IPL 2025 – ಫೈನಲ್ ಪಂದ್ಯದ ‘ಲಕ್ಕಿ ಕ್ರಿಕೆಟರ್’ ಹೇಜಲ್‌ವುಡ್

Public TV
2 Min Read
Josh Hazlewood

ಅಹಮದಾಬಾದ್: 18 ವರ್ಷಗಳ ಕಾಯುವಿಕೆ ಕೊನೆಯಾಗಿದೆ. ಕೋಟ್ಯಾಂತರ ಆರ್‌ಸಿಬಿ (RCB) ಅಭಿಮಾನಿಗಳ ಕನಸು ನನಸಾಗಿದೆ. ಈ ಬಾರಿ ಕಪ್ ನಮ್ಮದಾಗಿದೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ (Josh Hazlewood) ಐಪಿಎಲ್ ಫೈನಲ್ (IPL Final) ಪಂದ್ಯದ ಲಕ್ಕಿ ಕ್ರಿಕೆಟರ್ ಎಂದೇ ಗುರುತಿಸಲ್ಪಟ್ಟಿದ್ದಾರೆ. ಜೋಶ್ ಆಡಿದ ಯಾವುದೇ ಪಂದ್ಯಗಳು ಇದುವರೆಗೂ ಸೋತಿಲ್ಲ. ಅದೇ ರೀತಿ ಆರ್‌ಸಿಬಿ ಕೂಡ ಈ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ.

ಹೌದು, ಜೋಶ್ ಹೇಜಲ್‌ವುಡ್ ಇದುವರೆಗೂ ಆಡಿರುವ ಯಾವುದೇ ತಂಡಗಳು ಫೈನಲ್ ಪಂದ್ಯದಲ್ಲಿ ಸೋಲು ಕಂಡಿಲ್ಲ. ಆರ್‌ಸಿಬಿ ತಂಡದ ಪರವಾಗಿ ಫೈನಲ್ ಪಂದ್ಯದಲ್ಲಿ ಆಡುವುದಕ್ಕೂ ಮೊದಲು ಹೇಜಲ್‌ವುಡ್ 6 ಫೈನಲ್ ಪಂದ್ಯದಲ್ಲಿ ಆಡಿದ್ದರು. ಆ 6 ಪಂದ್ಯಗಳಲ್ಲಿಯೂ ಅವರ ತಂಡ ಕಪ್ ಗೆದ್ದಿತ್ತು. 2012ರಲ್ಲಿ ಜೋಶ್ ಹೇಜಲ್‌ವುಡ್ ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಟೂರ್ನಿಯ ಫೈನಲ್ ಪಂದ್ಯ ಆಡಿದ್ದರು. ಸಿಡ್ನಿ ಸಿಕ್ಸರ್ ಪರ ಆಡಿದ್ದ ಜೋಶ್ ಹೇಜಲ್‌ವುಡ್ ಟ್ರೋಫಿ ಗೆದ್ದು ಸಂಭ್ರಮಿಸಿದ್ದರು. ಇದನ್ನೂ ಓದಿ: UnSold ಪ್ಲೇಯರ್‌, ಟೂರ್ನಿ ಅರ್ಧದಲ್ಲೇ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಈಗ ಆರ್‌ಸಿಬಿಯ ಯಶಸ್ವಿ ನಾಯಕ

IPL Chompions

2015ರ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ಪ್ರಮುಖ ಬೌಲರ್ ಆಗಿದ್ದ ಜೋಶ್ ಹೇಜಲ್‌ವುಡ್ ಟ್ರೋಫಿ ಗೆದ್ದು ಬೀಗಿದ್ದರು. 2021ರ ಐಪಿಎಲ್ ಟೂರ್ನಿಯಲ್ಲಿ ಜೋಶ್ ಹೇಜಲ್‌ವುಡ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. 2021ರಲ್ಲಿ ಸಿಎಸ್‌ಕೆ ಟ್ರೋಫಿ ಗೆದ್ದಿತ್ತು. ಇದನ್ನೂ ಓದಿ: IPL Champions | ರಾಜ್ಯದೆಲ್ಲೆಡೆ ಊರ ಹಬ್ಬದಂತೆ ಆರ್‌ಸಿಬಿ ಗೆಲುವು ಸಂಭ್ರಮಿಸಿದ ಫ್ಯಾನ್ಸ್‌

2021ರಲ್ಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜೋಶ್ ಹೇಜಲ್‌ವುಡ್ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು. ಆ ಬಾರಿಯೂ ಆಸ್ಟ್ರೇಲಿಯಾ ಟ್ರೋಫಿ ಗೆದ್ದಿತ್ತು. 2023ರಲ್ಲಿ ಜೋಶ್ ಹೇಜಲ್‌ವುಡ್ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯ ಆಡಿದ್ದು, ಆಸ್ಟ್ರೇಲಿಯಾ ಟ್ರೋಫಿ ಗೆದ್ದಿತ್ತು. ಅದೇ ರೀತಿ ಈ ಬಾರಿ ಜೋಶ್ ಆಡಿದ ಆರ್‌ಸಿಬಿ ತಂಡ ಐಪಿಎಲ್ ಚಾಂಪಿಯನ್ ಪಟ್ಟ ತನ್ನ ಮುಡಿಗೇರಿಸಿಕೊಂಡಿದೆ. ಇದನ್ನೂ ಓದಿ: IPL Champions | ಟ್ರೋಫಿ ಗೆದ್ದ ಬೆನ್ನಲ್ಲೇ ಐಪಿಎಲ್‌ ನಿವೃತ್ತಿ ಬಗ್ಗೆ ಕೊಹ್ಲಿ ಹೇಳಿದ್ದೇನು?

2009, 2011, 2016ರ ಫೈನಲ್ ಪಂದ್ಯಗಳಲ್ಲಿ ಸೋತು ಭಾರೀ ನಿರಾಸೆ ಅನುಭವಿಸಿದ್ದ ಆರ್‌ಸಿಬಿ 4ನೇ ಬಾರಿ ಫೈನಲ್ ಕಂಟಕದಿಂದ ಮುಕ್ತಿ ಪಡೆದಿದೆ. ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಸಂಘಟಿತ ಪ್ರದರ್ಶನ ನೀಡಿ, ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ, ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. 4ನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಟ್ರೋಫಿ ಎತ್ತುವಲ್ಲಿ ಸಫಲವಾದ ಆರ್‌ಸಿಬಿ ರಜತ್ ಪಾಟಿದಾರ್ ನಾಯಕತ್ವದಲ್ಲಿ ಐಪಿಎಲ್ ಇತಿಹಾಸ ಪುಟ ಸೇರಿದೆ. ಇದನ್ನೂ ಓದಿ: ನನ್ನ ಹೃದಯ, ಆತ್ಮ ಬೆಂಗಳೂರಿಗಾಗಿ… ಐಪಿಎಲ್‌ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡ್ತೀನಿ – ಕೊಹ್ಲಿ ಭಾವುಕ

Share This Article