ನಮ್ಮ ತಂಟೆಗೆ ಬಂದ್ರೆ ಹಿಂದೆಂದೂ ನೋಡಿರದ ಮಿಲಿಟರಿ ಬಲವನ್ನು ಎದುರಿಸಬೇಕಾಗುತ್ತೆ – ಇರಾನ್‌ಗೆ ಟ್ರಂಪ್‌ ಬಿಗ್‌ ವಾರ್ನಿಂಗ್‌

Public TV
2 Min Read
US ARMY

– ಇರಾನ್‌ ಮೇಲಿನ ದಾಳಿಗೆ ಇಸ್ರೇಲ್‌ ಅಮೆರಿಕದ ಶಸ್ತ್ರಾಸ್ತ್ರ ಬಳಸಿಕೊಂಡಿದೆ

ವಾಷಿಂಗ್ಟನ್‌/ಟೆಹ್ರಾನ್‌: ಇಸ್ರೇಲ್‌ ನಡೆಸಿದ ವಾಯುದಾಳಿಗೂ (Israel Air Strike) ನಮಗೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಇರಾನ್‌ ಅಮೆರಿಕದ ಮೇಲೆ ದಾಳಿ ಮಾಡಿದ್ರೆ, ಹಿಂದೆಂದೂ ನೋಡಿರದ ಮಟ್ಟದಲ್ಲಿ ನಮ್ಮ ಮಿಲಿಟರಿ ಬಲವನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಎಚ್ಚರಿಕೆ ನೀಡಿದ್ದಾರೆ.

Missiles launched from Iran towards Israel

ಇಸ್ರೇಲ್‌ ನೆರವಿಗೆ ಬಂದರೆ ನಿಮ್ಮ ನೌಕಾನೆಲೆಗಳನ್ನು ಧ್ವಂಸಗೊಳಿಸ್ತೇವೆ ಎಂದು ಇರಾನ್‌ (Iran) ಎಚ್ಚರಿಕೆ ನೀಡಿದ ಬೆನ್ನಲ್ಲೇ ಟ್ರಂಪ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಇರಾನ್‌ನ ಅಣ್ವಸ್ತ್ರ ಮತ್ತು ಮಿಲಿಟರಿ ನೆಲೆಗಳ ಮೇಲಿನ ಇಸ್ರೇಲ್‌ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಇರಾನ್‌ ನಮ್ಮ ಮೇಲೆ ಯಾವುದೇ ರೀತಿಯಲ್ಲಿ ದಾಳಿ ಮಾಡಿದ್ರೆ ಅಮೆರಿಕದ ಪಡೆಗಳ ಸಂಪೂರ್ಣ ಶಕ್ತಿ ಅಲ್ಲಿ ಬಂದಿಳಿಯಲಿದೆ. ಇಂದೆಂದೂ ನೋಡಿರದ ಮಟ್ಟದಲ್ಲಿ ಸೇನಾ ಬಲವನ್ನು (US Armed Forces) ಎದುರಿಸಬೇಕಾಗುತ್ತದೆ ಎಂದು ಭೀಕರ ದಾಳಿಯ ಮುನ್ಸೂಚನೆ ನೀಡಿದ್ದಾರೆ. ಇದನ್ನೂ ಓದಿ: Israel vs Iran War: ಹೊತ್ತಿ ಉರಿದ ಟೆಹ್ರಾನ್‌- ತೈಲ ಡಿಪೋ ಮೇಲೆ ಇಸ್ರೇಲ್‌ ದಾಳಿ 

ಒಂದು ಕಾಲದಲ್ಲಿ ಇರಾನ್ ಸಾಮ್ರಾಜ್ಯ ಎಂದು ಕರೆಯಲ್ಪಡುತ್ತಿತ್ತು, ಈಗ ಅವರಲ್ಲಿ ಏನೂ ಉಳಿದಿಲ್ಲ. ಇರಾನ್‌ನ ಪರಿಸ್ಥಿತಿ ಕುರಿತಂತೆ ರಾಷ್ಟ್ರೀಯ ಭದ್ರತಾ ತಂಡದ ಜೊತೆ ಮಾತುಕತೆ ನಡೆಸಿದ್ದೇನೆ. ದಾಳಿಯಲ್ಲಿ ನಮ್ಮ ದೇಶದ ಯಾವುದೇ ಪಾತ್ರವಿಲ್ಲ. ಆದರೆ, ಇರಾನ್ ಮೇಲಿನ ದಾಳಿಗೆ ಅಮೆರಿಕದ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಬಳಸಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕ್ಷಿಪಣಿ ದಾಳಿ, ಪ್ರತಿದಾಳಿ – ಇರಾನ್‌, ಇಸ್ರೇಲ್‌ನಲ್ಲಿ 80 ಮಂದಿ ಸಾವು

ಇನ್ನಷ್ಟು ವಿನಾಶವಾಗುವ ಮುನ್ನ ಇರಾನ್ ಒಪ್ಪಂದಕ್ಕೆ ಬರಲು ಮತ್ತೊಂದು ಅವಕಾಶವಿದೆ. ಇರಾನ್ ಮತ್ತು ಇಸ್ರೇಲ್ ನಡುವೆ ಸುಲಭವಾಗಿ ಒಪ್ಪಂದ ಮಾಡಿಕೊಳ್ಳಬಹುದು. ಜೊತೆಗೆ ಈ ರಕ್ತಸಿಕ್ತ ಸಂಘರ್ಷವನ್ನು ಕೊನೆಗೊಳಿಸಬಹುದು ಎಂದು ತಮ್ಮ ಸೋಷಿಯಲ್‌ ಮೀಡಿಯಾ ವೇದಿಕೆ ‘ಟ್ರುತ್ ಸೋಶಿಯಲ್’ನಲ್ಲಿ ಅಭಿಪ್ರಯಾ ಹಂಚಿಕೊಂಡಿದ್ದಾರೆ. ಅಲ್ಲದೇ ಇರಾನ್ ತನ್ನ ಪರಮಾಣು ಯೋಜನೆಗಳನ್ನು ಸ್ಥಗಿತಗೊಳಿಸುವ ಸಂಬಂಧ ಶೀಘ್ರ ಒಪ್ಪಂದಕ್ಕೆ ಬರುವಂತೆ ಒತ್ತಾಯಿಸಿದ್ದಾರೆ.

ಇರಾನ್‌-ಇಸ್ರೇಲ್‌ ನಡುವಿನ ಸಂಘರ್ಷ ತೀವ್ರಗೊಂಡಿದ್ದು ಮಧ್ಯಪ್ರಾಚ್ಯದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ:  ಗೋಲ್ಡ್‌ ಪ್ರಿಯರಿಗೆ ಶಾಕ್‌ – 1 ವಾರದಲ್ಲಿ ಚಿನ್ನದ ದರ 3,645 ರೂ. ಏರಿಕೆ

Share This Article