ಗ್ರಾಮಸ್ಥರ ನಿದ್ದೆಗೆಡಿಸಿದ ಚಿರತೆ – ಡ್ರೋನ್ ಕ್ಯಾಮೆರಾದಲ್ಲಿ ಸೆರೆ

Public TV
0 Min Read
Leopard

ರಾಯಚೂರು: ತಾಲೂಕಿನ ಡಿ.ರಾಂಪೂರ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಗೆ ಚಿರತೆ ಕಾಟ ಹೆಚ್ಚಾಗಿದ್ದು, ಡ್ರೋನ್ ಕ್ಯಾಮೆರಾದಲ್ಲಿ ಚಿರತೆಯ ಚಲನವಲನ ಸೆರೆಯಾಗಿದೆ.

ಕಳೆದ ಒಂದು ವಾರದಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ, ಇದೀಗ ಬೆಟ್ಟದ ಪೊದೆಗಳಲ್ಲಿ ಓಡಾಡಿರುವುದು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಟ್ಟದ ಕೆಳಗಿನ ಮನೆಗಳ ಸಮೀಪ ಚಿರತೆ ಓಡಾಡಿದ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಚಿರತೆ ಸೆರೆಗೆ ಬೋನ್ ಅಳವಡಿಸಿರುವ ಅರಣ್ಯಾಧಿಕಾರಿಗಳು, ಸಿಸಿಟಿವಿ ಕ್ಯಾಮೆರಾ ಮೂಲಕ ಚಿರತೆ ಚಲನವಲನ ಗಮನಿಸುತ್ತಿದ್ದಾರೆ. ಆದರೆ ಬೋನ್ ಬಳಿ ಬಂದಿದ್ದ ಚಿರತೆ ಮತ್ತೆ ಅಲ್ಲಿಂದ ಬೇರೆಡೆ ಹೋಗಿದೆ. ಜಮೀನುಗಳಿಗೆ ಹೋಗಲು ಸಹ ಗ್ರಾಮಸ್ಥರು ಭಯಪಡುತ್ತಿದ್ದಾರೆ.

Share This Article