ತಿರುವನಂತಪುರಂ: ಸರಕು ಹಡಗಿನಲ್ಲಿ (Cargo Ship) ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಕೋಝಿಕ್ಕೋಡ್‌ನ (Kozhikode) ಬೇಪೋರ್ (Beypore) ಕರಾವಳಿಯ ಬಳಿ ನಡೆದಿದೆ. ಬೆಂಕಿಯ ಪರಿಣಾಮ ಹಡಗಿನಲ್ಲಿದ್ದ ಸುಮಾರು 20 ಕಂಟೇನರ್‌ಗಳು ಸಮುದ್ರಕ್ಕೆ ಬಿದ್ದಿದೆ.
12.5 ಮೀಟರ್ ಡ್ರಾಫ್ಟ್ ಹೊಂದಿರುವ 270 ಮೀಟರ್ ಉದ್ದದ ಎಂವಿ ವಾನ್ ಹೈ 503 ಎಂಬ ಹಡಗು ಜೂನ್ 7 ರಂದು ಕೊಲಂಬೊದಿಂದ ಹೊರಟು ಮುಂಬೈಗೆ ಹೋಗುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 650 ಕಂಟೇನರ್‌ಗಳಿದ್ದ ಈ ಹಡಗಿನಲ್ಲಿ ಚೈನೀಸ್, ಮ್ಯಾನ್ಮಾರ್, ಇಂಡೋನೇಷ್ಯಾ ಹಾಗೂ ಥೈಲ್ಯಾಂಡ್‌ಗೆ ಸೇರಿದ 22 ಮಂದಿ ಸಿಬ್ಬಂದಿ ಇದ್ದರು. ಬೆಂಕಿ ಕಾಣಿಸಿಕೊಂಡ ವೇಳೆ 18 ಮಂದಿ ಸಮುದ್ರಕ್ಕೆ ಹಾರಿದ್ದು, ಎಲ್ಲಾ 18 ಮಂದಿಯನ್ನು ರಕ್ಷಿಸಲಾಗಿದೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಇನ್ನು ಘಟನೆಯಲ್ಲಿ ನಾಲ್ವರು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಏರ್‌ಫೋರ್ಸ್ ಒನ್ ಮೆಟ್ಟಿಲ ಮೇಲೆ ಎಡವಿ ಬಿದ್ದ ಟ್ರಂಪ್ – ಎಲ್ರೂ ಕಾಲೆಳಿತದೆ ಕಾಲ ಎಂದ ನೆಟ್ಟಿಗರು!
ಕರಾವಳಿ ಕಾವಲು ಪಡೆ ಮತ್ತು ನೌಕಾಪಡೆಯ ಹಡಗುಗಳು ಘಟನಾ ಸ್ಥಳಕ್ಕೆ ತೆರಳಿದ್ದು, ಹಡಗಿನಲ್ಲಿದ್ದವರ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ. ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಸೊನ್ನೆ ಅಂಕ: ಸಿದ್ದರಾಮಯ್ಯ