ನಾನು ಬೆಂಗಳೂರಿನ ಅಳಿಯ, ಗೆದ್ದು ಬಾ ಆರ್‌ಸಿಬಿ: ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್‌ ವಿಶ್‌

Public TV
1 Min Read
rishi sunak RCB

ಲಂಡನ್: ಬ್ರಿಟನ್‌ ಮಾಜಿ ಪ್ರಧಾನಿ ಹಾಗೂ ಕರ್ನಾಟಕದ ಅಳಿಯ ರಿಷಿ ಸುನಕ್‌ (Rishi Sunak) ಅವರು ಪಂಜಾಬ್‌ ಕಿಂಗ್ಸ್‌ ವಿರುದ್ಧ ಐಪಿಎಲ್‌ ಫೈನಲ್‌ಗೆ ಆರ್‌ಸಿಬಿ (RCB) ತಂಡಕ್ಕೆ ಬೆಂಬಲ ಘೋಷಿಸಿದ್ದಾರೆ.

ಭಾರತ ಭೇಟಿಯ ಸಂದರ್ಭದಲ್ಲಿ ಮಾತನಾಡಿದ್ದ ಸುನಕ್, ಆರ್‌ಸಿಬಿಯೊಂದಿಗಿನ ನನ್ನ ಬಾಂಧವ್ಯ ಕುಟುಂಬದ ಮೂಲಕ ಶುರುವಾಯಿತು ಎಂದು ತಿಳಿಸಿದ್ದರು. ನಾನು ಬೆಂಗಳೂರಿನ ಕುಟುಂಬದಾಕೆಯನ್ನು ಮದುವೆಯಾಗಿದ್ದೇನೆ. ಆದ್ದರಿಂದ ಆರ್‌ಸಿಬಿ ನನ್ನ ತಂಡ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ ಫಿಲ್ ಸಾಲ್ಟ್

rajat patidar shreyas iyer

ಸುನಕ್‌, ತಮ್ಮ ಅತ್ತೆ-ಮಾವ ಅವರಿಂದ ಮದುವೆಯ ಉಡುಗೊರೆಯಾಗಿ ಆರ್‌ಸಿಬಿ ಜೆರ್ಸಿಯನ್ನು ಪಡೆದಿದ್ದರು. ಅಂದಿನಿಂದ ತಂಡವನ್ನು ಅನುಸರಿಸುತ್ತಿದ್ದಾರೆ. ‘ನಾವು ಬಹಳ ಹಿಂದೆಯೇ ಪಂದ್ಯಗಳಿಗೆ ಹೋಗುತ್ತಿದ್ದೆವು. ನಾನು ಕಚೇರಿಯಲ್ಲಿದ್ದಾಗಲೂ ಸಹ, ಮ್ಯಾಚ್‌ ವೇಳೆ ಆರ್‌ಸಿಬಿ ತಂಡವನ್ನು ಹುರಿದುಂಬಿಸುತ್ತಿದ್ದೆ’ ಎಂದು ನೆನಪಿಸಿಕೊಂಡಿದ್ದಾರೆ.

ಸತತ 18 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿ ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿ ಜಯಸಲು ಎದುರು ನೋಡುತ್ತಿರುವ ಸಂದರ್ಭದಲ್ಲಿ, ಸುನಕ್ ತಂಡದ ಬಗ್ಗೆ ಅದರಲ್ಲೂ ವಿಶೇಷವಾಗಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯ (Virat Kohli) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಿಷಿ ಸುನಕ್‌ ಅವರು ಬ್ರಿಟನ್‌ ಪ್ರಧಾನಿಯಾಗಿದ್ದಾಗ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್‌ ನೀಡಿದ್ದ ಕೊಹ್ಲಿ ಸಹಿ ಮಾಡಿದ್ದ ಬ್ಯಾಟ್‌ ಹಿಡಿದು ‘ಕೊಹ್ಲಿ ಅವರೊಬ್ಬ ಲೆಜೆಂಡ್’ ಎಂದು ಹೇಳಿದ್ದರು. ಇದನ್ನೂ ಓದಿ: ಆರ್‌ಸಿಬಿಗೆ ಶಾಕ್‌ – ಟಿಮ್‌ ಡೇವಿಡ್‌ ಆಡೋದು ಡೌಟ್‌!

ಸುನಕ್‌, ಆರ್‌ಸಿಬಿ ತಂಡದ ಇಂಗ್ಲಿಷ್ ಆಟಗಾರರು ಕೂಡ ದೊಡ್ಡ ಪಾತ್ರ ವಹಿಸುತ್ತಾರೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಫೈನಲ್‌ನಲ್ಲಿ ದೊಡ್ಡ ಕೊಡುಗೆ ನೀಡುತ್ತಾರೆ ಎಂದು ಆಶಿಸಿದ್ದಾರೆ.

Share This Article