ಹಾಸನ ಭಾಗದಿಂದ ಹೆಚ್ಚಿನ ಜನ ತಪಾಸಣೆಗೆ ಬರ್ತಿದ್ದಾರೆ: ಡಾ. ಸದಾನಂದ್
ಮೈಸೂರು: ಹಾಸನದಲ್ಲಿ (Hassan) ಹೃದಯಾಘಾತ (Heart Attack) ಪ್ರಕರಣಗಳು ಹೆಚ್ಚಾದ ಹಿನ್ನೆಲೆ, ಮೈಸೂರಿನ (Mysuru) ಜಯದೇವ ಹೃದ್ರೋಗ ಆಸ್ಪತ್ರೆಗೆ (Jayadeva Hospital) ಜನ ಲಗ್ಗೆ ಇಡುತ್ತಿದ್ದಾರೆ. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಿಂದ ಅಧಿಕ ಸಂಖ್ಯೆಯ ಜನ ಬಂದು ಹೃದಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ.
ಮುಂಜಾನೆಯೆಯಿಂದಲೇ ಆಸ್ಪತ್ರೆಯ ಓಪಿಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ನಿತ್ಯ 150 – 200 ಜನ ಬರುತ್ತಿದ್ದ ರೋಗಿಗಳು ಸಂಖ್ಯೆ ಈಗ ದಿಢೀರನೆ 500 ರಿಂದ 1000ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಶಿವಮೊಗ್ಗ | ಎರಡೇ ದಿನದಲ್ಲಿ ಹೃದಯಾಘಾತಕ್ಕೆ ನಾಲ್ವರು ಬಲಿ
ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯ ಸದಾನಂದ್, ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಿಢೀರನೆ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗೆ ಹೆಚ್ಚಾದ ಹೊರ ರೋಗಿಗಳಲ್ಲಿ ಹಾಸನದ ಭಾಗದ ಜನರ ಸಂಖ್ಯೆಯೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಹಾಸನದ ಜನ ಹೆಚ್ಚಿನ ಸಂಖ್ಯೆಯಲ್ಲಿ ಹೃದಯದ ತಪಾಸಣೆಗೆ ಬರುತ್ತಿದ್ದಾರೆ. ಇದರಲ್ಲಿ 90%ರಷ್ಟು ಜನಕ್ಕೆ ಯಾವುದೇ ಸಮಸ್ಯೆ ಇಲ್ಲ. ಕೇವಲ ಆತಂಕದಿಂದ ಬಂದಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: Hassan | ಎರಡೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಹೃದಯಾಘಾತಕ್ಕೆ ಬಲಿ