‘ದಿಲ್‌ದಾರ್’ ಶ್ರೇಯಸ್ ಮಂಜುಗೆ ವಿಲನ್ ಆದ ‘ಭಜರಂಗಿ’ ಲೋಕಿ

Public TV
1 Min Read
Saurav Lokesh

ನ್ನಡ ಮತ್ತು ಸೌತ್ ಸಿನಿಮಾಗಳಲ್ಲಿ ‘ಭಜರಂಗಿ’ ಲೋಕಿ (Bhajarangi Loki) ಬ್ಯುಸಿಯಾಗಿದ್ದಾರೆ. ಇದೀಗ ‘ಪಡ್ಡೆಹುಲಿ’ ಖ್ಯಾತಿಯ ಶ್ರೇಯಸ್ ಮಂಜು ಮುಂದೆ ವಿಲನ್ ಆಗಿ ಅಬ್ಬರಿಸಿದ್ದಾರೆ. ಸೌರವ್ ಲೋಕೇಶ್ ‘ದಿಲ್‌ದಾರ್’ (Dildar) ಲುಕ್ ರಿವೀಲ್ ಆಗಿದೆ. ಇದನ್ನೂ ಓದಿ:ಕ್ಷಮೆ ಕೇಳದ ಕಮಲ್ ಹಾಸನ್‌ಗೆ ಬ್ಯಾನ್ ಬಿಸಿ..!

Saurav Lokesh 1ಸೌರವ್ ಲೋಕೇಶ್ ಸಿನಿ ಕೆರಿಯರ್‌ನಲ್ಲಿ ವಿಲನ್ ಪಾತ್ರಗಳೇ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು, ಈಗ ಶ್ರೇಯಸ್ ಮಂಜು ನಟನೆಯ ದಿಲ್‌ದಾರ್ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಕಾಲೇಜ್ ಕ್ಯಾಂಪಸ್‌ನಲ್ಲಿ ನಡೆಯುವ ಕಥೆ ಇದಾಗಿದ್ದು, ಮಧು ಜಿ ಗೌಡ ನಿರ್ದೇಶನ ಮಾಡಿದ್ದಾರೆ. ಸದ್ಯ ಕ್ಯಾರೆಕ್ಟರ್ ಟೀಸರ್‌ನಲ್ಲಿ ಸಖತ್ ರಗಡ್ ಆಗಿ ಸೌರವ್ ಕಾಣಿಸಿಕೊಂಡಿದ್ದಾರೆ.

 

View this post on Instagram

 

A post shared by Saurav Lokesh (@sauravlokesh)

ಕನ್ನಡ ಚಿತ್ರಗಳ ಜೊತೆ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ ಚಿತ್ರದಲ್ಲೂ ವಿಲನ್ ಆಗಿ ಅಬ್ಬರಿಸಿದ್ದಾರೆ. ದಿಗ್ಗಜರ ಜೊತೆ ಕನ್ನಡದ ನಟ ಅಭಿನಯಿಸಿದ್ದಾರೆ. ಇದನ್ನೂ ಓದಿ:ಸ್ನಾನ ಮಾಡಿದ ನೀರನ್ನು ಸೋಪ್ ಮಾಡಿ 8 ಡಾಲರ್‌ಗೆ ಮಾರಾಟ ಮಾಡ್ತಿದ್ದಾಳೆ ಸಿಡ್ನಿ ಸ್ವೀನಿ!

ಆಚಾರ್ಯ, ಸಲಾರ್ ಸಿನಿಮಾಗಳಲ್ಲಿ ಭಜರಂಗಿ ಲೋಕಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತೆಲುಗು ಮಾತ್ರವಲ್ಲ, ತಮಿಳಿನಲ್ಲೂ ಅವರಿಗೆ ಅವಕಾಶಗಳು ಅರಸಿ ಬರುತ್ತಿವೆ.

Share This Article