‘ಬಿಗ್ ಬಾಸ್ ಕನ್ನಡ 7’ರ ಖ್ಯಾತಿಯ ದೀಪಿಕಾ ದಾಸ್ (Deepika Das) ಸೋಷಿಯಲ್ ಮೀಡಿಯಾದಲ್ಲಿ ಬ್ರೇಕ್ ತೆಗೆದುಕೊಳ್ಳೋದಾಗಿ ಪೋಸ್ಟ್ ಶೇರ್ ಮಾಡಿ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದಾರೆ. ಇದನ್ನೂ ಓದಿ:ಟೈಗರ್ ಶ್ರಾಫ್ ಜೊತೆ ಜಾನ್ವಿ ಕಪೂರ್ ಡ್ಯುಯೆಟ್
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ, ನಾನು ಸೋಷಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ. ಧನ್ಯವಾದಗಳು ಎಂದು ನಟಿ ಬರೆದುಕೊಂಡಿದ್ದಾರೆ. ದಿಢೀರ್ ಎಂದು ನಟಿ ಹೀಗೆ ಪೋಸ್ಟ್ ಮಾಡಿದ್ದೇಕೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಕೆಲವರು ಕಾಮೆಂಟ್ ಬಾಕ್ಸ್‌ನಲ್ಲಿ ಏನಾದರೂ ಗುಡ್ ನ್ಯೂಸ್ ಕೊಡ್ತಿದ್ದೀರಾ, ತಾಯಿ ಆಗಿದ್ದೀರಾ ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ. ನಟಿಗೆ ಏನಾಯ್ತು ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಇದನ್ನೂ ಓದಿ:ನಿಧಿ ಜೊತೆ ಪವನ್ ಕಲ್ಯಾಣ್ ಮಸ್ತ್ ಡ್ಯಾನ್ಸ್- ‘ಹರಿ ಹರ ವೀರ ಮಲ್ಲು’ ಚಿತ್ರದ ಸಾಂಗ್ ರಿಲೀಸ್
ಈ ವರ್ಷ ಜನವರಿ 31ರಂದು ದೀಪಿಕಾ ದಾಸ್ ನಟನೆಯ ‘ಪಾರು ಪಾರ್ವತಿ’ (Paaru Parvati) ಸಿನಿಮಾ ರಿಲೀಸ್ ಆಗಿತ್ತು. ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ನಾಗಿಣಿ, ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಅವರು ಉದ್ಯಮಿ ದೀಪಕ್ (Deepak) ಜೊತೆ ಕಳೆದ ವರ್ಷ ಮಾರ್ಚ್‌ನಲ್ಲಿ ಹಸೆಮಣೆ ಏರಿದರು. ಕುಟುಂಬಸ್ಥರ ಸಮ್ಮುಖದಲ್ಲಿ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾದರು.