ಸದ್ಯಕ್ಕಿಲ್ಲ ಯೆಲ್ಲೊ ಲೈನ್ ಮೆಟ್ರೋ – ಸಿಗ್ನಲಿಂಗ್ ಸಮಸ್ಯೆಯಿಂದ ದಿನಾಂಕ ಮುಂದೂಡಿದ BMRCL

Public TV
2 Min Read
Yellow line metro

ಬೆಂಗಳೂರು: ಬಹುನೀರಿಕ್ಷಿತ ಯಲ್ಲೋ ಲೈನ್ ಮೆಟ್ರೋ (Yellow Line Metro) ಸಂಚಾರಕ್ಕೆ ಇದೀಗ ಮತ್ತೆ ಅಡ್ಡಿ ಉಂಟಾಗಿದ್ದು, ಸಿಗ್ನಲಿಂಗ್‌ನಲ್ಲಿ ಸಮಸ್ಯೆಯಿಂದಾಗಿ ಉದ್ಘಾಟನೆ ಸದ್ಯಕ್ಕಿಲ್ಲ ಎಂದು ಬಿಎಂಆರ್‌ಸಿಎಲ್ (BMRCL) ಸ್ಪಷ್ಟಪಡಿಸಿದೆ.

Yellow Line Metro 1

ಆರ್‌ವಿ ರೋಡ್‌ನಿಂದ ಬೊಮ್ಮಸಂದ್ರದವರೆಗೆ ಸಂಚರಿಸುವ ಯಲ್ಲೋ ಮಾರ್ಗದ ಮೆಟ್ರೋ ಇದೇ ಜೂನ್‌ಗೆ ಓಪನ್ ಆಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಜನರಿಗೆ ಇದೀಗ ಮತ್ತೆ ನಿರಾಸೆಯುಂಟಾಗಿದೆ. ಸಿಗ್ನಲಿಂಗ್‌ನಲ್ಲಿ ಸಮಸ್ಯೆಯಿಂದಾಗಿ ಇದನ್ನು ಸರಿಪಡಿಸಲು ತಿಂಗಳು ಬೇಕು. ಹೀಗಾಗಿ ಮಾರ್ಗ ಸದ್ಯಕ್ಕೆ ಓಪನ್ ಆಗಲ್ಲ ಎಂದಿದೆ.ಇದನ್ನೂ ಓದಿ: ಭಾರತ ಜಲಯುದ್ಧ; ಇತ್ತ ಅಫ್ಘಾನಿಸ್ತಾನದಿಂದಲೂ ಶಾಕ್‌ ಆತಂಕ, ಪಾಕ್‌ನಲ್ಲಿ ಚೀನಾ ಅಣೆಕಟ್ಟೆ ನಿರ್ಮಾಣ ಯಾಕೆ?

ಹೌದು, ಅನೇಕ ವಿಳಂಬಗಳ ಬಳಿಕ ಹಳದಿ ಮಾರ್ಗದ ಮೆಟ್ರೋವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಲೋಕಾರ್ಪಣೆ ಮಾಡಲು ತಯಾರಿ ನಡೆಸಿತ್ತು. ಮೂರನೇ ರೈಲಿನ ತಪಾಸಣೆ ಕೂಡ ಈಗಾಗಲೇ ಪೂರ್ಣಗೊಂಡಿದೆ. ಮೆಟ್ರೋ ರೋಲಿಂಗ್ ಸ್ಟಾಕ್‌ಗೂ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದೆ. ಅಂತಿಮ ಹಂತದ ಪರಿಶೀಲನೆಗಾಗಿ ಶೀಘ್ರವೇ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಕೂಡ ಬರಬೇಕಿತ್ತು. ಈ ಮಧ್ಯೆ ಉಂಟಾಗಿರುವ ಸಿಗ್ನಲಿಂಗ್ ಸಮಸ್ಯೆಯಿಂದ ಈ ಬಾರಿ ಮತ್ತೆ ಮಾರ್ಗ ಉದ್ಘಾಟನೆ ಮುಂದೂಡಿಕೆಯಾಗಿದೆ.

ಹಳದಿ ಮಾರ್ಗದ ಸಿಗ್ನಲಿಂಗ್ ಕಾರ್ಯದ ಗುತ್ತಿಗೆಯನ್ನು ವಹಿಸಿಕೊಂಡಿರುವ ಸೀಮೆನ್ಸ್ ಇಂಡಿಯಾ ಲಿಮಿಟೆಡ್ ಇತ್ತೀಚೆಗೆ ಸಿಗ್ನಲಿಂಗ್ ವ್ಯವಸ್ಥೆಯ ಪರಿಶೀಲನೆ ನಡೆಸಿತ್ತು. ಆ ಸಂದರ್ಭದಲ್ಲಿ, ಸಾಫ್ಟ್ವೇರ್ ಡೇಟಾಸೆಟ್‌ಗಳಲ್ಲಿ ದೋಷ ಕಂಡುಬಂದಿತ್ತು. ಇದೇ ಕಾರಣದಿಂದ ಕಾರ್ಯಾಚರಣೆಗೆ ಅನುಮೋದನೆ ನೀಡಲಾಗಿಲ್ಲ. ಹಳದಿ ಮಾರ್ಗದ ಮೆಟ್ರೋ ರೈಲು ಚಲನೆಯನ್ನು ಸಂಪೂರ್ಣವಾಗಿ ಸಾಫ್ಟ್‌ವೇರ್‌ನಿಂದ ನಿಯಂತ್ರಿಸಲಾಗುತ್ತದೆ. ಸಣ್ಣ ದೋಷ ಇದ್ದರೂ ವ್ಯವಸ್ಥೆಯ ಸುರಕ್ಷತೆಗೆ ಧಕ್ಕೆಯಾಗುತ್ತದೆ.

Yellow Line Metro 2

ಈ ಸಮಸ್ಯೆ ಬಗೆಹರಿಸಲು ಸುಮಾರು ಒಂದು ತಿಂಗಳಾದರೂ ಸಮಯ ಬೇಕಾಗಬಹುದು. ಒಂದು ತಿಂಗಳ ಸಮಯಾವಾಕಾಶದ ಬಳಿಕ ಎಲ್ಲವು ಸರಿಯಾದರಷ್ಟೇ ಕೇಂದ್ರ ರೈಲ್ವೆ ಸುರಕ್ಷತಾ ಸಮಿತಿ ಪರಿಶೀಲನೆಗೆ ಆಗಮಿಸಲಿದೆ. ಸಮಿತಿ ಬಂದು ಪರಿಶೀಲಿಸಿ ಎಲ್ಲದಕ್ಕೂ ಒಪ್ಪಿಗೆ ನೀಡಿ, ಮಾರ್ಗ ಉದ್ಘಾಟನೆಗೆ ಸುಮಾರು ಎರಡು ತಿಂಗಳು ಅವಕಾಶ ಬೇಕಾಗಬಹದು. ಹಾಗಾಗಿ ಜುಲೈ ಅಂತ್ಯದ ವೇಳೆ ಮಾರ್ಗ ಮುಕ್ತವಾಗುವ ಸಾಧ್ಯತೆ ಇದೆ.ಇದನ್ನೂ ಓದಿ: ಯೋಧರಿಂದಲೇ `ಆಪರೇಷನ್ ಸಿಂಧೂರ’ ಲೋಗೋ ವಿನ್ಯಾಸ

Share This Article