ಎರಡು ದಿನಗಳ ಹಿಂದೆಯಷ್ಟೇ ಡೆವಿಲ್ (Devil) ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್ ಆಗಿತ್ತು. ಆ ವಿಡಿಯೋದಲ್ಲಿ ದರ್ಶನ್ (Darshan) ಪುತ್ರ ವಿನೀಶ್ ಮೇಕಪ್ ಮಾಡಿಕೊಳ್ಳುತ್ತಿರುವ ದೃಶ್ಯವೂ ಇತ್ತು. ಹಾಗಾಗಿ ಡೆವಿಲ್ ಚಿತ್ರದಲ್ಲಿ ವಿನೀಶ್ ಕೂಡ ಪಾತ್ರ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಈ ನಡುವೆ ಮತ್ತೊಂದು ವಿಷಯವು ಚರ್ಚೆಗೆ ಬಂದಿತ್ತು.
ಅಂದುಕೊಂಡಂತೆ ಆಗಿದ್ದರೆ ದರ್ಶನ್ ಸಹೋದರಿಯ ಮಗ ಈ ಸಿನಿಮಾದಲ್ಲಿ ನಟಿಸಬೇಕಿತ್ತು. ಅಕ್ಕನ ಮಗನ ಬದಲು ಪುತ್ರನಿಗೆ ನಟಿಸಲು ಅವಕಾಶ ಕೊಟ್ಟರಾ ದರ್ಶನ್ ಅನ್ನುವ ಪ್ರಶ್ನೆಯು ವಿಡಿಯೋ ವೈರಲ್ ಆದ ಮೇಲೆ ಎದ್ದಿತ್ತು. ದರ್ಶನ್ ಸಹೋದರಿ ಮಗ ಚಂದುಗೆ ದರ್ಶನ್ ಫ್ಯಾನ್ಸ್ ಕಾಲು ಮುಗಿದರು ಅನ್ನೋ ಕಾರಣಕ್ಕೆ ಡೆವಿಲ್ ಸಿನಿಮಾದಿಂದ ಕೈ ಬಿಟ್ಟಿರೋ ವಿಷ್ಯವನ್ನು ದರ್ಶನ್ ಅವರೇ ಬಹಿರಂಗಪಡಿಸಿದ್ದರು. ಇದೀಗ ಡೆವಿಲ್ ಸಿನಿಮಾದ ರಾಜಸ್ಥಾನ ಭಾಗದ ಶೂಟಿಂಗ್ ವಿಡಿಯೋ ರಿಲೀಸ್ ಆಗಿದ್ದು, ಅದರಲ್ಲಿ ದರ್ಶನ್ ಪುತ್ರ ವಿನೀಶ್ (Vineesh) ಮೇಕಪ್ ಮಾಡಿಕೊಳ್ಳುತ್ತಿರುವುದು ಕಾಣಬಹುದಾಗಿತ್ತು. ಇದನ್ನೂ ಓದಿ: 2026ರ ಹಾಲಿವುಡ್ ವಾಕ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ ದೀಪಿಕಾ ಪಡುಕೋಣೆ
ವಿನೀಶ್ ಮೇಕಪ್ ಮಾಡಿಕೊಳ್ಳುತ್ತಾ ಹೇರ್ ಸ್ಟೈಲ್ ಸರಿ ಮಾಡಿಕೊಳ್ಳುತ್ತಿರುವುದು ಡೆವಿಲ್ ಮೇಕಿಂಗ್ ಝಲಕ್‌ನಲ್ಲಿದೆ. ಜೊತೆಗೆ ಈ ಹಿಂದೆ ಐರಾವತ ಹಾಗೂ ಯಜಮಾನ ಚಿತ್ರದಲ್ಲಿ ತಂದೆ ಜೊತೆ ವಿನೀಶ್ ನಟಿಸಿದ್ದರು. ಈಗ ಡೆವಿಲ್ ಚಿತ್ರದಲ್ಲೂ ನಟಿಸಿದ್ದಾರಾ ಅನ್ನೋ ಕುತೂಹಲ ಮೂಡಿಸಿತ್ತು. ಸಿಕ್ಕಿರೋ ಮಾಹಿತಿ ಪ್ರಕಾರ ವಿನೀಶ್ ನಟಿಸಿಲ್ಲ. ಸುಮ್ಮನೆ ಮೇಕಪ್ ಮಾಡಿಕೊಂಡಿದ್ದರಷ್ಟೇ ಎನ್ನಲಾಗಿದೆ. ಇದನ್ನೂ ಓದಿ: ರಾಮಾಯಣ ಫಸ್ಟ್ ಟೈಟಲ್ ಟೀಸರ್ ರಿಲೀಸ್: ರಾಮ-ರಾವಣನ ಆರ್ಭಟ ಶುರು
ಮಾರ್ಚ್ ಕೊನೆ ವಾರದಲ್ಲಿ ಡೆವಿಲ್ ಚಿತ್ರತಂಡ ರಾಜಸ್ಥಾನಕ್ಕೆ ತೆರಳಿತ್ತು. ಉದಯಪುರ ರಾಫೆಲ್ಸ್ ಹೋಟೆಲ್‌ನಲ್ಲಿ 10 ದಿನಗಳ ಕಾಲ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಕೆಲವು ಸನ್ನಿವೇಶಗಳ ಜೊತೆಗೆ ಉದಯಪುರ ಶೆಡ್ಯೂಲ್‌ನಲ್ಲಿ ಸಣ್ಣದೊಂದು ಆಕ್ಷನ್ ಸೀಕ್ವೆನ್ಸ್ ಶೂಟ್ ಕೂಡ ಮಾಡಲಾಗಿದೆ.