ದುಬೈ: ಇಂಗ್ಲೆಂಡ್ (England) ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದ ಬೆನ್ನಲ್ಲೇ ಭಾರತ (India) ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ (ICC World Test Championship) 4ನೇ ಸ್ಥಾನಕ್ಕೆ ಜಿಗಿದಿದೆ.
2025-27ರ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯವನ್ನು ಸೋತ ಕಾರಣ ಭಾರತ 5ನೇ ಸ್ಥಾನ ಪಡೆದುಕೊಂಡಿತ್ತು. ಈಗ ಭರ್ಜರಿ 336 ರನ್‌ಗಳ ಜಯ ಸಾಧಿಸಿದ್ದರಿಂದ 4ನೇ ಸ್ಥಾನಕ್ಕೆ ಏರಿದೆ. ಭಾರತದಷ್ಟೇ 12 ಅಕ, 50 ಪಿಸಿಟಿ ಪಡೆದಿರುವ ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಕೊಹ್ಲಿ, ರೋಹಿತ್, ಇಮ್ರಾನ್ ನಿರ್ಮಾಣ ಮಾಡದ ವಿಶಿಷ್ಟ ದಾಖಲೆ ನಿರ್ಮಿಸಿದ ಗಿಲ್
ಆಡಿರುವ ಒಂದು ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ ಎರಡು ಪಂದ್ಯವಾಡಿ ಒಂದು ಜಯ, ಒಂದು ಡ್ರಾ ಸಾಧಿಸಿರುವ ಶ್ರೀಲಂಕಾ 16 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಡಿಕ್ಲೇರ್ ವೇಳೆ ಎಡವಟ್ಟು – ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗ್ತಾರಾ ಗಿಲ್?
ಎರಡು ಪಂದ್ಯವಾಡಿ ಒಂದು ಪಂದ್ಯ ಗೆದ್ದಿರುವ ಬಾಂಗ್ಲಾ 5ನೇ ಸ್ಥಾನದಲ್ಲಿದ್ದರೆ ಆಡಿದ ಒಂದು ಪಂದ್ಯ ಸೋತಿರುವ ವಿಂಡೀಸ್ 6ನೇ ಸ್ಥಾನ ಪಡೆದಿದೆ. ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ 2025-27ರ ಟೂರ್ನಿಯಲ್ಲಿ ಇಲ್ಲಿಯವರೆಗೆ ಯಾವುದೇ ಪಂದ್ಯ ಆಡಿಲ್ಲ.
ಯಾವ ರೀತಿ ಅಂಕ ನೀಡಲಾಗುತ್ತೆ?
– ಗೆಲುವಿಗೆ 12 ಅಂಕ
– ಟೈ ಆದರೆ 6 ಅಂಕ
– ಡ್ರಾಗೆ 4 ಅಂಕ
– ತಂಡಗಳನ್ನು ಗೆದ್ದ ಅಂಕಗಳ ಶೇಕಡಾವಾರು ಪ್ರಕಾರ ಶ್ರೇಣೀಕರಿಸಲಾಗುತ್ತದೆ.
– ನಿಧಾನಗತಿಯ ಓವರ್ ಎಸೆದರೆ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.