America Strikes In Iran | ಕಚ್ಚಾ ತೈಲ, ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಸಾಧ್ಯತೆ – ಆರ್ಥಿಕ ತಜ್ಞರ ಕಳವಳ

Public TV
3 Min Read
Oil Price Hike

– ಹಾರ್ಮುಜ್‌ ಜಲಸಂಧಿ ಬಂದ್‌ ಮಾಡಿದ್ರೆ ಭಾರತಕ್ಕೂ ನಷ್ಟ

ವಾಷಿಂಗ್ಟನ್‌/ಟೆಹ್ರಾನ್‌: ಇಸ್ರೇಲ್‌-ಇರಾನ್‌ ನಡುವಿನ ಸಂಘರ್ಷಕ್ಕೆ ಈಗ ಅಮೆರಿಕ ಎಂಟ್ರಿ (America Strikes In Iran) ಆಗಿರುವುದು ಜಾಗತಿಕ ಉದ್ವಿಗ್ನತೆ ಹೆಚ್ಚಿಸಿದೆ. ಇರಾನ್‌ ಮೇಲೆ ಅಮೆರಿಕ ವಾಯುದಾಳಿ ಬಳಿಕ ಷೇರು ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Iran Nuclear Sites

ಅಮೆರಿಕ ಮಧ್ಯಪ್ರವೇಶದಿಂದಾಗಿ ಕಚ್ಚಾ ತೈಲ ಬೆಲೆಯು (Crude oil Price) ಸುಮಾರು 120 ಡಾಲರ್‌ಗಳಿಗೆ (10,389 ರೂ.) ಏರಿಕೆಯಾಗುವ ಸಾಧ್ಯತೆಯಿದೆ. ಜೊತೆಗೆ ಚಿನ್ನದ ಬೆಲೆಯೂ ಏರಿಕೆಯಾಗಬಹುದು. ಸೋಮವಾರ (ಜೂ.23) ಎಂದು ಷೇರು ಮಾರುಕಟ್ಟೆ ತೆರೆದ ಬಳಿಕ ವಾರದ ಮೊದಲ ವಹಿವಾಟಿನಲ್ಲಿ ಇದರ ಪರಿಣಾಮ ಕಂಡುಬರುತ್ತದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಇದನ್ನೂ ಓದಿ: ವಿಶ್ವದ ಪವರ್‌ಫುಲ್‌ ವೆಪೆನ್‌ ʻಬಂಕರ್‌ ಬಸ್ಟರ್‌ʼ – 14,000 ಕೆಜಿ ತೂಕದ ಬಾಂಬ್‌ ಬಳಸಿ ಇರಾನ್‌ ಪರಮಾಣು ಕೇಂದ್ರದ ಮೇಲೆ ಅಮೆರಿಕ ದಾಳಿ

Donald Trump

1 ಬ್ಯಾರಲ್‌ 120 ಡಾಲರ್‌ಗೆ ಏರಿಕೆ ಸಾಧ್ಯತೆ
ಇರಾನ್‌ ಮೇಲಿನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬಳಿಕ ಜಾಗತಿಕ ಉದ್ವಿಗ್ನತೆ ಹೆಚ್ಚಾಗಿದೆ. ಇದು ಅನೇಕ ದೇಶಗಳಲ್ಲಿ ಹಣದುಬ್ಬರ ಉಂಟುಮಾಡುವ ಸಾಧ್ಯತೆಯನ್ನು ತಂದೊಡ್ಡಿದೆ. ಕಳೆದ ಕೆಲ ವಾರಗಳಲ್ಲಿ ಬ್ರೆಂಟ್‌ ಕಚ್ಚಾ ತೈಲ ಬೆಲೆ 18% ಏರಿಕೆಯಾಗಿ 79 ಡಾಲರ್‌ಗಳಿಗೆ ವಹಿವಾಟು ಆಗುತ್ತಿತ್ತು. ಸದ್ಯ ಬ್ರೆಂಟ್‌ ಕಚ್ಚಾ ತೈಲ 1 ಬ್ಯಾರಲ್‌ಗೆ 77.01 ಡಾಲರ್‌ನಷ್ಟಿದೆ (6,667 ರೂ.). ಅದೇ ವೇಳೆ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ 73.84 ಡಾಲರ್‌ನಂತೆ (6,393 ರೂ.) ವಹಿವಾಟು ನಡೆಯುತ್ತಿದೆ. ಆದ್ರೆ ಹೆಚ್ಚಿರುವ ಉದ್ವಿಗ್ನತೆಯಿಂದ ಏಕಾಏಕಿ 120-130 ಡಾಲರ್‌ಗಳಿಗೆ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Hormuz Strait

