ಬೆಂಗಳೂರು: ಟೀ ಕಪ್ ಕೊಡದಿದ್ದಕ್ಕೆ ಹೋಟೆಲ್ ಸಿಬ್ಬಂದಿಗೆ ನಾಲ್ವರು ದುಷ್ಕರ್ಮಿಗಳು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಘಟನೆ ಶೇಷಾದ್ರಿಪುರಂನ (Sheshadripuram )ನಮ್ಮ ಫಿಲ್ಟರ್ ಕಾಫಿ ಶಾಪ್‌ನಲ್ಲಿ ನಡೆದಿದೆ.
ಬುಧವಾರ ಸಂಜೆ 6:50ರ ಸುಮಾರಿಗೆ ಈ ಘಟನೆ ನಡೆದಿದೆ. ಕಾಫಿ ಶಾಪ್‌ಗೆ ಬಂದಿದ್ದ ನಾಲ್ವರು ಕಾಫಿಯನ್ನು ಕೊಂಡು ಮತ್ತೊಂದು ಕಪ್ ಕೇಳಿದ್ದಾರೆ. ಈ ವೇಳೆ, ಹೋಟೆಲ್ ಸಿಬ್ಬಂದಿ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಕೆರಳಿದ ನಾಲ್ವರು, ಹೋಟೆಲ್ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಪಾಳಕ್ಕೆ ಹೊಡೆದು, ಮುಖಕ್ಕೆ ಗುದ್ದಿ, ಕಾಲಿನಿಂದ ಹೊಟ್ಟೆಗೆ ಒದ್ದು ವಿಕೃತಿ ಮೆರೆದಿದ್ದಾರೆ. ಇದನ್ನೂ ಓದಿ: ಪತಿಯಿಂದ ದೂರವಿದ್ದ ತಾಯಿ, ಮಗಳು ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣು
ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: 11ನೇ ಕ್ಲಾಸ್ ವಿದ್ಯಾರ್ಥಿಯ ಜೊತೆ 5 ಸ್ಟಾರ್ ಹೋಟೆಲಿನಲ್ಲಿ ಸೆಕ್ಸ್- ಮುಂಬೈ ಶಿಕ್ಷಕಿ ಅರೆಸ್ಟ್