1 ಲಕ್ಷ ಕ್ಯೂಸೆಕ್ ದಾಟಿದ ಕೃಷ್ಣೆಯ ಒಳಹರಿವು – ನದಿ ತೀರದಲ್ಲಿ ಪ್ರವಾಹದ ಆತಂಕ

Public TV
1 Min Read
Krishna River

ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಕೃಷ್ಣಾ (Krishna River) ಹಾಗೂ ಅದರ ಉಪನದಿಗಳ ನೀರಿನ ಒಳ ಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ.

ಕೃಷ್ಣಾ ನದಿಯ ಒಳ ಹರಿವು 1 ಲಕ್ಷ ಕ್ಯೂಸೆಕ್ ದಾಟಿದೆ. ಸದ್ಯ ಕೃಷ್ಣಾ ನದಿಗೆ 1.9 ಲಕ್ಷ ಕ್ಯೂಸೆಕ್ ಒಳಹರಿವು ದಾಖಲಾಗಿದೆ. ದೂದ್‌ಗಂಗಾ, ವೇದಗಂಗಾ, ಹೀರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲೂ ಗಣನೀಯ ಏರಿಕೆಯಾಗಿದೆ. ಹೀರಣ್ಯಕೇಶಿ ನದಿ ಒಡಲು ಬಿಟ್ಟು ಹೊರಗೆ ಬಂದಿದ್ದು, ನದಿ ತೀರದ ಜಮೀನುಗಳಿಗೆ ನುಗ್ಗಿದೆ. ಇದನ್ನೂ ಓದಿ: ಬಾಂಬ್‌ ದಾಳಿ ನಡೆದಿರೋದು ಸ್ಪಷ್ಟ – ನಮ್ಮಲ್ಲೇನು ಆಗೇ ಇಲ್ಲ ಎನ್ನುತ್ತಿದ್ದ ಇರಾನ್‌ಗೆ ವಿಡಿಯೋ ಸಮೇತ ಅಮೆರಿಕ ತಿರುಗೇಟು

ಚಿಕ್ಕೋಡಿ (Chikkodi) ಉಪ ವಿಭಾಗ ವ್ಯಾಪ್ತಿಯ 11 ಸೇತುವೆಗಳು ಜಲಾವೃತಗೊಂಡಿದ್ದು, ಪರ್ಯಾಯ ಮಾರ್ಗಗಳ ಮೂಲಕ ಜನರು ಸಂಚಾರ ಮಾಡುತ್ತಿದ್ದಾರೆ. ಇನ್ನೂ ಒಂದು ವಾರಗಳ ಮಳೆಯಾಗುವ ಸಾಧ್ಯತೆಯಿದ್ದು, ನದಿ ತೀರದಲ್ಲಿ ಪ್ರವಾಹದ ಆತಂಕ ಆವರಿಸಿದೆ. ಇದನ್ನೂ ಓದಿ: ಅಂತರಿಕ್ಷ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾ – ಭಾರತದಿಂದ ‘ಸಪ್ತ ಸಂಶೋಧನೆ’

Share This Article