ಪಂಜಾಬ್‌ vs ಮುಂಬೈ ಕ್ವಾಲಿಫೈಯರ್ 2 ಪಂದ್ಯಕ್ಕೆ ಮಳೆ ಅಡ್ಡಿ – ಮ್ಯಾಚ್‌ ರದ್ದಾದ್ರೆ ಯಾರಿಗೆ ನಷ್ಟ?

Public TV
1 Min Read
MI vs PBKS rain

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ (MI vs PBKS) ನಡುವಿನ ಐಪಿಎಲ್ 2025 (IPL 2025) ಕ್ವಾಲಿಫೈಯರ್ 2 ಪಂದ್ಯವು ಮಳೆಯಿಂದಾಗಿ ವಿಳಂಬವಾಗಿದೆ.

18 ಕೋಟಿಗೆ ಸೇಲ್‌ ಆಗಿರುವ ಸ್ಪಿನ್ನರ್ ಯಜುವೇಂದ್ರ ಚಾಹಲ್ ತಂಡಕ್ಕೆ ಮರಳಿದ್ದಾರೆ. ಪಿಬಿಕೆಎಸ್ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಂಸದೆ ಜೊತೆ ಎಂಗೇಜ್‌ಮೆಂಟ್‌ ಆಗ್ತಿದ್ದಾರೆ ರಿಂಕು ಸಿಂಗ್‌ – ಕ್ರಿಕೆಟಿಗನ ಕೈ ಹಿಡಿಯೋ ಚೆಲುವೆ ಯಾರು?

shreyas iyer hardik pandya

ಕ್ವಾಲಿಫೈಯರ್ 1 ರಲ್ಲಿ ಪಿಬಿಕೆಎಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು. ಶುಕ್ರವಾರ ನಡೆದ ರೋಮಾಂಚಕ ಎಲಿಮಿನೇಟರ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಗುಜರಾತ್ ಟೈಟಾನ್ಸ್ ಅನ್ನು ಮಣಿಸಿತು.

ಈಗ ಕ್ವಾಲಿಫೈಯರ್‌ 2ನಲ್ಲಿ ಪಂಜಾಬ್‌ ಮತ್ತು ಮುಂಬೈ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್‌ ಪ್ರವೇಶಿಸಿ, ಕಿರೀಟಕ್ಕೆ ಆರ್‌ಸಿಬಿ ವಿರುದ್ಧ ಸೆಣಸಲಿದೆ. ಭಾನುವಾರ 7:30ಕ್ಕೆ ಶುರುವಾಗಬೇಕಿದ್ದ ಪಂದ್ಯವು ಮಳೆಯಿಂದಾಗಿ ವಿಳಂಬವಾಗಿದೆ. ಇದನ್ನೂ ಓದಿ: ಇಂದು ಪಂಜಾಬ್‌-ಮುಂಬೈ ನಡ್ವೆ ಕ್ವಾಲಿಫೈಯರ್‌-2 ಕದನ – ಗೆದ್ದವರೊಂದಿಗೆ ಪ್ರಶಸ್ತಿಗಾಗಿ ಆರ್‌ಸಿಬಿ ಗುದ್ದಾಟ!

ಒಂದು ಗಂಟೆ ಮಳೆ ಮುಂದುವರಿದರೆ ಓವರ್ ಕಡಿತಗೊಳಿಸಲಾಗುತ್ತದೆ. 5 ಓವರ್ ಆಯ್ಕೆ ಕೂಡ ಇದೆ. ಮಳೆಯಿಂದ ಪಂದ್ಯ ರದ್ದಾದರೆ ಮುಂಬೈ ಮನೆಗೆ, ಪಂಜಾಬ್ ಫೈನಲ್‌ಗೆ ಹೋಗಲಿದೆ. ಮಳೆಯಿಂದ ಪಂದ್ಯ ರದ್ದಾದರೆ ಲೀಗ್ ಸುತ್ತಿನಲ್ಲಿ ಹೆಚ್ಚು ರನ್‌‌ರೇಟ್‌ ಹೊಂದಿರುವ ತಂಡ ಕ್ವಾಲಿಫೈ ಆಗಲಿದೆ. ಅಂಕ ಪಟ್ಟಿಯಲ್ಲಿ ಪಂಜಾಬ್ ಟಾಪ್‌ನಲ್ಲಿ ಇರುವುದರಿಂದ ಫೈನಲ್‌ ತಲುಪಲಿದೆ.

Share This Article