ವಾಷಿಂಗ್ಟನ್: 6 ಜನರನ್ನು ಹೊತ್ತೊಯ್ಯುತ್ತಿದ್ದ ಸೆಸ್ನಾ 414 ವಿಮಾನ ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ (California) ಸ್ಯಾನ್ ಡಿಯಾಗೋ (San Diego) ಬಳಿಯ ಸಾಗರದಲ್ಲಿ ಪತನಗೊಂಡಿದೆ.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (Federal Aviation Administration) ಪ್ರಕಾರ, ಎರಡು ಇಂಜಿನ್ ಹೊಂದಿರುವ ಸೆಸ್ನಾ 414 (Cessna 414) ವಿಮಾನವು ಭಾನುವಾರ (ಮೇ 8) ಮಧ್ಯಾಹ್ನ 12:30ರ ಸುಮಾರಿಗೆ ಟೇಕ್ ಆಫ್ ಆಗಿತ್ತು. ಅದಾದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು.ಇದನ್ನೂ ಓದಿ: ಕಬ್ಬನ್ ಪಾರ್ಕ್‌ಗೆ ಹೋಗ್ತೀರಾ – ಈ ರೂಲ್ಸ್ ತಿಳ್ಕೊಳ್ಳಿ
ಈ ಕುರಿತು ಯುಎಸ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸ್ಯಾನ್ ಡಿಯಾಗೋ ಬಳಿಯ ಕರಾವಳಿ ತೀರದಿಂದ 8 ಕಿ.ಮೀ ದೂರದಲ್ಲಿ ವಿಮಾನ ಪತನಗೊಂಡಿದೆ. ಪಾಯಿಂಟ್ ಲೋಮಾ ಬಳಿಯ 61 ಮೀ. ಆಳದ ಪ್ರದೇಶದಲ್ಲಿ ಅವಶೇಷಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಫ್ಲೈಟ್‌ಅವೇರ್ (Flight Aware) ವೆಬ್‌ಸೈಟ್‌ನಲ್ಲಿ ವಿಮಾನ ಟ್ರ‍್ಯಾಕಿಂಗ್ ಪರಿಶೀಲಿಸಿದಾಗ ಅದು ಫೀನಿಕ್ಸ್‌ಗೆ (Phoenix) ತೆರಳುತ್ತಿತ್ತು ಎಂದು ತೋರಿಸಿದೆ. ಇನ್ನೂ ಈ ಕುರಿತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದೆ.ಇದನ್ನೂ ಓದಿ: Axiom-4 Mission – ಶುಭಾಂಶು ಶುಕ್ಲಾ ಬಾಹ್ಯಾಕಾಶ ಪ್ರಯಾಣ ಮುಂದೂಡಿಕೆ