Mayday ಅಂದ್ರೆ ವಿಮಾನ ತುಂಬಾ ಡೆಂಜರ್‌ನಲ್ಲಿದ್ದಂತೆ – ದುರಂತದ ಬಗ್ಗೆ ಯುವ ಮಹಿಳಾ ಪೈಲಟ್ ಹೇಳಿದ್ದೇನು?

Public TV
1 Min Read
pilot Pooja

ಬೆಂಗಳೂರು: ಮೇಡೇ ಅಂದರೆ ವಿಮಾನ ತುಂಬಾ ಡೆಂಜರ್‌ನಲ್ಲಿ ಇದೆ ಎಂದರ್ಥ ಎಂದು ಯುವ ಮಹಿಳಾ ಪೈಲಟ್ ಪೂಜಾ ಸದಾಂಗಿ ಎಂದು ತಿಳಿಸಿದ್ದಾರೆ.

ಗುಜರಾತ್‌ನ (Gujarat) ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ದುರಂತಕ್ಕೆ ಸಂಬಂಧಿಸಿದಂತೆ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಭಾರತ ಏರ್‌ಲೈನ್ ಇತಿಹಾಸದಲ್ಲೇ ಇದೊಂದು ದೊಡ್ಡ ದುರಂತವಾಗಿದೆ. ಒಂದು ಮೇಜರ್ ತಾಂತ್ರಿಕ ಸಮಸ್ಯೆಯಿಂದ ದುರಂತ ಸಂಭವಿಸರಬಹುದು. ಆದರೂ ಪ್ರಯಾಣಿಕರನ್ನು ಉಳಿಸಲು ಪೈಲಟ್ ಪ್ರಯತ್ನ ಮಾಡಿರುತ್ತಾರೆ ಎಂದರು.

ಮೊದಲೇ ಗೊತ್ತಿದ್ದರೆ ಟೇಕ್ ಆಫ್ ಮಾಡಲ್ಲ, ಆದರೆ ಇದು ಟೇಕ್ ಆಫ್ ಮಾಡಿದ ಮೇಲೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆಯಾಗಿದೆ. ಯಾವ ರೀತಿ ತಾಂತ್ರಿಕ ಸಮಸ್ಯೆಯಾಗಿದೆ ಎಂದು ಬ್ಲ್ಯಾಕ್‌ಬಾಕ್ಸ್ ತೆಗೆದು ನೋಡಿ, ತನಿಖೆ ಮಾಡಿದರೆ ಗೊತ್ತಾಗುತ್ತದೆ. ಮೇಡೇ ಅಂದರೆ ವಿಮಾನ ತುಂಬಾ ಡೆಂಜರ್‌ನಲ್ಲಿ ಇದೆ ಎಂದರ್ಥ. ಆಗ ಎಟಿಸಿ ಅವರು ಎಲ್ಲಾ ವಿಮಾನಗಳನ್ನು ಹೊರತುಪಡಿಸಿ ಈ ವಿಮಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ತಿಳಿಸಿದರು.

Share This Article