ನವದೆಹಲಿ: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ (PM Modi) ಟ್ರಿನಿಡಾಡ್ ಹಾಗೂ ಟೊಬೆಗೊಗೆ (Trinidad and Tobago) ಭೇಟಿ ನೀಡಿದ ವೇಳೆ ಅಲ್ಲಿನ ಪ್ರಧಾನಿಗೆ `ಮಹಾಕುಂಭದ ಜಲ’ ಹಾಗೂ `ರಾಮಮಂದಿರದ ಪ್ರತಿಕೃತಿ’ಯ ಉಡುಗೊರೆ ನೀಡಿ ಗೌರವಿಸಿದ್ದಾರೆ.
ಐದು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಸದ್ಯ ಎರಡು ದಿನಗಳ ಕಾಲ ಟ್ರಿನಿಡಾಡ್ ಹಾಗೂ ಟೊಬೆಗೊ ದೇಶದ ಪ್ರವಾಸದಲ್ಲಿದ್ದಾರೆ. ಈ ವೇಳೆ ಟ್ರಿನಿಡಾಡ್ ಮತ್ತು ಟೊಬೆಗೊದ ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ (Kamla Persad-Bissessar) ಅವರಿಗೆ `ಮಹಾಕುಂಭದ ಜಲ’ ಹಾಗೂ `ರಾಮಮಂದಿರದ ಪ್ರತಿಕೃತಿ’ಯನ್ನು ಉಡುಗೊರೆಯಾಗಿ ನೀಡಿದ್ದಾರೆ.ಇದನ್ನೂ ಓದಿ: ಢಾಬಾದಲ್ಲಿ ಬ್ಲಾಂಕೆಟ್ ಸುತ್ತಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ – ಬಾಯ್‌ಫ್ರೆಂಡ್ ಅರೆಸ್ಟ್
ಈ ವೇಳೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣ ಹಾಗೂ ದೇವಾಲಯದ ಮಹತ್ವವನ್ನು ಒತ್ತಿ ಹೇಳಿದರು. ನಿಮಗೆಲ್ಲರಿಗೂ ರಾಮನಲ್ಲಿ ಆಳವಾದ ನಂಬಿಕೆಯಿದೆ ಎಂಬುವುದರ ಅರಿವು ನನಗಿದೆ. ರಾಮಚರಿತಮಾನಸದಲ್ಲಿ, ಭಗವಾನ್ ರಾಮನ ನಗರವು ತುಂಬಾ ಸುಂದರವಾಗಿದೆ, ಅದರ ವೈಭವವನ್ನು ಪ್ರಪಂಚದಾದ್ಯಂತ ಕೊಂಡಾಡುತ್ತಾರೆ. ಸುಮಾರು 500 ವರ್ಷಗಳ ನಂತರ ರಾಮಲಲ್ಲಾ ಅಯೋಧ್ಯೆಗೆ ಮರಳಿರುವುದನ್ನು ನೀವೆಲ್ಲರೂ ಬಹಳ ಸಂತೋಷದಿಂದ ಸ್ವಾಗತಿಸಿದ್ದೀರಿ. ಜೊತೆಗೆ ರಾಮಮಂದಿರ ನಿರ್ಮಾಣ ಸಂದರ್ಭದಲ್ಲಿ ಪವಿತ್ರ ನೀರು ಹಾಗೂ ಶಿಲೆಗಳನ್ನು ಕಳುಹಿಸಿದ್ದೀರಿ. ಜೊತೆಗೆ 4,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದೀರಿ. ನಿಮ್ಮ ಹಾಗೇ ನಾನು ಕೂಡ ಭಕ್ತಿಯಿಂದ ಸರಯು ನದಿಯ ನೀರು ಹಾಗೂ ರಾಮಮಂದಿರದ ಪ್ರತಿಕೃತಿಯನ್ನು ತಂದಿದ್ದೇನೆ ಎಂದು ತಿಳಿಸಿದರು.
ಮೋದಿಯವರಿಗೆ ಟ್ರಿನಿಡಾಡ್ ಮತ್ತು ಟೊಬೆಗೊ ದೇಶದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ `ದಿ ಆರ್ಡರ್ ಆಫ್ ದಿ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಮತ್ತು ಟೊಬಾಗೊ’ (The Order of the Republic of Trinidad & Tobago) ನೀಡಲಿದೆ.ಇದನ್ನೂ ಓದಿ: ʻಪಬ್ಲಿಕ್ ಟಿವಿʼ ಸಿಬ್ಬಂದಿಗೆ ಸಮಗ್ರ ಆರೋಗ್ಯ ತಪಾಸಣೆ