ಡಾ.ಎಪಿಜೆ ಅಬ್ದುಲ್ ಕಲಾಂ ಹೇರ್‌ಸ್ಟೈಲ್ ಕಾಪಿ ಮಾಡಿದ್ದರಂತೆ ಸಲ್ಮಾನ್ ಖಾನ್

Public TV
1 Min Read
Salman Khan APJ Abdul Kalam Hairstyle

ಸಲ್ಮಾನ್ ಖಾನ್ ಅಭಿನಯದ ಸೂಪರ್ ಹಿಟ್ ಚಿತ್ರಗಳಲ್ಲಿ `ತೇರೆನಾಮ್’ ಚಿತ್ರವೂ ಒಂದು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ (Salman Khan) ವಿಭಿನ್ನ ಗೆಟಪ್‌ನಲ್ಲಿ ಕಾಣಿಸ್ಕೊಂಡಿದ್ರು. ಹೇರ್‌ಸ್ಟೈಲ್ (Hair Style) ಇನ್ನೂ ಭಿನ್ನವಾಗಿತ್ತು. ಚಿತ್ರದಲ್ಲಿ ಸಲ್ಮಾನ್ ಖಾನ್ ಉದ್ದ ತಲೆಕೂದಲನ್ನ ಎರಡು ಪಾರ್ಟಿಷನ್ ಆಗಿ ಬಾಚಿಕೊಂಡಿದ್ರು. ಈ ಹೇರ್‌ಸ್ಟೈಲ್ ಆಗಿನ ಕಾಲದಲ್ಲಿ ಟ್ರೆಂಡ್ ಸೃಷ್ಟಿಸಿತ್ತು. ಆದರೆ ಆ ಹೇರ್‌ಸ್ಟೈಲ್ ಅನ್ನು ಎಲ್ಲಿಂದ ಕಾಪಿ ಮಾಡಿದ್ದು ಅನ್ನೋದ್ರ ರಹಸ್ಯವನ್ನ ಇದೀಗ ಸಲ್ಮಾನ್ ಖಾನ್ ಬಿಚ್ಚಿಟ್ಟಿದ್ದಾರೆ.‌

Salman Khan Abdul Kalam Hairstyle

2003ರಲ್ಲಿ ತೆರೆಕಂಡಿದ್ದ ತೇರೆನಾಮ್ ಚಿತ್ರದಲ್ಲಿ ಸಲ್ಮಾನ್ ಖಾನ್ ರಾಧೆಮೋಹನ್ ಹೆಸರಿನ ಪಾತ್ರದಲ್ಲಿ ಅಭಿನಯಿಸಿದ್ದರು. ಚಿತ್ರ ರಿಲೀಸ್ ಆದ್ಮೇಲೆ ಸಲ್ಮಾನ್ ಖಾನ್ ಹೇರ್‌ಸ್ಟೈಲ್ ಹಲವು ವರ್ಷ ಭಾರೀ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಆದರೆ ಈ ಹೇರ್‌ಸ್ಟೈಲ್‌ ಅನ್ನು ಸಲ್ಮಾನ್ ಖಾನ್ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಹೇರ್‌ಸ್ಟೈಲ್‌ನಿಂದ ಸ್ಪೂರ್ತಿ ಪಡೆದು ಅಳವಡಿಸಿಕೊಂಡಿದ್ದರಂತೆ. ಸಿನಿಮಾ ತಯಾರಾಗುವ ವೇಳೆ ರಾಷ್ಟ್ರಪತಿಗಳಾಗಿದ್ದ, ವಿಜ್ಞಾನಿ ಡಾ.ಎಪಿಜೆ ಅಬ್ದುಲ್ ಕಲಾಂ (DR APJ Abdul Kalam) ತಮ್ಮ ಸಾಧನೆ ಹಾಗೂ ನೋಟದಿಂದಲೂ ಭಿನ್ನರಾಗಿದ್ದರು. ಅವರ ಹೇರ್‌ಸ್ಟೈಲ್ ಸ್ಪೂರ್ತಿಗೊಂಡಿದ್ದ ಸಲ್ಮಾನ್ ತೇರೆನಾಮ್ ಚಿತ್ರದಲ್ಲಿ ಅದನ್ನ ಪ್ರಯೋಗ ಮಾಡಿರುವ ಗುಟ್ಟನ್ನ ಇದೀಗ ಶೋವೊಂದರಲ್ಲಿ ಬಿಟ್ಟುಕೊಟ್ಟಿದ್ದಾರೆ.

ದ ಗ್ರೇಟ್ ಇಂಡಿಯನ್ ಕಪಿಲ್ ಶೋ ಸೀಸನ್ 3 ಪ್ರಾರಂಭಿಕ ಎಪಿಸೋಡ್‌ನಲ್ಲಿ ಸಲ್ಮಾನ್ ಖಾನ್ ಈ ವಿಚಾರ ಬಹಿರಂಗಪಡಿಸಿದ್ದಾರೆ. ಆಗ ನಟ ರಾಹುಲ್ ರಾಯ್ ಕೂಡ ಅದೇ ರೀತಿಯ ಹೇರ್‌ಸ್ಟೈಲ್‌ನಿಂದ ಗುರುತಿಸಿಕೊಂಡಿದ್ರು. ಆದರೆ ನಾನು ಅಸಲಿಯಾಗಿ ಸ್ಪೂರ್ತಿ ಹೊಂದಿದ್ದು ಅಬ್ದುಲ್ ಕಲಾಂ ಅವರ ಹೇರ್‌ಸ್ಟೈಲ್ ಎಂದಿದ್ದಾರೆ ಸಲ್ಮಾನ್ ಖಾನ್. ಇದೀಗ 23 ವರ್ಷಗಳ ಬಳಿಕ ಟ್ರೆಂಡಿಂಗ್ ಹೇರ್‌ಸ್ಟೈಲ್‌ನ ಗುಟ್ಟು ರಟ್ಟು ಮಾಡಿದ್ದಾರೆ ಸಲ್ಮಾನ್ ಖಾನ್.

Share This Article