ಕಾಲ್ತುಳಿತದಲ್ಲಿ 11 ಮಂದಿ ಸಾವು – ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?

Public TV
1 Min Read
bengaluru stambede rcb

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತಕ್ಕೆ (Chinnaswamy Stadium Stampede) ಸಿಲುಕಿ ಸಾವನ್ನಪ್ಪಿದ್ದವರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಬೌರಿಂಗ್‌ನಲ್ಲಿ 6 ಹಾಗೂ ವಿಕ್ಟೋರಿಯಾದಲ್ಲಿ 5 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ವೈದ್ಯರ ಮರಣೋತ್ತರ ಪರೀಕ್ಷೆಯಲ್ಲಿ ಮೃತಪಟ್ಟವರ ಸಾವಿಗೆ ಕಾರಣ ಬಯಲಾಗಿದೆ. ಎಲ್ಲರೂ ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿರುವುದು ವರದಿಯಲ್ಲಿ ದೃಢಪಟ್ಟಿದೆ. ಇದನ್ನೂ ಓದಿ: Chinnaswamy Stampede | ಜನರ ಮಧ್ಯೆ ಸಿಲುಕಿ ನನಗೂ ಉಸಿರಾಡಲು ಕಷ್ಟ ಆಯ್ತು: ಚಂದನ್ ಶೆಟ್ಟಿ

bengaluru stambede 1

ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?
ಕೆಲವರು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದರೇ ಇನ್ನೂ ಕೆಲವರು ಕೆಲ ಮೃತರ ಎದೆಯ ಭಾಗದಲ್ಲಿ ಹೆಚ್ಚು ಒತ್ತಡ ಬಿದ್ದು ಮೃತಪಟ್ಟಿದ್ದಾರೆ. ಮತ್ತೆ ಕೆಲವರು ಉಸಿರುಗಟ್ಟುವಿಕೆ ಆರಂಭ ಆಗಿ 15ರಿಂದ 18 ನಿಮಿಷದಲ್ಲಿ ಸಾವನ್ನಪ್ಪಿದ್ದಾರೆ. 13 ವರ್ಷದ ಬಾಲಕಿ ಕೂಡ ಉಸಿರುಗಟ್ಟುವಿಕೆಯಿಂದ ಕೊನೆಯುಸಿರೆಳೆದಿದ್ದಾಳೆ. ಸಾವಿಗೆ ಉಸಿರುಗಟ್ಟುವಿಕೆ ಬಿಟ್ಟರೆ ಬೇರೆ ಯಾವುದೇ ರೀತಿಯ ಅಂಶ ಕಂಡು ಬಂದಿಲ್ಲ. ಇದನ್ನೂ ಓದಿ: ಪೊಲೀಸರು ಅನುಮತಿ ನೀಡದೇ ಇದ್ರೂ ಪಟ್ಟು ಹಿಡಿದು ವಿಜಯೋತ್ಸವ ಆಯೋಜನೆ!

ಇನ್ನು ವಿಕ್ಟೋರಿಯಾ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಯಲ್ಲಿ ಕೂಡ ಇದೇ ವರದಿ ಬಂದಿದೆ. ಇಬ್ಬರು ಉಸಿರುಗಟ್ಟುವಿಕೆಯಿಂದ ಹೃದಯ ಸ್ತಂಭನ ಉಂಟಾಗಿ ಉಸಿರನ್ನು ಚೆಲ್ಲಿದ್ದಾರೆ. ಮತ್ತೊಬ್ಬರಿಗೆ ಉಸಿರುಗಟ್ಟುವಿಕೆ ಜೊತೆಗೆ ಮೂಳೆ ಮುರಿತ ಉಂಟಾಗಿ ಮೃತಪಟ್ಟಿದ್ದು, ಉಳಿದವರು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ – ಇಂದು ಭೂಮಿಕ್ ಅಂತ್ಯಕ್ರಿಯೆ

ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ 9 ಜನರಿಗೆ ಚಿಕಿತ್ಸೆ ಮುಂದುವರಿದಿದೆ. 9 ಜನರ ಪೈಕಿ ಇಬ್ಬರಿಗೆ ಕಾಲು ಮೂಳೆ ಮುರಿದಿದೆ. ಒಬ್ಬರಿಗೆ ತಲೆಗೆ ಗಾಯ ಆಗಿದೆ. ಉಳಿದವರಿಗೆ ಸಣ್ಣಪುಟ್ಟ ಸಮಸ್ಯೆಗಳಾಗಿದೆ. 15 ಜನರಲ್ಲಿ ಆರು ಜನ ಡಿಸ್ಚಾರ್ಜ್ ಆಗಿದ್ದು, 9 ಜನರಿಗೆ ಚಿಕಿತ್ಸೆ ಮುಂದುವರಿದಿದೆ. ಇದನ್ನೂ ಓದಿ: ಮಾತೇ ಬರುತ್ತಿಲ್ಲ, ತುಂಬಾ ದುಃಖವಾಗಿದೆ: ಕಾಲ್ತುಳಿತ ದುರಂತಕ್ಕೆ ಕೊಹ್ಲಿ ಸಂತಾಪ

Share This Article