು ಭಾರತಕ್ಕೆ ಕರೆತರುವ ಸಾಧ್ಯತೆ ಇದೆ. ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಕ್ ವಿರುದ್ಧ ಮೋದಿ ಕಟು ವಾಗ್ದಾಳಿ – ಬುದ್ಧನ ಶಾಂತಿ ತತ್ವ ಪ್ರತಿಪಾದಿಸಿದ ಪ್ರಧಾನಿ
ಈ ಬೆಳವಣಿಗೆಯನ್ನು ಭಾರತೀಯ ಭದ್ರತಾ ಸಂಸ್ಥೆಗಳು ಒಂದು ಪ್ರಮುಖ ಯಶಸ್ಸಾಗಿ ಪರಿಗಣಿಸಿವೆ. ಹ್ಯಾಪಿ ಪಾಸಿಯಾನಂತಹ ಆರೋಪಿಗಳನ್ನು ನ್ಯಾಯಂಗದ ಮುಂದೆ ತಂದು ನಿಲ್ಲಿಸೋದು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಭದ್ರತಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬ್ರಿಕ್ಸ್ ಅಮೆರಿಕ ವಿರೋಧಿ ಒಕ್ಕೂಟ – 10% ಹೆಚ್ಚುವರಿ ತೆರಿಗೆ ಹಾಕ್ತೀನಿ: ಟ್ರಂಪ್ ವಾರ್ನಿಂಗ್