ಅಕ್ರಮ ಗಣಿಗಾರಿಕೆ ತನಿಖೆ ಏನಾಯ್ತು – ಪಾದಯಾತ್ರೆ ನೆನಪಿಸಿ ಸಿಎಂಗೆ ಪತ್ರ ಬರೆದ ಹೆಚ್.ಕೆ ಪಾಟೀಲ್

Public TV
1 Min Read
HK Patil

ಬೆಂಗಳೂರು: ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ (Congress) ಸರ್ಕಾರಕ್ಕೆ ಸ್ವಪಕ್ಷೀಯರಿಂದಲೇ ಮುಜುಗರ ದಿನೇ ದಿನೇ ಹೆಚ್ಚಾಗುತ್ತಿದೆ.

ವಸತಿ ಯೋಜನೆಯಲ್ಲಿ ಗೋಲ್ಮಾಲ್ ಬಗ್ಗೆ ಶಾಸಕ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ಆಗಿ ಸರ್ಕಾರಕ್ಕೆ ಇರಿಸುಮುರಿಸು ಉಂಟುಮಾಡಿತ್ತು. ಇದೀಗ ಶಾಸಕರ ಬಳಿಕ ಸಚಿವ ಹೆಚ್.ಕೆ ಪಾಟೀಲ್ (H.K Patil) ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಖಾರವಾಗಿ ಸಚಿವರು ಸುದೀರ್ಘ 7 ಪುಟಗಳ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಸರ್ಕಾರಕ್ಕೆ ಅಕ್ರಮ ಗಣಿಗಾರಿಕೆಯ ತನಿಖೆಯನ್ನು ನೆನಪಿಸುವ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಇರಾನ್‌ ಪರ ನಿಲ್ಲಿ: ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ

ಪತ್ರದಲ್ಲಿ ಅಕ್ರಮ ಗಣಿಗಾರಿಕೆಯ ತನಿಖಾ ಪ್ರಗತಿ ಬಗ್ಗೆ ಉಲ್ಲೇಖಿಸಿದ್ದಾರೆ. ಗಣಿಗಾರಿಕೆ ವಿರುದ್ಧ ಪಾದಯಾತ್ರೆ ನಡೆಸಿದ್ದನ್ನು ನೆನಪಿಸಿದ್ದಾರೆ. ಅಲ್ಲದೇ, 2007ರಿಂದ 2011ರವರೆಗೆ ನಡೆದಿದ್ದ ಅಕ್ರಮ ಗಣಿಗಾರಿಕೆಯಲ್ಲಿ 1 ಲಕ್ಷದ 50 ಸಾವಿರ ಕೋಟಿ ರೂ. ನಷ್ಟ ಸಂಭವಿಸಿತ್ತು. ಅಕ್ರಮ ಗಣಿಗಾರಿಕೆ ವಿರುದ್ಧ ನೀವು ವಿರೋಧ ಪಕ್ಷದ ನಾಯಕರಾಗಿದ್ದಾಗ 320 ಕಿಲೋಮೀಟರ್ ಪಾದಯಾತ್ರೆ ಮಾಡಲಾಗಿತ್ತು. ಬಳಿಕ ಕೆಲ ಪ್ರಕರಣಗಳನ್ನ ತನಿಖಾ ಸಂಸ್ಥೆಗಳಿಗೆ ವಹಿಸಲಾಗಿತ್ತು. ಆದರೆ ಕೆಲ ಅಪರಾಧಿಗಳಿಗೆ ಮಾತ್ರ ಶಿಕ್ಷೆ ಆಗಿದೆ. ಬಹಳ ವರ್ಷವಾದರೂ ಎಸ್‍ಐಟಿ ತನಿಖೆ ಪ್ರಗತಿಯೂ ಸಾಧಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಅಕ್ರಮ ಗಣಿಗಾರಿಕೆ ಪ್ರಕರಣದ ತಪ್ಪಿತಸ್ಥರನ್ನು ಶಿಕ್ಷಿಸಲು ಪೊಲೀಸ್ ಇಲಾಖೆ ಅಡಿಯಲ್ಲಿ ಬಲಯುತವಾದ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: `ಮನಿ’ ಕೊಟ್ಟರಷ್ಟೇ ಸರ್ಕಾರಿ `ಮನೆ’ – ಜಮೀರ್‌ಗೆ ಗೊತ್ತಿಲ್ಲ ಅಂದ್ರೆ ತನಿಖೆ ಮಾಡಿಸಲಿ: ಬಿ.ಆರ್ ಪಾಟೀಲ್ ಬಾಂಬ್‌

Share This Article