ತೈಲ ಬೆಲೆ ಏರಿಕೆಗೆ ಕಾರಣ ಏನು?
ತನ್ನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಹಾರ್ಮುಜ್‌ ಜಲಸಂಧಿಯನ್ನ (Hormuz Strait) ಮುಚ್ಚುವಂತೆ ಖಮೇನಿಯ ಪ್ರತಿನಿಧಿ ಹೊಸೈನ್ ಶರಿಯತ್‌ಮದಾರಿ ಪಟ್ಟುಹಿಡಿದಿದ್ದಾರೆ. ಹಾರ್ಮುಜ್‌ ಜಲಸಂಧಿ ಪ್ರಮುಖ ತೈಲ ಸಾಗಾಣಿಕೆ ಮಾರ್ಗವಾಗಿರುವುದರಿಂದ ಬಂದ್‌ ಮಾಡಿದ್ರೆ ಭಾರೀ ನಷ್ಟ ಅನುಭವಿಸಬೇಕಾಗುತ್ತೆ ಎಂದು ಹಡಗು ವಿಮಾ ಕಂಪನಿಗಳು ಹೇಳಿವೆ. ಇದರಿಂಧ ಕಚ್ಚಾ ತೈಲ ಬೆಲೆ ಏರಿಕೆಯಾಗಲಿದೆ. ಕೆಲ ಹಡಗು ಕಂಪನಿಗಳು ಈಗಾಗಲೇ ಪರ್ಯಾಯ ಮಾರ್ಗ ಹುಡುಕಲು ಶುರು ಮಾಡಿವೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾದ ಕ್ರೂರ ಕೃತ್ಯ – ಅಮೆರಿಕ ದಾಳಿ ಒಪ್ಪಿಕೊಂಡ ಇರಾನ್‌

ಜೆಪಿ ಮಾರ್ಗನ್, ಸಿಟಿ ಮತ್ತು ಡಾಯ್ಚ ಬ್ಯಾಂಕ್ ಅಂದಾಜಿನ ಪ್ರಕಾರ ಕಚ್ಚಾ ತೈಲ ಬೆಲೆ 120 ರಿಂದ 130 ಡಾಲರ್‌ಗಳಿಗೆ ಅಂದ್ರೆ ಅಂದಾಜು 10,389 ರೂ. ನಿಂದ 11,255 ರೂ. ವರೆಗೆ ಏರಿಕೆಯಾಗಲಿದೆ. ಇದನ್ನೂ ಓದಿ: ಇರಾನ್ ಹಾರ್ಮುಝ್ ಜಲಸಂಧಿ ಬಂದ್ ಮಾಡಿದ್ರೆ ಭಾರತಕ್ಕೆ ಭಾರೀ ನಷ್ಟ: ಹಿರಿಯ ಪ್ರಾಧ್ಯಾಪಕ ಎಸ್.ಆರ್ ಕೇಶವ್

Hormuz Strait 2

ಭಾರತಕ್ಕೆ ಏನು ನಷ್ಟ?
ಭಾರತದ 80% ರಷ್ಟು ಕಚ್ಚಾ ತೈಲ (Crude oil) ಆಮದು ಮಾಡಿಕೊಳ್ಳುತ್ತೆ. ಹಾರ್ಮೂಜ್‌ ಜಲಸಂಧಿ ಮಾರ್ಗದಿಂದಲೇ ಭಾರತಕ್ಕೆ ಆಮದು ಆಗಬೇಕು. ಭಾರತದಿಂದ ರಫ್ತಾಗುವ ಎಲ್ಲ ವಸ್ತುಗಳು ಸಹ ಈ ಜಲಸಂಧಿಯಿಂದಲೇ ಹೋಗಬೇಕು. ಈಗಾಗಲೇ ಆಮದು, ರಫ್ತು ಎರಡಲ್ಲೂ ಭಾರತಕ್ಕೆ ನಷ್ಟ ಶುರುವಾಗಿದೆ. ಒಂದು ವೇಳೆ ಜಲಸಂಧಿ ಬಂದ್‌ ಆದ್ರೆ ಭಾರತದ ಮೇಲೂ ಆರ್ಥಿಕ ಪರಿಣಾಮ ಬೀರಲಿದೆ ಎಂದು ಅರ್ಥಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಎಸ್.ಆರ್ ಕೇಶವ್ (SR Keshav) ಹೇಳಿದ್ದಾರೆ. ಇದನ್ನೂ ಓದಿ: ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್‌ ದಾಳಿ

Share This Article