ಕರಾವಳಿ ಘಟನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಪಕ್ಷದಿಂದ ಪ್ರತ್ಯೇಕ ತಂಡ: ಡಿ.ಕೆ ಶಿವಕುಮಾರ್

Public TV
1 Min Read
D.K Shivakumar

ಬೆಂಗಳೂರು: ಕರಾವಳಿ ಜಿಲ್ಲೆಯ ( Dakshina Kannada) ರಿವೇಂಜ್ ಮರ್ಡರ್ ಸ್ಥಿತಿಯ ಬಗ್ಗೆ ತಿಳಿಯಲು ಕಾಂಗ್ರೆಸ್ (Congress) ಪಕ್ಷದ ವತಿಯಿಂದಲೇ ಪ್ರತ್ಯೇಕ ತಂಡ ಕಳುಹಿಸಿ ಕೊಡುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಗೆ, ನಾನು ಪಕ್ಷದ ವತಿಯಿಂದ ಒಂದು ಪ್ರತ್ಯೇಕ ಟೀಮ್ ಕಳುಹಿಸುತ್ತೇವೆ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಬ್ದುಲ್‌ ರಹಿಮಾನ್‌ ಹತ್ಯೆ ಕೇಸ್‌ | ಮತ್ತಿಬ್ಬರು ಆರೋಪಿಗಳು ಅರೆಸ್ಟ್‌ – ಹತ್ಯೆಗೆ ಕಾರಣವೇ ಇನ್ನೂ ಸಸ್ಪೆನ್ಸ್!‌

ಎಲ್ಲಾ ಸಮಾಜದ ರಕ್ಷಣೆ ಮಾಡಲು ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅವನ್ನೆಲ್ಲ ತೆಗೆದುಕೊಳ್ಳುತ್ತೇವೆ. ಒಂದು ಟೀಮ್ ಕಳಿಸಲು ವ್ಯವಸ್ಥೆ ಮಾಡ್ತಿದ್ದೇನೆ. ಅಲ್ಲಿ ಶಾಂತಿ ನೆಲೆಸಬೇಕು. ಒಂದು ಸಾವು, ಎರಡು ಸಾವು ಅಂತಲ್ಲ. ಇಡೀ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗೆ ಇದು ಕೊಡಲಿ ಪೆಟ್ಟು ಬೀಳುತ್ತಿದೆ ಇದು ಆತಂಕದ ವಿಚಾರ ಎಂದಿದ್ದಾರೆ.

ವಿಶೇಷವಾಗಿ ನಾನು ಬಿಜೆಪಿ ಫ್ರೆಂಡ್ಸ್‌ಗೆ ಇತರರಿಗೂ ಮನವಿ ಮಾಡುತ್ತೇನೆ, ಅಲ್ಲಿ ಶಾಂತಿ ನೆಲೆಸಬೇಕು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಅಬ್ದುಲ್‌ ರಹಿಮಾನ್‌ ಹತ್ಯೆ ಕೇಸ್‌ – ಮೂವರು ಆರೋಪಿಗಳ ಬಂಧನ

Share This Article