Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Crime

PSI ಪರೀಕ್ಷೆಯಲ್ಲಿ ಫೇಲ್‌, ಆದ್ರೂ 2 ವರ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದ ಐನಾತಿ ಮಹಿಳೆ ಅಂದರ್‌

Public TV
Last updated: July 6, 2025 1:33 pm
Public TV
Share
3 Min Read
Fake PSI
SHARE

– ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಈ ಹೆಣ್ಣು ಯಾರು?

ಜೈಪುರ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಅಧಿಕಾರಿ ಆಗಬೇಕು ಅಂದ್ರೆ ವರ್ಷಾನುಗಟ್ಟಲೆ ತಪಸ್ಸಿನಂತೆ ಕುಳಿತು ಓದುತ್ತಾರೆ. ಪರೀಕ್ಷೆ ಬರೆದು, ಸಂದರ್ಶನ ಎದುರಿಸಲು ಇನ್ನಿಲ್ಲದ ತರಬೇತಿ ಪಡೆಯುತ್ತಾರೆ. ಆದ್ರೆ ಇಲ್ಲೊಬ್ಬಳು ಐನಾತಿ ಹೆಣ್ಣು ಪರೀಕ್ಷೆಯಲ್ಲಿ ಫೇಲ್‌ ಆಗಿದ್ದರೂ 2 ವರ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದಾಳೆ. ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಅಂತ ಹೇಳ್ಕೊಂಡು ರಾಜಸ್ಥಾನ ಪೊಲೀಸ್ ಅಕಾಡೆಮಿ (Rajasthan Police Academy) ಟ್ರೈನಿಂಗ್‌ಗೆ ಹಾಜರಾಗಿದ್ದಾಳೆ. ಹಿರಿಯ ಅಧಿಕಾರಿಗಳೊಂದಿಗೆ ಫೋಟೋ ತೆಗೆಸಿಕೊಂಡು ತಾನು ಪೊಲೀಸ್‌ ಅಧಿಕಾರಿ ಅಂತಲೇ ಬಿಲ್ಡಪ್‌ ಕೊಡ್ತಿದ್ದ ಮಹಿಳೆ ಈಗ ಸಿಕ್ಕಿಬಿದ್ದಿದ್ದಾಳೆ.

Fake PSI 3

ಬಂಧಿತ ಆರೋಪಿ ಮಹಿಳೆಯನ್ನ ಮೋನಾ ಬುಗಾಲಿಯಾ (Mona Bugalia ಅಲಿಯಾಸ್ ಮೂಲಿ ದೇವಿ ಎಂದು ಗುರುತಿಸಲಾಗಿದೆ. 2023ರಲ್ಲಿ ಈಕೆ ವಿರುದ್ಧ ದೂರು ದಾಖಲಾದ ಬಳಿಕ ಪರಾರಿಯಾಗಿದ್ದಳು. ಆದ್ರೆ ಈ ವಾರದ ಆರಂಭದಲ್ಲಿ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಆಕೆಯನ್ನ ಬಂಧಿಸಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕೌಟುಂಬಿಕ ಕಲಹಕ್ಕೆ ಬೇಸತ್ತು ಪಿಎಸ್‍ಐ ಆತ್ಮಹತ್ಯೆ – ಡೆತ್‍ನೋಟ್‍ನಲ್ಲಿ ಲಾಡ್ಜ್ ಮಾಲೀಕರ ಕ್ಷಮೆಯಾಚನೆ

Fake PSI 2

ಪೊಲೀಸರು ಹೇಳೋದೇನು?
ಪೊಲೀಸ್‌ ಮೂಲಗಳ ಪ್ರಕಾರ, ಮೋನಾ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ (PSI Exam) ಅರ್ಹತೆಯನ್ನೇ ಗಳಿಸಿಲ್ಲ. ಆದರೂ ರಾಜಸ್ಥಾನ ಪೊಲೀಸ್ ಅಕಾಡೆಮಿ (RPA) ಪ್ರವೇಶಿಸಿ ತರಬೇತಿ ಪಡೆದುಕೊಂಡಿದ್ದಾಳೆ. ಆಕೆಯನ್ನು ಅರೆಸ್ಟ್‌ ಮಾಡಿದ ಬಳಿಕ ತಾನು ವಾಸವಿದ್ದ ಬಾಡಿಗೆ ಮನೆಯನ್ನ ಶೋಧಿಸಿದಾಗ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಸುಮಾರು 7 ಲಕ್ಷ ರೂ. ನಗದು, ಮೂರು ಪ್ರತ್ಯೇಕ ಪೊಲೀಸ್‌ ಸಮವಸ್ತ್ರ ಹಾಗೂ ಹಲವಾರು ಪ್ರಶ್ನೆಪತ್ರಿಕೆಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದೇ ವೇಳೆ ಆಕೆ ಬಳಸಿದ್ದ ನಕಲಿ ದಾಖಲೆಗಳೂ ಪತ್ತೆಯಾದವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತುಮಕೂರು | ಹೋಟೆಲ್‌ನಲ್ಲಿ ದಾವಣಗೆರೆ ಪಿಎಸ್‍ಐ ನೇಣಿಗೆ ಶರಣು

