ಅಪ್ಪನಂತೆ ಕುದುರೆ ಸವಾರಿ ಮಾಡಿದ ವಿನೀಶ್ ದರ್ಶನ್- ಫೋಟೋ ವೈರಲ್

Public TV
1 Min Read
darshan 1 1

ಟ ದರ್ಶನ್ (Darshan) ಅವರಂತೆಯೇ ಪುತ್ರ ವಿನೀಶ್‌ಗೆ (Vineesh) ಪ್ರಾಣಿಗಳ ಮೇಲೆ ಪ್ರೀತಿಯಿದೆ. ಅಪ್ಪನಂತೆ ಕುದುರಿ ಸವಾರಿ ಮಾಡಿರುವ ವಿನೀಶ್ ಫೋಟೋ ಇದಕ್ಕೆ ಸಾಕ್ಷಿಯಾಗಿದೆ. ಇದನ್ನೂ ಓದಿ:ಕೊನೆಗೂ `ದಾಸ’ನಿಗೆ ವಿದೇಶಕ್ಕೆ ತೆರಳಲು ಅನುಮತಿ ಕೊಟ್ಟ ಕೋರ್ಟ್

vijayalakshmiದರ್ಶನ್ ಫಾರ್ಮ್‌ಹೌಸ್‌ನಲ್ಲಿ ಕುದುರೆ ಸೇರಿದಂತೆ ಕೆಲ ಪ್ರಾಣಿ, ಪಕ್ಷಿಗಳನ್ನು ಸಾಕಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಎತ್ತಿನ ಗಾಡಿ ಓಡಿಸೋದು, ಕುದುರೆ ಸವಾರಿ ಮಾಡೋದು ಮಾಡ್ತಿರುತ್ತಾರೆ. ಅದರಂತೆ ಈಗ ಪುತ್ರ ವಿನೀಶ್ ಕೂಡ ಕಪ್ಪು ಕುದುರೆ ಮೇಲೆ ಸವಾರಿ ಮಾಡಿದ್ದಾರೆ. ಕುದುರೆ ಸವಾರಿ ಮಾಡೋದು ಕಲಿತು ಫಾರ್ಮ್‌ಹೌಸ್‌ ಬಳಿ ಸುತ್ತಾಡಿದ್ದಾರೆ. ಈ ಫೋಟೋವನ್ನು ವಿಜಯಲಕ್ಷ್ಮಿ (Vijayalakshmi) ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕ್ಷಮೆ ಕೇಳದ ಕಮಲ್ ಹಾಸನ್‌ಗೆ ಬ್ಯಾನ್ ಬಿಸಿ..!

vineesh darshan

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೇಲ್ ಮೇಲೆ ದರ್ಶನ್ ಹೊರಬಂದ್ಮೇಲೆ ಪತಿಯ ವ್ಯವಹಾರವನ್ನು ವಿಜಯಲಕ್ಷ್ಮಿಯವರೇ ನೋಡಿಕೊಳ್ತಿದ್ದಾರೆ. ದರ್ಶನ್‌ಗೆ ಎಲ್ಲೇ ಶೂಟಿಂಗ್ ಇದ್ರೂ ಅಥವಾ ಯಾವುದೇ ಕಾರ್ಯಕ್ರಮ ಆಗಿದ್ರೂ ಪತ್ನಿ ಜೊತೆಯಲ್ಲಿ ಇರುತ್ತಾರೆ. ಬಿಡುವಿನ ಸಮಯದಲ್ಲಿ ಪತ್ನಿ ಮತ್ತು ಮಗನೊಂದಿಗೆ ಸಮಯ ಕಳೆಯುತ್ತಿದ್ದಾರೆ. ಇದು ಫಾನ್ಸ್‌ಗೆ ಖುಷಿ ಕೊಟ್ಟಿದೆ. ಈ ಜೋಡಿ ಮೇಲೆ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

vijayalakshmi 1 2ಇದೆಲ್ಲದರ ನಡುವೆ, ‘ಡೆವಿಲ್’ ಸಿನಿಮಾದ ಚಿತ್ರೀಕರಣವು ಭರದಿಂದ ಸಾಗುತ್ತಿದೆ. ದರ್ಶನ್ ಜೊತೆ ರಚನಾ ರೈ, ವಿನಯ್ ಗೌಡ, ಶರ್ಮಿಳಾ ಮಾಂಡ್ರೆ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ತಾರಕ್ ಡೈರೆಕ್ಟರ್ ಮಿಲನಾ ಪ್ರಕಾಶ್ ಡೆವಿಲ್ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.

Share This Article