ವಿಚಿತ್ರ ಉಡುಗೆ ಧರಿಸುವ ಮೂಲಕವೇ ಸದಾ ಟ್ರೆಂಡ್‌ನಲ್ಲಿರುವ ಹಿಂದಿ ‘ಬಿಗ್ ಬಾಸ್’ (Bigg Boss) ಖ್ಯಾತಿಯ ಉರ್ಫಿ ಜಾವೇದ್ (Urfi Javed) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಒಳ ಉಡುಪು ಕಾಣುವಂತಹ ಕಡು ನೀಲಿ ಬಣ್ಣದ ಉಡುಗೆ ಧರಿಸಿ ಫೋಟೋ ಶೂಟ್ ಮಾಡಿಸಿದ್ದು, ಇದನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ ಫೋಟೋ ಶೂಟ್‌ಗೆ ಬ್ರೇಕ್ ನೀಡಿದ್ದ ಉರ್ಫಿ ಮತ್ತೆ ಫೋಟೋಸ್ ಹಂಚಿಕೊಂಡಿರೋದು ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದೆ. ಕೆಲ ನೆಟ್ಟಿಗರು ನಟಿಯ ಬೋಲ್ಡ್ ಅವತಾರಕ್ಕೆ ʻಸಖತ್ ಸೆಕ್ಸಿʼ ಅಂತಾ ಕಾಮೆಂಟ್ ಮಾಡಿದ್ರೆ ಇನ್ನೊಂದಿಷ್ಟು ಬಟ್ಟೆ ಕಡಿಮೆ ಮಾಡಿದ್ರೆ ಚೆನ್ನಾಗಿರುತ್ತಿತ್ತು ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಸಹಜವಾಗಿ ಚಿತ್ರ ನಟಿಯರು ಫಂಕ್ಷನ್ಗಳಿಗೆ ಹೋಗುವಾಗ.. ರೆಡ್ ಕಾರ್ಪೆಟ್ ಮೇಲೆ ನಡೆಯುವಾಗ ಅವರ ಡ್ರೆಸ್ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಈ ಹಿಂದೆ ಕೂಡ ಉರ್ಫಿ ಒಳ ಉಡುಪು ಧರಿಸದೆಯೇ ಫ್ಯಾಶನ್ ಡ್ರೆಸ್ ತೊಟ್ಟು ಭಾರೀ ಟ್ರೋಲ್‌ಗೆ ಒಳಗಾಗಿದ್ದರು. ಅದಕ್ಕೂ ಮುನ್ನ ಬಟ್ಟೆಯೊಳಗೆ ಬ್ರಹ್ಮಾಂಡ ತೋರಿಸಿದ್ದರು. ಬಳಿಕ ಪ್ಲಾಸ್ಟಿಕ್, ಹೂವು, ಎಲೆಗಳು, ನೋಟ್, ಬಾಳೆ ಹಣ್ಣಿನ ಸಿಪ್ಪೆಯಿಂದ ಡಿಫರೆಂಟ್ ಉಡುಗೆಗಳನ್ನು ಧರಿಸಿ ನಟಿ ಹಾಟ್ ಆಗಿ ಕಾಣಿಸಿಕೊಂಡಿದ್ದರು.
ಉರ್ಫಿ ಜಾವೇದ್ ಅವರು ಬೇಪನ್ಹಾ, ಡಿಯಾನ್, ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ, ಬಡೆ ಭಯ್ಯಾ, ಐ ಮೇರೆ ಹಮ್ಸಾಫರ್, ಚಂದ್ರ ನಂದಿನಿ ಮತ್ತು ಮೇರಿ ದುರ್ಗಾ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.