ಸ್ಯಾಂಡಲ್‌ವುಡ್‌ನ ಖ್ಯಾತ ಖಳನಟರಾಗಿದ್ದ ತೂಗುದೀಪ ಶ್ರೀನಿವಾಸ್ ಅವರ ಬಳಿಕ ಅವರ ಮಕ್ಕಳಿಬ್ಬರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಹಿರಿಯ ಮಗ ದರ್ಶನ್ (Darshan) ಖ್ಯಾತ ನಟನಾಗಿದ್ರೆ, ಕಿರಿಯ ಮಗ ದಿನಕರ್ ಖ್ಯಾತ ನಿರ್ದೇಶಕನಾಗಿ ಗುರುತಿಸಿಕೊಂಡರು. ಇದೀಗ ತೂಗುದೀಪ ಶ್ರೀನಿವಾಸ್ (Thoogudeepa Srinivas) ಮೊಮ್ಮಗ ಅಂದರೆ ಮಗಳ ಮಗ ಚಂದು (Chandu) ಅಲಿಯಾಸ್ ಚಂದ್ರಕುಮಾರ್ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡಲು ವೇದಿಕೆ ರೆಡಿಯಾಗಿದೆ. ದರ್ಶನ್, ಸೋದರಳಿಯನನ್ನು ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಅಂದಹಾಗೆ ಚಂದು ಈಗಾಗ್ಲೇ ಪರಿಚಯವಿರುವ ಮುಖ. ಯಾಕಂದ್ರೆ ಹಲವು ವರ್ಷಗಳಿಂದ ಸೋದರಮಾವ ದರ್ಶನ್ ಅವರ ಜೊತೆಯಲ್ಲೇ ಚಂದು ಇದ್ದರು. ಈಗಲೂ ಇದ್ದಾರೆ. ಇದೇ ಚಂದು, ಕಾಟೇರ ಸಿನಿಮಾದಲ್ಲಿ ಕಾಟೇರನ ಬಾಲ್ಯದ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ರು. ಬಹಳ ವರ್ಷಗಳಿಂದ ಚಂದು ಸಿನಿಮಾ ಜಗತ್ತಿಗೆ ಎಂಟ್ರಿ ಕೊಡಲು ಸಿದ್ಧರಾಗಿದ್ದು, ತೆರೆಯ ಹಿಂದಿನ ಕಾರ್ಯಗಳನ್ನ ಮಾವನ ಸಿನಿಮಾಗಳಿಂದ ನೋಡುತ್ತಲೇ ಬಂದಿದ್ದಾರೆ. ಇದೀಗ ದರ್ಶನ್ ಅಕ್ಕನ ಮಗ ಚಂದು ಹೀರೋ ಆಗಿ ಎಂಟ್ರಿ ಕೊಡಲು ಸಿದ್ಧರಾಗಿದ್ದು, ಆ ಚಿತ್ರ ಇದೇ ಬರುವ ಶ್ರಾವಣ ಮಾಸಕ್ಕೆ ಆರಂಭವಾಗುತ್ತೆ ಎನ್ನಲಾಗುತ್ತಿದೆ. ಇದನ್ನೂ ಓದಿ: `ಎಕ್ಕ’ ಸಿನಿಮಾ ರಿಲೀಸ್‌ಗೆ ದಿನಗಣನೆ – ಮಂತ್ರಾಲಯ ರಾಯರ ದರ್ಶನ ಪಡೆದ ಯುವ ರಾಜ್‌ಕುಮಾರ್
ನೋಟದಲ್ಲಿ ದರ್ಶನ್‌ರನ್ನೇ ಹೋಲುವ ದಚ್ಚು ಅಕ್ಕನ ಮಗ ಚಂದು, ಹೀರೋ ಆಗಿ ಎಂಟ್ರಿ ಕೊಡಲು ಏನ್ ಬೇಕೋ ಅದೆಲ್ಲ ಸಿದ್ಧತೆಯನ್ನು ಹಲವು ವರ್ಷಗಳಿಂದ ಮಾಡ್ಕೊಂಡೇ ಬಂದಿದ್ದಾರೆ. ಇದನ್ನೂ ಓದಿ: ಒಳ ಉಡುಪು ಕಾಣುವಂತ ಉಡುಗೆಯಲ್ಲಿ ದೇಹಸಿರಿ ತೋರಿಸಿದ ಉರ್ಫಿ – ಪಡ್ಡೆಗಳು ಕಂಗಾಲು
ಇದೇ ಚಂದು, ದರ್ಶನ್ ಅಭಿನಯಿಸುತ್ತಿರುವ ಡೆವಿಲ್ (Devil) ಸಿನಿಮಾದಲ್ಲೂ ಚಂದು ಪುಟ್ಟ ಪಾತ್ರ ಮಾಡಬೇಕಿತ್ತು. ಆದರೆ ಅಭಿಮಾನಿಗಳ ಅತಿರೇಕ ವರ್ತನೆಯಿಂದ ಚಂದು ಅವರನ್ನು ಸಿನಿಮಾದಿಂದ ಕೈ ಬಿಟ್ಟಿದ್ದಾಗಿ ಖುದ್ದು ದರ್ಶನ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕುವ ಮುಖಾಂತರ ಹೇಳಿಕೊಂಡಿದ್ದರು. ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕಿಚ್ಚ – ಸುದೀಪ್ 47ನೇ ಸಿನಿಮಾ ಅನೌನ್ಸ್
ಇದೀಗ ದರ್ಶನ್ ತಮ್ಮ ಸಹೋದರಿಯ ಪುತ್ರನ ಕನಸು ನನಸು ಮಾಡುತ್ತಿದ್ದಾರೆ. ತಮ್ಮದೇ ಬ್ಯಾನರ್ ಮೂಲಕವೇ ಚಂದುವನ್ನ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರಂತೆ. ನಿರ್ದೇಶನ ಯಾರದ್ದು ಸೇರಿದಂತೆ ಇನ್ನಿತರ ವಿಚಾರಗಳು ಒಂದೊಂದಾಗೇ ರಿವೀಲ್ ಆಗಬೇಕಿದೆ.