3 ವರ್ಷದ ಬಾಲಕಿಯ ಮೇಲೆ ರೇಪ್‌ – UP ಪೊಲೀಸರ ಗುಂಡಿಗೆ ಕಾಮಿ ದೀಪಕ್‌ ಬಲಿ

Public TV
2 Min Read
Lucknow Accused in rape of toddler killed in encounter with UP police near Alambagh border

– ಕೃತ್ಯ ನಡೆದ 24 ಗಂಟೆಯಲ್ಲಿ ಎನ್‌ಕೌಂಟರ್‌

ಲಕ್ನೋ: ತಾಯಿಯ ಜೊತೆ ಮಲಗಿದ್ದ ಮೂರು ವರ್ಷದ ಬಾಲಕಿಯನ್ನು ಅಪಹರಿಸಿ (Kidnap) ಅತ್ಯಾಚಾರಗೈದ (Rape) ಆರೋಪಿಯನ್ನು ಉತ್ತರ ಪ್ರದೇಶ ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ.

ನಗರ ಪೊಲೀಸ್ ಠಾಣೆಗಳಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಆರೋಪಿ ದೀಪಕ್ ವರ್ಮಾ ಪೊಲೀಸ್‌ ಎನ್‌ಕೌಂಟರ್‌ಗೆ (Police Encounter) ಬಲಿಯಾಗಿದ್ದಾನೆ.

ಅಲಂಬಾಗ್ ಮೆಟ್ರೋ ನಿಲ್ದಾಣದ ಬಳಿಯ ಸೇತುವೆಯ ಕೆಳಗೆ ತನ್ನ ತಾಯಿಯೊಂದಿಗೆ ಮಲಗಿದ್ದ ಮೂರು ವರ್ಷದ ಬಾಲಕಿ ಮಲಗಿದ್ದಳು. ಬಾಲಕಿಯನ್ನು ಅಪಹರಿಸಿದ ಬಳಿಕ ದೀಪಕ್ ವರ್ಮಾ ಬೆಳಗ್ಗೆ 3:30ಕ್ಕೆ ಸ್ಕೂಟರ್‌ನಲ್ಲಿ ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

 

ಕೃತ್ಯ ಬೆಳಕಿಗೆ ಬಂದ ಬೆನ್ನಲ್ಲೇ ಆರೋಪಿ ಬಂಧನಕ್ಕೆ ಪೊಲೀಸ್‌ ತಂಡಗಳನ್ನು ರಚಿಸಲಾಗಿತ್ತು. ಅಷ್ಟೇ ಅಲ್ಲದೇ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿತ್ತು.

ಸ್ಕೂಟರ್‌ನ ನೋಂದಣಿ ವಿವರಗಳು ಮತ್ತು ಸುಳಿವು ಆಧರಿಸಿ ಕಂಟೋನ್ಮೆಂಟ್‌ನ ದೇವಿ ಖೇಡಾ ಬಳಿ ಪೊಲೀಸರು ದೀಪಕ್‌ನನ್ನು ತಡೆದು ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆತ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

 

ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಪ್ರಕಟಿಸಿದ್ದಾರೆ.

ಬಾಲಕಿಯ ಖಾಸಗಿ ಭಾಗಗಳಿಗೆ ತೀವ್ರ ಗಾಯಗಳಾಗಿದ್ದು, ಲೋಕಬಂಧು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕಿಯ ಸ್ಥಿತಿ ಗಂಭೀರವಾಗಿದ್ದು ಗಣನೀಯ ಪ್ರಮಾಣದಲ್ಲಿ ರಕ್ತ ಸೋರಿಕೆಯಾಗಿದೆ. ವೈದ್ಯರು ಪ್ಲಾಸ್ಟಿಕ್‌ ಸರ್ಜರಿಯ ಅಗತ್ಯವಿದೆ ಎಂದು ಹೇಳಿದ್ದಾರೆ.

Share This Article