ಕಾರವಾರ| ಕೊಡಸಳ್ಳಿ ವಿದ್ಯುತ್‌ಗಾರದ ಬಳಿ ಗುಡ್ಡ ಕುಸಿತ; ರಸ್ತೆ ಸಂಚಾರ ಬಂದ್

Public TV
1 Min Read
kodasalli power plant landslide

ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆಯಿಂದಾಗಿ ಕಾರವಾರ (Karwar) ತಾಲೂಕಿನ ಕದ್ರಾ ಬಳಿಯ ಬಾಳೆ ಮನೆ ಗ್ರಾಮದ ಬಳಿ ದೊಡ್ಡ ಪ್ರಮಾಣದ ಭೂ ಕುಸಿತವಾಗಿದ್ದು, ಕದ್ರಾ ಭಾಗದ ಬಾಳೆಮನೆ, ಸುಳಗೇರಿ ಕೊಡಸಳ್ಳಿ ಸಂಪರ್ಕ ರಸ್ತೆ ಕಡಿತವಾಗಿದೆ.

ಕದ್ರಾದಿಂದ ಕೊಡಸಳ್ಳಿ ಡ್ಯಾಮ್ ಸಂಪರ್ಕಿಸುವ ರಸ್ತೆ ಭೂಕುಸಿತವಾದ್ದರಿಂದ ಕೊಡಸಳ್ಳಿ ಜಲ ವಿದ್ಯುತ್‌ಗಾರದಲ್ಲಿ (Kodasalli Power House) ಕಾರ್ಯನಿರ್ವಹಿಸುತ್ತಿರುವ ಕೆಪಿಸಿ ಸಿಬ್ಬಂದಿಗೆ ತೆರಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಉತ್ತರ ಕನ್ನಡ – ಎರಡು ತಾಲೂಕುಗಳ ಶಾಲೆಗಳಿಗೆ ಇಂದು ರಜೆ ಘೋಷಣೆ

KWR BHU KUSITHA AV 3

ಅದೃಷ್ಟವಶಾತ್ ಬೆಳಗ್ಗೆ ರಸ್ತೆಯಲ್ಲಿ ಯಾವ ಸಂಚಾರವೂ ಇಲ್ಲದ ಸಂದರ್ಭದಲ್ಲಿ ಗುಡ್ಡ ಕುಸಿದಿದ್ದು, ದೊಡ್ಡ ಅನಾಹುತ ತಪ್ಪಿದೆ. ಈ ಹಿಂದೆ ಕೊಡಸಳ್ಳಿ ಬಳಿ ಗುಡ್ಡ ಕುಸಿಯುವ ಎಚ್ಚರಿಕೆಯನ್ನು ಜಿಯಾಲಜಿಕಲ್ ಸರ್ವೆ ಆಪ್ ಇಂಡಿಯಾ ವಿಜ್ಞಾನಿಗಳು ನೀಡಿದ್ದರು.

ದೊಡ್ಡ ಪ್ರಮಾಣದ ಭೂಕುಸಿತ ಉಂಟಾದರೆ ಕೊಡಸಳ್ಳಿ ಡ್ಯಾಮ್‌ಗೂ ತೊಂದರೆಯಾಗುವ ಎಚ್ಚರಿಕೆ ನೀಡಿದ್ದರು. ಭೂಕುಸಿತ ಪ್ರದೇಶದಲ್ಲಿ ಸಂಜೆ ಒಳಗೆ ಸಂಚಾರ ವ್ಯವಸ್ಥೆ ಕಲ್ಪಿಸುವುದಾಗಿ ಜಿಲ್ಲಾಡಳಿತದ ಮೂಲಗಳು ಹೇಳಿವೆ. ಇದನ್ನೂ ಓದಿ: ಮಂಗಳೂರು ಪಾಲಿಕೆಗೆ ಕೋಟ್ಯಂತರ ರೂ. ದೋಖಾ – 4,500 ಫೇಕ್ ಟ್ರೇಡ್ ಲೈಸೆನ್ಸ್ ಶಂಕೆ?

Share This Article