PSI cap

ಯಾರು ಈ ಐನಾತಿ?
ಮೋನಾ ಅಲಿಯಾಸ್‌ ಮೂಲಿ ದೇವಿ ರಾಜಸ್ಥಾನದ ನಾಗೌರ್ ಜಿಲ್ಲೆಯ ನಿಂಬಾಕೆಬಾಸ್ ಎಂಬ ಗ್ರಾಮದವಳು. ಆಕೆಯ ತಂದೆ ಟ್ರಕ್ ಚಾಲಕ. ಅಧಿಕೃತ ದಾಖಲೆಗಳಿಂದ ಆಕೆ ರಾಜಸ್ಥಾನದ ಸಬ್-ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಎಂದಿಗೂ ಉತ್ತೀರ್ಣಳಾಗಿಲ್ಲ ಅನ್ನೋದು ಗೊತ್ತಾಗಿದೆ. 2021ರಲ್ಲಿ ಪರೀಕ್ಷೆ ಬರೆದಿದ್ದಳು, ಆದ್ರೆ ಫೇಲ್‌ ಆಗಿದ್ದಳು, ಬಳಿಕ ʻಮೂಲಿ ದೇವಿʼ ಎಂಬ ಹೆಸರಿನಲ್ಲಿ ನಕಲಿ ದಾಖಲೆಗಳನ್ನ ಸೃಷ್ಟಿಸಿ ತಾನು ಸಬ್‌ ಇನ್ಸ್‌ಪೆಕ್ಟರ್‌ ಆಗಿ ಆಯ್ಕೆಯಾಗಿದ್ದೇನೆ ಅಂತ ತನ್ನ ಸೋಷಿಯಲ್‌ ಮೀಡಿಯಾಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಳು. ಇದನ್ನೂ ಓದಿ: ಪುತ್ತೂರು | ವಿಹರಿಸುತ್ತಿದ್ದ ಜೋಡಿಗೆ ಕಿರುಕುಳ – ನಿಂದಿಸಿ ವಿಡಿಯೋ ಹರಿಬಿಟ್ಟ ಪುಂಡರು

ಮೋನಾ ಸಿಕ್ಕಿಬಿದ್ದಿದ್ದು ಹೇಗೆ?
ಸಬ್-ಇನ್ಸ್‌ಪೆಕ್ಟರ್ ನೇಮಕಾತಿಗೆ ಪ್ರತ್ಯೇಕವಾಗಿ ಉದ್ದೇಶಿಸಲಾದ ವಾಟ್ಸಾಪ್ ಗ್ರೂಪ್‌ಗೆ ಸೇರಿಕೊಂಡಳು. ತಾನು ಕ್ರೀಡಾಕೋಟದಲ್ಲಿ ಆಯ್ಕೆಯಾಗಿರುವುದಾಗಿ ರಾಜಸ್ಥಾನ ಪೊಲೀಸ್ ಅಕಾಡೆಮಿಯಲ್ಲಿ ತನ್ನನ್ನ ಪರಿಚಯಿಸಿಕೊಂಡಿದ್ದಳು. 2 ವರ್ಷಗಳ ಕಾಲ ಅಧಿಕೃತ ಸಮವಸ್ತ್ರ ಧರಿಸಿಯೇ ಆರ್‌ಪಿಎಯ ಪೆರೇಡ್ ಮೈದಾನದಲ್ಲಿ ಕಾಣಿಸಿಕೊಂಡಿದ್ದಳು. ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ತನ್ನನ್ನ ತಾನು ಪ್ರಮೋಟ್‌ ಮಾಡಿಕೊಳ್ತಿದ್ದಳು. ಜೊತೆಗೆ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಸ್ಫೋರ್ತಿದಾಯಕ ಭಾಷಣ ಬಿಗಿಯುತ್ತಾ, ಹಿರಿಯ ಅಧಿಕಾರಿಗಳೊಂದಿಗೆ ಪೋಸ್‌ ಕೊಟ್ಟು ಫೋಟೋಗಳನ್ನು ಹಂಚಿಕೊಂಡಿದ್ದಳು. ಈ ವೇಳೆ ಕೆಲ ಟ್ರೈನಿ ಪಿಎಸ್‌ಐಗಳು ಆಕೆಯ ಗುರುತಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ, ಆಂತರಿಕ ವಿಚಾರಣೆ ಶುರುಮಾಡಲು ಪ್ರಾರಂಭಿಸಿದ್ದರು. ಆ ಬಳಿಕ ಪರಾರಿಯಾಗಿದ್ದ ಮೋನಾ ವಾರದ ಹಿಂದೆಯಷ್ಟೇ ಸಿಕ್ಕಿಬಿದ್ದಿದ್ದಾಳೆ. ಪೊಲೀಸರ ವಿಚಾರಣೆ ವೇಳೆ ಆಕೆ ನಕಲಿ ಐಡಿ ಕಾರ್ಡ್‌, ದಾಖಲೆ ಸೃಷ್ಟಿಸಿರುವುದಾಗಿ ಒಪ್ಪಿಕೊಂಡಿದ್ದಾಳೆ.

