ಇಡೀ ವಿಮಾನ ಸುಟ್ಟು ಭಸ್ಮವಾದರೂ ಒಂದಿಷ್ಟೂ ಹಾನಿಯಾಗದ ಸ್ಥಿತಿಯಲ್ಲಿ ಸಿಕ್ತು ಭಗವದ್ಗೀತೆ ಪುಸ್ತಕ

Public TV
1 Min Read
Ahmedabad Plane Crash Bhagavad Gita

ಗಾಂಧೀನಗರ: ಟೇಕಾಫ್‌ ಆದ ಕೆಲಹೊತ್ತಿನಲ್ಲೇ ಹಾಸ್ಟೆಲ್‌ಗೆ ಡಿಕ್ಕಿಯಾಗಿ ಪತನಗೊಂಡ ಏರ್‌ ಇಂಡಿಯಾದ ಬೋಯಿಂಗ್‌ ಡ್ರೀಮ್‌ಲೈನರ್‌ ವಿಮಾನ ಪತನಗೊಂಡಿತು. ವಿಮಾನದ ಜೊತೆ 241 ಪ್ರಯಾಣಿಕರು ಸಹ ಸುಟ್ಟು ಕರಕಲಾದರು. ಆದರೆ, ವಿಮಾನದ ಅವಶೇಷಗಳಲ್ಲಿ ಸಿಕ್ಕ ಭಗವದ್ಗೀತೆ ಪುಸ್ತಕ ಏನೂ ಆಗದೇ ಸುರಕ್ಷಿತವಾಗಿ ಸಿಕ್ಕಿದೆ.

ಗುರುವಾರ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಅವಶೇಷಗಳ ಅಡಿಯಲ್ಲಿ ಭಗವದ್ಗೀತೆಯ ಒಂದು ಆವೃತ್ತಿಯು ಹಾನಿಗೊಳಗಾಗದೇ ಉಳಿದಿದೆ. ಅಹಮದಾಬಾದ್ ವಿಮಾನ ಅಪಘಾತದ ಅವಶೇಷಗಳ ನಡುವೆ ಪತ್ತೆಯಾದ ಭಗವದ್ಗೀತೆಯ ಹಾನಿಯಾಗದ ಪುಟಗಳನ್ನು ವ್ಯಕ್ತಿಯೊಬ್ಬ ಪ್ರದರ್ಶಿಸುತ್ತಿರುವ ದೃಶ್ಯ ವೀಡಿಯೊದಲ್ಲಿದೆ. ಇದನ್ನೂ ಓದಿ:

242 ಪ್ರಯಾಣಿಕರಿದ್ದ ವಿಮಾನವು ಟೇಕಾಫ್ ಆದ 40 ಸೆಕೆಂಡ್‌ಗಳಲ್ಲೇ ಪತನಗೊಂಡಿತು. ಇದರಿಂದಾಗಿ 241 ಜನರು ಸಾವನ್ನಪ್ಪಿದರು. ವಿಮಾನದ 11A ನಲ್ಲಿ ಕುಳಿತಿದ್ದ ವಿಶ್ವಶ್ ಕುಮಾರ್ ರಮೇಶ್ ಎಂಬ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದರು.

ವಿಮಾನವು ವೈದ್ಯಕೀಯ ವಿಶ್ವವಿದ್ಯಾಲಯದ ಮೇಲೆ ಅಪ್ಪಳಿಸಿತು. ಇದರ ಪರಿಣಾಮವಾಗಿ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನಿಖೆಯನ್ನು ಪ್ರಾರಂಭಿಸಿದೆ. ಬೋಯಿಂಗ್ 787-8 ಬಗ್ಗೆ ಪ್ರಸ್ತುತ ಯಾವುದೇ ಸುರಕ್ಷತಾ ಕಾಳಜಿಗಳಿಲ್ಲ ಎಂದು ಯುಎಸ್ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ತಿಳಿಸಿದ್ದಾರೆ.

ದುರಂತಕ್ಕೆ ವಿಷಾದ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ ವಿಮಾನ ಅಪಘಾತ ಸ್ಥಳಕ್ಕೆ ಭೇಟಿ ನೀಡಿದರು. ಅವಘಡದಲ್ಲಿ ಬದುಕುಳಿತದ ಹಾಗೂ ಹಾಸ್ಟೆಲ್‌ ವಾಸಿಗಳಾಗಿದ್ದ ಗಾಯಾಳುಗಳ ಆರೋಗ್ಯವನ್ನು ಪ್ರಧಾನಿಗಳು ವಿಚಾರಿಸಿದರು.

Share This Article