ನಾನ್ಯಾಕೆ ಪತಿ ಮೇಲೆ ಗುಂಡು ಹಾರಿಸಿದೆ: ಮತ್ತಿನಲ್ಲಿ ಶೂಟೌಟ್ ಮಾಡಿದವಳ ಮಾತುಗಳು

Public TV
2 Min Read
ank firing main

ಬೆಂಗಳೂರು: ನನ್ನ ಪ್ರಾಣವನ್ನು ರಕ್ಷಿಸಿಕೊಳ್ಳಲು ನಾನು ಕಾರಿನಲ್ಲೇ ಪತಿ ಸಾಯಿರಾಂ ಮೇಲೆ 3 ಸುತ್ತು ಗುಂಡು ಹಾರಿಸಿದೆ ಎಂದು ಪತ್ನಿ ಹಂಸವೇಣಿ ಸೂರ್ಯ ಸಿಟಿ ಪೊಲೀಸರಲ್ಲಿ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಾಳೆ.

ಶುಕ್ರವಾರ ಬ್ಯಾಂಕ್ ಕೆಲಸಕ್ಕೆಂದು ಪತಿ ಸಾಯಿರಾಂ ಜೊತೆ ಹೊಸೂರಿಗೆ ತೆರೆಳಿದ್ದೆ. ವಾಪಸ್ ಬರುವಾಗ ರೆಸ್ಟೋರೆಂಟ್‍ನಲ್ಲಿ ಪತಿ 6 ಪೆಗ್ ವಿಸ್ಕಿ ಕುಡಿದರೆ 2 ಬಿಯರ್ ಕುಡಿದೆ. ನನ್ನ ಗಂಡ ಯಾವಾಗಲು ಕುಡಿದು ಗಲಾಟೆ ಮಾಡುತಿದ್ದರು, ನಿನ್ನೆಯೂ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಸಾಯಿರಾಂ ಆಂಧ್ರ ಮೂಲದವರಾಗಿದ್ದರೆ, ನಾನು ಬೆಂಗಳೂರಿನವಳೇ ಎಂದು ತಿಳಿಸಿದ್ದಾಳೆ.

ನಮ್ಮಿಬ್ಬರದ್ದು ಶ್ರೀಮಂತ ಕುಟುಂಬವಾಗಿದ್ದು, ಒಟ್ಟಿಗೆ ಕುಡಿಯುತ್ತೇವೆ. ನಾವಿಬ್ಬರು ಪ್ರೀತಿಸಿ 27 ವರ್ಷಗಳ ಹಿಂದೆ ಮದುವೆಯಾಗಿದ್ದೇವೆ. ನಿನ್ನೆ ಕುಡಿದ ಅಮಲಿನಲ್ಲಿ ನನ್ನ ಮೇಲೆ ಪತಿ ಹಲ್ಲೆ ನಡೆಸಿದರು. ನನ್ನ ಬಳಿಯಿದ್ದ ರಿವಾಲ್ವರ್ ಕಿತ್ತುಕೊಂಡು ಮುಖಕ್ಕೆ ಗುದ್ದಿದ್ದರು. ರಿವಾಲ್ವರ್ ಯಾವಾಗಲು ನನ್ನ ಬಳಿಯೇ ಇರುತಿತ್ತು. ಪ್ರಾಣ ರಕ್ಷಿಸಿಕೊಳ್ಳಲು ನಾನು 3 ಸುತ್ತು ಗುಂಡು ಹಾರಿಸಿದೆ ಎಂದು ಆರೋಪಿ ಹಂಸ ಹೇಳಿಕೆ ನೀಡಿದ್ದಾಳೆ.