ತನ್ನ ಕುಟುಂಬದಲ್ಲಿನ ನಾಲ್ವರು ಸಹೋದರಿಯರನ್ನ ಮೆಟ್ಟಿಸಲು ಹಾಗೂ ಪೊಲೀಸರ ಅಧಿಕಾರ ಬಳಸಿಕೊಳ್ಳಲು ಈ ಕೆಲಸ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಾದಕ ವಸ್ತು, ಶಸ್ತ್ರಾಸ್ತ್ರ ಕೇಸ್‌ಲ್ಲಿ ಕರ್ನಾಟಕದ ಇಬ್ಬರು ಸೇರಿ 9 ಜನ ಅರೆಸ್ಟ್

TAGGED:Fake PSIMona BugaliaMooli DeviPSI ExamRajasthan Cops
Share This Article
Facebook Whatsapp Whatsapp Telegram

You Might Also Like

afghanistan men
Latest

6ರ ಬಾಲಕಿಗೆ 45 ವರ್ಷದ ಅಫ್ಘಾನ್ ವ್ಯಕ್ತಿ ಜೊತೆ ಮದುವೆ – 9 ವರ್ಷದವರೆಗೆ ಮದುವೆಯಾದವನ ಮನೆಗೆ ಕಳಿಸದಂತೆ ತಾಲಿಬಾನ್ ಸೂಚನೆ

Public TV
By Public TV
47 seconds ago
Siddaramaiah 6
Bengaluru City

ಅತ್ತ ಡೆಲ್ಲಿಯಲ್ಲಿ ಸಿದ್ದರಾಮಯ್ಯ ಕ್ಲಿಯರ್ ಮೆಸೇಜ್ – ಬೆಂಗಳೂರಲ್ಲಿ ಆಪ್ತರು ದಿಲ್ ಖುಷ್

Public TV
By Public TV
11 minutes ago
Ranganath
Bengaluru City

ಡಿ.ಕೆ.ಶಿವಕುಮಾರ್ ಇಂದಲ್ಲ, ನಾಳೆ ಸಿಎಂ ಆಗೇ ಆಗ್ತಾರೆ: ಶಾಸಕ ರಂಗನಾಥ್

Public TV
By Public TV
27 minutes ago
DKShivakumar Siddaramaiah And RahulGandhi
Bengaluru City

ರಾಹುಲ್‌ ಪತ್ರ – ಸರ್ಕಾರಿ ಪದವಿ ಕಾಲೇಜುಗಳಲ್ಲಿ 35 ವರ್ಷದ ಬಳಿಕ ವಿದ್ಯಾರ್ಥಿ ಚುನಾವಣೆಗೆ ಅನುಮತಿ?

Public TV
By Public TV
35 minutes ago
Pradeep Eshwar
Bengaluru City

2029ಕ್ಕೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರ್ತೀವಿ, ಬಿಜೆಪಿ ನಾಯಕರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

Public TV
By Public TV
43 minutes ago
CRIME
Crime

ಗಾಂಜಾ ಮತ್ತಿನಲ್ಲಿ ಬಾಲಕಿಯ ರೇಪ್ ಮಾಡಿ ಹತ್ಯೆ – ಕಾಮುಕ ಅರೆಸ್ಟ್

Public TV
By Public TV
54 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?