– ಮೊದಲ ದಿನ 310 ರನ್ ಹೊಡೆದ ಭಾರತ
ಬರ್ಮಿಂಗ್‌ಹ್ಯಾಮ್: ನಾಯಕ ಶುಭಮನ್ ಗಿಲ್ (Shubman Gill) ಅವರ ಅಜೇಯ ಶತಕದ ನೆರವಿನಿಂದ ಇಂಗ್ಲೆಂಡ್ (Englad) ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ಉತ್ತಮ ಮೊತ್ತ ಪೇರಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 85 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿದೆ.
ಆರಂಭಿಕ ಆಟಗಾರ ರಾಹುಲ್ 2 ರನ್ ಗಳಿಸಿ ಔಟಾದರು. ಆದರೆ ಎರಡನೇ ವಿಕೆಟಿಗೆ ಏಕದಿನ ಶೈಲಿಯಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಕರುಣ್ ನಾಯರ್ ಬ್ಯಾಟ್ ಬೀಸಿ 90 ಎಸೆತಗಳಲ್ಲಿ 80 ರನ್ ಜೊತೆಯಾಟವಾಡಿ ಚೇತರಿಕೆ ನೀಡಿದರು. ಇದನ್ನೂ ಓದಿ: ಏಷ್ಯಾ ಕಪ್ ಟೂರ್ನಿಗೆ ಮುಹೂರ್ತ ಫಿಕ್ಸ್; ಸೆ.7ಕ್ಕೆ ಭಾರತ-ಪಾಕ್ ಮುಖಾಮುಖಿ
ಕರುಣ್ ನಾಯರ್ 31 ರನ್ ಗಳಿಸಿ ಔಟಾದರೆ ಯಶಸ್ವಿ ಜೈಸ್ವಾಲ್ 87 ರನ್(107 ಎಸೆತ, 13 ಬೌಂಡರಿ) ಹೊಡೆದು ಔಟಾದರು.ರಿಷಭ್ ಪಂತ್ 25 ರನ್ ಗಳಿಸಿದರೆ ನಿತೀಶ್ ಕುಮಾರ್ ರೆಡ್ಡಿ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಒಂದು ಕಡೆ ವಿಕೆಟ್ ಉರುಳುತ್ತಿದ್ದ ಗಿಲ್ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತುಕೊಂಡರು. ಗಿಲ್‌ಗೆ ರವೀಂದ್ರ ಜಡೇಜಾ (Ravindra Jadeja) ಉತ್ತಮ ಸಾಥ್ ನೀಡಿದ್ದು ಮುರಿಯದ 6ನೇ ವಿಕೆಟಿಗೆ 124 ಎಸೆತಗಳಲ್ಲಿ 99 ರನ್ ಜೊತೆಯಾಟವಾಡಿದ್ದಾರೆ. ಇದನ್ನೂ ಓದಿ: ಪತ್ನಿಗೆ ತಿಂಗಳಿಗೆ 4 ಲಕ್ಷ ಕೊಡಿ: ಮೊಹಮ್ಮದ್ ಶಮಿಗೆ ಹೈಕೋರ್ಟ್ ಸೂಚನೆ
𝐆𝐢𝐥𝐥 𝐫𝐨𝐚𝐫𝐬 𝐰𝐢𝐭𝐡 𝐛𝐚𝐭 🔥
Captain @ShubmanGill rises to the occasion with a composed century in the 2nd Test vs England 🥶#ENGvIND 👉 2nd TEST, Day 1 | LIVE NOW on JioHotstar ➡ https://t.co/g6BryBp5Tw pic.twitter.com/9nbXztnBD5
— Star Sports (@StarSportsIndia) July 2, 2025
ಗಿಲ್ ಅಜೇಯ 114 ರನ್(216 ಎಸೆತ, 12 ಬೌಂಡರಿ), ಜಡೇಜಾ ಅಜೇಯ 41 ರನ್(67 ಎಸೆತ, 5 ಬೌಂಡರಿ ಹೊಡೆದು ತಂಡದ ಮೊತ್ತವನ್ನು 300 ರನ್‌ಗಳ ಗಡಿ ದಾಟಿಸಿದರು.
ನಾಯಕನಾಗಿ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಸತತ ಶತಕ ಸಿಡಿಸುವ ಮೂಲಕ ಭಾರತದ ವಿಜಯ್ ಹಜಾರೆ, ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ ಸಾಧನೆಯನ್ನು ಗಿಲ್ ಸರಿಗಟ್ಟಿದ್ದಾರೆ.
𝐆𝐢𝐥𝐥 𝐫𝐨𝐚𝐫𝐬 𝐰𝐢𝐭𝐡 𝐛𝐚𝐭 🔥
Captain @ShubmanGill rises to the occasion with a composed century in the 2nd Test vs England 🥶#ENGvIND 👉 2nd TEST, Day 1 | LIVE NOW on JioHotstar ➡ https://t.co/g6BryBp5Tw pic.twitter.com/9nbXztnBD5
— Star Sports (@StarSportsIndia) July 2, 2025