ಮುಸ್ಲಿಮರಿಗೆ 4%ರಷ್ಟು ಗುತ್ತಿಗೆ ಮೀಸಲಿಗೆ ಒಪ್ಪದ ಗವರ್ನರ್ – ರಾಷ್ಟ್ರಪತಿಗಳ ಅಂಗಳಕ್ಕೆ ರವಾನೆ?

Public TV
1 Min Read
Thawar Chand Gehlot

– ಮೂರನೇ ಬಾರಿಗೆ ಪ್ರಸ್ತಾವನೆ ತಿರಸ್ಕೃತ

ಬೆಂಗಳೂರು: ಮುಸ್ಲಿಮರಿಗೆ 4% ಗುತ್ತಿಗೆ ಮೀಸಲಾತಿ (Muslim Contract Reservation) ನೀಡುವ ಸಂಬಂಧ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಬಿಲ್ ರಾಜಭವನದ ಅಂಗಳದಲ್ಲಿ ಜಟಾಪಟಿ ಮುಂದುವರಿದಿದೆ. ರಾಷ್ಟ್ರಪತಿಗಳಿಗೆ ಬಿಲ್ ಕಳುಹಿಸುವುದಾಗಿ ರಾಜ್ಯಪಾಲರಿಂದ (Thawar Chand Gehlot) ಸರ್ಕಾರಕ್ಕೆ ನೋಟ್ ಕಳುಹಿಸಿದ್ದಾರೆ.

ರಾಷ್ಟ್ರಪತಿ ಅಂಗಳದಲ್ಲೇ ಮುಸ್ಲಿಂ ಗುತ್ತಿಗೆ ಮೀಸಲಾತಿ ಬಿಲ್ ಭವಿಷ್ಯ ನಿರ್ಧಾರವಾಗಲಿದ್ದು, ರಾಜ್ಯಪಾಲರು ವರ್ಸಸ್ ಸರ್ಕಾರದ ಹಠ ಹೆಚ್ಚಾಗಿದೆ. ಮೂರನೇ ಬಾರಿ ಬಿಲ್ ಅಂಗೀಕಾರಕ್ಕೆ ಒಪ್ಪದ ರಾಜ್ಯಪಾಲರು ರಾಷ್ಟ್ರಪತಿ ಅಂಗಳಕ್ಕೆ ಕಳುಹಿಸುವ ತೀರ್ಮಾನ ಮಾಡಿದ್ದಾರೆ. ಇದನ್ನೂ ಓದಿ: ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ಗೆ ಲೋಕಪಾಲ್ ಕ್ಲೀನ್ ಚಿಟ್

ಸರ್ಕಾರ ಎರಡು ಬಾರಿ ಸ್ಪಷ್ಟೀಕರಣ ಕಳುಹಿಸಿತ್ತು. ಭಾನುವಾರಷ್ಟೇ ರಾಜ್ಯಪಾಲರನ್ನು ಭೇಟಿಯಾಗಿ ಸಿಎಂ ಸಿದ್ದರಾಮಯ್ಯ ಕೂಡ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಸರ್ಕಾರದ ಸ್ಪಷ್ಟೀಕರಣಕ್ಕೆ ಮನವರಿಕೆಯಾಗದ ರಾಜ್ಯಪಾಲರು, ರಾಷ್ಟ್ರಪತಿಗಳ ಅಂಗಳಕ್ಕೆ ಬಿಲ್ ಕಳುಹಿಸುವುದಾಗಿ ಸರ್ಕಾರಕ್ಕೆ ನೋಟ್ ಕಳುಹಿಸಿದ್ದಾರೆ. ಇದನ್ನೂ ಓದಿ: ಕನ್ನಡದ ಬಗ್ಗೆ ಕಮಲ್ ಹಾಸನ್‌ಗೆ ಪ್ರೀತಿಯಿದೆ, ಯಾಕೆ ಅದನ್ನ ದೊಡ್ಡ ವಿಷಯ ಮಾಡ್ತೀರಾ?: ಶಿವಣ್ಣ

Share This Article