ಪತ್ನಿಯಿಂದ ಗುಂಡೇಟು ತಿಂದ ಪತಿ ಸಾಯಿರಾಂ ಬೊಮ್ಮಸಂದ್ರ ಸ್ಪರ್ಶ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ವೈದ್ಯರು 48 ಗಂಟೆಗಳ ನಂತರ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಏನಿದು ಪ್ರಕರಣ?
ಹಂಸ ಮತ್ತು ಸಾಯಿರಾಂ ಅತ್ತಿಬೆಲೆ ಸಮೀಪದ ಯಡವನಹಳ್ಳಿ ಗೇಟ್ ಬಳಿಯ ಮ್ಯಾಕ್ಸ್ ಹೋಟೆಲ್‍ನಲ್ಲಿ ಶುಕ್ರವಾರ ಮಧ್ಯಾಹ್ನ ಮದ್ಯಪಾನ ಮಾಡಿದ್ದಾರೆ. ಮದ್ಯಪಾನ ಮಾಡಿದ ಬಳಿಕ ಅಲ್ಲಿಯೇ ಇಬ್ಬರು ಜಗಳವಾಡಿದ್ದು ಹೋಟೆಲ್ ಸಿಬ್ಬಂದಿ ಇಬ್ಬರನ್ನು ಸಮಾಧಾನ ಮಾಡಿ ಕಳುಹಿಸಿದ್ದಾರೆ. ಕುಡಿದ ಮತ್ತಿನಲ್ಲಿ ತಮ್ಮ ಫಾರ್ಚುನರ್ ಕಾರಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗಲೂ ಇಬ್ಬರ ಕಿತ್ತಾಟ ಮುಂದುವರಿದಿದೆ. ಈ ವೇಳೆ ಹಂಸವೇಣಿ ಬಾಯಿಗೆ ಸಾಯಿರಾಂ ಬಲವಾಗಿ ಬಾರಿಸಿದ್ದು ಬಾಯಿತುಂಬ ರಕ್ತ ಹೊರಬಂದಿದೆ. ಹೋಟೆಲ್‍ನಿಂದ ಸ್ವಲ್ಪ ದೂರ ಬರುತ್ತಿದ್ದಂತೆ ಚಂದಾಪುರ ಬಸ್‍ಸ್ಟಾಪ್ ಬಳಿ ಬಂದಾಗ ಸಾಯಿರಾಂ ಹೆಂಡತಿ ಮೇಲೆ ಕೋಪಿಸಿಕೊಂಡು ಕಾರಿನಿಂದ ಇಳಿದು ಬಿಎಂಟಿಸಿ ಬಸ್ ಹತ್ತಿದ್ದಾರೆ.

ಗಂಡ ಬಿಎಂಟಿಸಿ ಬಸ್ ಹತ್ತಿದ್ದಕ್ಕೆ ಕೋಪಗೊಂಡ ಪತ್ನಿ ಹಂಸವೇಣಿ ಕಾರಿನಲ್ಲಿ ಫಿಲ್ಮ್ ಸ್ಟೈಲ್ ನಲ್ಲಿ ಫಾಲೋ ಮಾಡಿಕೊಂಡು ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರ ಗೇಟ್ ಬಳಿ ಬಸ್ ಮುಂದೆ ಬಂದು ಕಾರನ್ನು ನಿಲ್ಲಿಸಿದ್ದಾಳೆ. ಬಸ್ ನಿಂದ ಗಂಡ ಇಳಿದ ಕೂಡಲೇ ಪರವಾನಿಗೆ ಪಡೆದಿದ್ದ ರಿವಾಲ್ವಾರ್ ನಿಂದ ಮೂರು ಸುತ್ತ ಗುಂಡು ಹಾರಿಸಿದ್ದಾಳೆ.

ಈ ವೇಳೆ ಸಹಾಯಕ್ಕೆಂದು ತೆರಳಿದ ಪ್ರಯಾಣಿಕರ ಮೇಲೂ ಸಹ ಹಂಸವೇಣಿ ಗನ್ ತೋರಿಸಿ ಧಮ್ಕಿ ಹಾಕಿದ್ದರಿಂದ ಸ್ಥಳದಲ್ಲಿ ಕೆಲಕಾಲ ಅತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಆಕೆಯ ರಿವಾಲ್ವರ್‍ನೊಂದಿಗೆ ಆಕೆಯನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಹಂಸವೇಣಿ ಮೊದಲು ಚಂದಾಪುರದಲ್ಲಿ ರಿವಾಲ್ವಾರ್ ತೆಗೆದಿದ್ದರಿಂದ ಪ್ರಕರಣ ಸೂರ್ಯಸಿಟಿ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆಯಾಗಿದೆ.

ಗುಂಡಿನ ಮತ್ತಿನಲ್ಲಿದ್ದ ಹಂಸವೇಣಿ ವಿಚಾರಣೆ ವೇಳೆಯಲ್ಲಿ ಸಹ ಪೊಲೀಸರ ಮೇಲೆ ದರ್ಪ ತೋರಿದ್ದು ಏನಾಯಿತು ತಾಯಿ ಎಂದು ಪ್ರಶ್ನಿಸಿದ್ದಕ್ಕೆ, “ನಾನೇನು ನಿಮಗೆ ತಾಯಿನಾ?”ಎಂದು ಕೇಳಿದ್ದಾಳೆ. ಮೇಡಂ ಎಂದು ಕರೆದಿದ್ದಕ್ಕೆ, “ಮೇಡಂ ಎಂದರೆ ನಾನು ನಿಮಗೆ ಪಾಠ ಕಲಿಸಿದ ಗುರುವೇ” ಎಂದು ಪ್ರಶ್ನಿಸಿದ್ದಳು.

ank firing

ank firing 2

Share This Article
Leave a Comment

Leave a Reply

Your email address will not be published. Required fields are marked *